ಕುಯ್ಯಂಗೇರಿ ಶ್ರೀ ಭಗವತಿ ದೇವಾಲಯದ ಅಷ್ಟಬಂದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಕನ್ನಡ್‍ಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಕುಯ್ಯಂಗೇರಿ ಶ್ರೀ ಭಗವತಿ ದೇವಾಲಯದ ಅಷ್ಟಬಂದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಶ್ರದ್ಧಾ ಭಕ್ತಿಯಿಂದ ಶುಕ್ರವಾರ ಸಂಪನ್ನಗೊಂಡಿತು.ಬುಧವಾರ ಹೋಮ, ಹವನ ಸೇರಿದಂತೆ ಧ್ವಜಾರೋಹಣ , ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಗಣಪತಿ ಹೋಮ, ಬಿಂಬ ಜಲದಿವಾಸ, ವಿವಿಧ ಪೂಜಾ ವಿಧಾನಗಳು, ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ಜರುಗಿತು. ಗುರುವಾರ ಗಣಪತಿ ಪ್ರತಿಷ್ಠೆ, ಹೋಮ, ಕಲಶಾರಾಧನೆ, ಆಶ್ಲೇಷ ಬಲಿ, ಬಿಂಬ ಶುದ್ದಿಕಲಶ, ಚಂಡಿಕಾ ಹೋಮ ಸೇರಿದಂತೆ ಪೂಜಾ ವಿಧಿ ವಿಧಾನಗಳು ಜರುಗಿದವು.
ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ದೇವಿ ಪ್ರತಿಷ್ಠಾ ಹೋಮ, ಕಲಶ ಪೂಜೆ ಹಾಗೂ ಶ್ರೀ ಭಗವತಿ ದೇವಿಯ ಬಿಂಬ ಪ್ರತಿಷ್ಠೆ, ಅಷ್ಟಬoಧ ಲೇಪನ, ಹಾಗೂ ಬ್ರಹ್ಮಕಲಶ ಅಭಿಷೇಕ, ಮಹಾಪೂಜೆ, ಫಲ ಮಂತ್ರಾಕ್ಷತೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಪೂಜಾ ವಿಧಿ ವಿಧಾನಗಳನ್ನು ತಂತ್ರಿಗಳಾದ ಎ.ಜಿ ಪಂಡರೀಶ ಅರಳಿತ್ತಾಯ, ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನೆರವೇರಿಸಲಾಯಿತು. ಈ ಸಂದರ್ಭ ಊರಿನ ಮುಖ್ಯಸ್ಥರು, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಕುರಿಕ್ಕಡ ಆರ್. ದೇವಿಪ್ರಸಾದ್ , ಕಾರ್ಯದರ್ಶಿ ತಂಬಂಡ ಎಂ. ಸೋಮಯ್ಯ, ಸದಸ್ಯರು ಭಾಗವಹಿಸಿದ್ದರು.