ಬಿರುನಾಣಿ ಕೊಡವ ಕೇಂದ್ರದಲ್ಲಿ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ

| Published : Sep 17 2024, 12:51 AM IST

ಬಿರುನಾಣಿ ಕೊಡವ ಕೇಂದ್ರದಲ್ಲಿ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಬಿರುನಾಣಿಯ ಮರೆನಾಡ್‌ ಕೊಡವ ಕೇಂದ್ರದಲ್ಲಿ ಕೈಲ್‌ ಪೊಳ್ದ್‌ ಒತ್ತೋರ್ಮೆ ಕೂಟ ಕಾರ್ಯಕ್ರಮ ನಡೆಯಿತು. ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈ ಬುಲೀರ ಹರೀಶ್‌ ಅಪ್ಪಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡವರು ತಮ್ಮ ಜಾಗ ಮಾರಾಟ ಮಾಡದೇ ಕಾಪಾಡಿಕೊಂಡಾಗ ಮಾತ್ರ ನಮ್ಮ ಸಂಸ್ಕೃತಿ, ಪದ್ಧತಿ, ಪರಂಪರೆ ಉಳಿಸಿಕೊಳ್ಳಲು ಸಾಧ್ಯ ಎಂದು ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಮತ್ತು ತಾವಳಗೇರಿ ಮೂoದ್ ನಾಡ್ ನಾಡ್ ತಕ್ಕರಾದ ಕೈಬುಲೀರ ಹರೀಶ್ ಅಪ್ಪಯ್ಯ ಅಭಿಪ್ರಾಯ ಪಟ್ಟರು.

ಬಿರುನಾಣಿಯ ಮರೆನಾಡ್ ಕೊಡವ ಕೇಂದ್ರದಲ್ಲಿ ಆಯೋಜಿಸಿದ್ದ ಕೈಲ್ ಪೊಳ್ದ್ ಒತ್ತೋರ್ಮೆ ಕೂಟ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊಡವ ಜನಸಂಖ್ಯೆ ಹೆಚ್ಚಳ, ಜಾಗ ಮಾರಾಟ ತಡೆಗಟ್ಟುವ, ಜಾಗ ಅತಿಯಾಗಿ ವಾಣಿಜ್ಯ ಹಾಗೂ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಸೇರಿದಂತೆ ಜನಾಂಗದ ಕೆಲವು ಆಂತರಿಕ ವಿಚಾರದ ಬಗ್ಗೆ ಗಂಭೀರವಾಗಿ ಚಿಂತಿಸಿ ಸೂಕ್ತ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಬೇಕಾಗಿದೆ ಎಂದು ಕರೆ ನೀಡಿದರು

ಮತ್ತೊರ್ವ ಮುಖ್ಯ ಅಥಿತಿ ಬೆಂಗಳೂರಿನ ಮರೆನಾಡ್ ಕೊಡವ ಸಂಘದ ಅಧ್ಯಕ್ಷ ಕಾಳಿಮಾಡ ಮುತ್ತಣ್ಣ ಅವರು ಮಾತನಾಡಿ ಬಿರುನಾಣಿಯ ಮರೆನಾಡ್ ಕೊಡವ ಕೇಂದ್ರಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ದಾನಿಗಳ ನೆರವಿನಿಂದ ಯೋಜನೆ ರೂಪಿಸಲು ಸಾಧ್ಯವಿದೆ. ಜನಾಂಗದಲ್ಲಿ ರಾಜಕೀಯ ವೈಷಮ್ಯ ಬಿಟ್ಟು ಜನಾಂಗದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮೊದಲು ಸಾಂಪ್ರದಾಯಿಕವಾಗಿ ಕೋವಿ ಕತ್ತಿಗಳಿಗೆ ಆಯುಧ ಪೂಜೆ ಸಲ್ಲಿಸಲಾಯಿತು.

ಶೂಟಿಂಗ್ ಸ್ಪರ್ಧೆ :ಕಾರ್ಯಕ್ರಮದ ಅಂಗವಾಗಿ 12 ಬೋರ್, ಪಾಯಿಂಟ್ 22, ಏರ್ ಗನ್ ಮೂರು ವಿಭಾಗದಲ್ಲಿ ಆಯೋಜಿಸಿದ್ದ ಶೂಟಿಂಗ್ ಸ್ಪರ್ಧೆಯನ್ನು ಮುಖ್ಯ ಅಥಿತಿ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಉದ್ಘಾಟಿಸಿದರು. ಶೂಟಿಂಗ್ ಸ್ಪರ್ಧೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಶೂಟಿಂಗ್ ಸ್ಪರ್ಧೆ ವಿಜೇತರು : 12 ಬೋರ್ ವಿಭಾಗ : ಚೋನೀರ ಸಜನ್(ಪ್ರ), ಅಜ್ಜಮಾಡ ಕರನ್ (ದ್ವಿ ), ಕೈಬುಲೀರ ಹರೀಶ್ ಅಪ್ಪಯ್ಯ(ತೃ ).

ಪಾಯಿಂಟ್ 22 ವಿಭಾಗ : ಕರ್ತಮಾಡ ಸುಜು (ಪ್ರ), ಕಾಯಪಂಡ ಕಿರಣ್(ದ್ವಿ ), ಕಾಯಪಂಡ ಚಿರಾಗ್ (ತೃ )

ಏರ್ ಗನ್ ವಿಭಾಗ : ದಿಶಾನ್ (ಪ್ರ), ಪ್ರೀಯಾ( ದ್ವಿ ),ಚಿರಾಗ್ ದೇವಯ್ಯ (ತೃ ) ಸ್ಥಾನ ಪಡೆದರು

ಬಿರುನಾಣಿ ಮರೆನಾಡ್ ಕೊಡವ ಕೇಂದ್ರದ ಅಧ್ಯಕ್ಷ ಕುಪ್ಪುಡಿರ ಪೊನ್ನು ಮುತ್ತಪ್ಪ, ಕಾರ್ಯಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಉಪಾಧ್ಯಕ್ಷರಾದ ಅಣ್ಣಳಮಾಡ ಲಾಲ ಅಪ್ಪಣ್ಣ,ಕರ್ತಮಾಡ ಮಿಲನ್ ಮೇದಪ್ಪ, ಕುಪ್ಪಣಮಾಡ ಬೇಬಿ ನಂಜಮ್ಮ,

ಗೌ.ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನೀತ, ಖಜಾಂಚಿ ಕಾಯಪಂಡ ಮಧು ಮೋಟಯ್ಯ ವೇದಿಕೆಯಲ್ಲಿದ್ದರು.