ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ: ಲಕ್ಷಾಂತರ ಶುಲ್ಕ ಕಟ್ಟಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಓದಲು ಸಾಮರ್ಥ್ಯ ಇಲ್ಲ. ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣದ ಶುಲ್ಕ ದುಬಾರಿಯಾಗಿದೆ. ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗೀಕರಣ ನೀತಿಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ ಹೇಳಿದರು.
11ನೇ ದಿನಕ್ಕೆ ಕಾಲಿಟ್ಟ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಸಾಮಾನ್ಯ ಜನಗಳಿಗೆ ಆಸ್ಪತ್ರೆ ಬೇಕು, ಬಡ ಮಕ್ಕಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು. ಅಲ್ಲಿಯವರೆಗೆ ನಿಮ್ಮ ಹೋರಾಟವನ್ನು ಮುಂದುವರೆಸಿ, ನಿಮ್ಮ ಜೊತೆ ನಮ್ಮ ಕಾರ್ಮಿಕ ಸಂಘಟನೆ ಬೆಂಬಲವಿದೆ ಎಂದು ಕರೆ ನೀಡಿದರು.ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ರಾಜ್ಯ ಕಾರ್ಯದರ್ಶಿ ಸೋಮಶೇಖರ ಯಾದಗಿರಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಕಾಲೇಜು ಸರ್ಕಾರದ ಸ್ವಾಧೀನದಲ್ಲಿಯೇ ಆಗಬೇಕು. ಪಿಪಿಪಿ ಅಡಿಯಲ್ಲಿ ತರುತ್ತಿರುವುದನ್ನು ವಿರೋಧಿಸಿ ಹೋರಾಟ ಮಾಡುತ್ತಿರುವುದು ಸಂತಸದ ವಿಷಯ. ಇದಕ್ಕೆ ನಮ್ಮ ರಾಜ್ಯ ಸಮಿತಿಯ ಬೆಂಬಲವಿದೆ ಎಂದರು.
ಚಾಮರಾಜ ನಗರದ ನಳಂದ ವಿಶ್ವವಿದ್ಯಾಲಯದ ಭಂತೆ ಬೋಧಿದತ್ತರು, ಅಂಗನವಾಡಿ ಮತ್ತು ಹಾಸ್ಟಲ್ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕರು ಮಾತನಾಡಿದರು.ಸರ್ಕಾರದ ಧೋರಣೆ ಖಂಡಿಸಿ ಸೆ.29ರಂದು ಕಪ್ಪು ಬಟ್ಟೆ ಪ್ರದರ್ಶನ ನಡೆಯಲಿದೆ ಎಂದು ಹೋರಾಟ ಸಮೀತಿ ತಿಳಿಸಿದೆ. ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನರೆಡ್ಡಿ, ಅನಿಲ ಹೊಸಮನಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ.ಹೆಚ್.ಟಿ, ಮಲ್ಲಿಕಾರ್ಜುನ.ಹೆಚ್.ಟಿ, ಶಿವಬಾಳಮ್ಮ ಕೊಂಡಗೂಳಿ, ರವಿ ಕಿತ್ತೂರ, ದಸ್ತಗೀರ ಉಕ್ಕಲಿ, ಸುರೇಶ ಬಿಜಾಪುರ, ಲಕ್ಷ್ಮಣ ಕಂಬಾಗಿ, ಸಂಗಮೇಶ ಸಗರ, ಭೋಗೇಶ ಸೋಲಾಪುರ, ಗೀತಾ.ಎಚ್ ಭಾಗವಹಿಸಿದ್ದರು.