ಸಂಘದ ಕಚೇರಿಯ ಕಾಮಗಾರಿಗೆ ಇರುವ ಅಡ್ಡಿಗಳಿಗೆ ಇಲಾಖೆಗಳ ಮದ್ಯೆ ಇರುವ ಸಮನ್ವಯದ ಕೊರತೆ ಕಾರಣವಾಗಿದೆ. ಪರಸ್ಪರ ಹೊಂದಾಣಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಅಧಿಕಾರಿಗಳು ಗಮನಹರಿಸಬೇಕು. ಕಟ್ಟಡ ಕಾಮಗಾರಿಗೆ ಶಾಸಕರ ನಿಧಿಯಿಂದ ಐದು ಲಕ್ಷ ರು. ನೀಡುವುದಾಗಿ ತಿಳಿಸಿದರು. ಅಧಿಕಾರಿಗಳಿಗೆ ತಾಲೂಕಿನಲ್ಲಿ ಕೆಲಸ ಮಾಡಲು ಸ್ನೇಹಮಹಿ ವಾತಾವರಣ ಸೃಷ್ಟಿಸಲಾಗಿದೆ ಎಂದರು.

ಸಕಲೇಶಪುರ: ಸಮನ್ವಯದ ಕೊರತೆಯೇ ಸಮಸ್ಯೆಗಳ ಮೂಲ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.ಸೋಮವಾರ ತಾಲೂಕು ನೌಕರರ ಸಂಘದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಂಘದ ಕಚೇರಿಯ ಕಾಮಗಾರಿಗೆ ಇರುವ ಅಡ್ಡಿಗಳಿಗೆ ಇಲಾಖೆಗಳ ಮದ್ಯೆ ಇರುವ ಸಮನ್ವಯದ ಕೊರತೆ ಕಾರಣವಾಗಿದೆ. ಪರಸ್ಪರ ಹೊಂದಾಣಿಕೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವತ್ತ ಅಧಿಕಾರಿಗಳು ಗಮನಹರಿಸಬೇಕು. ಕಟ್ಟಡ ಕಾಮಗಾರಿಗೆ ಶಾಸಕರ ನಿಧಿಯಿಂದ ಐದು ಲಕ್ಷ ರು. ನೀಡುವುದಾಗಿ ತಿಳಿಸಿದರು. ಅಧಿಕಾರಿಗಳಿಗೆ ತಾಲೂಕಿನಲ್ಲಿ ಕೆಲಸ ಮಾಡಲು ಸ್ನೇಹಮಹಿ ವಾತಾವರಣ ಸೃಷ್ಟಿಸಲಾಗಿದೆ ಎಂದರು. ಈ ವೇಳೆ ತಾಲೂಕು ನೌಕರರ ಸಂಘದ ಅಧ್ಯಕ್ಷ ತಮ್ಮಣ್ಣ ಶೆಟ್ಟಿ,ಕಾರ್ಯದರ್ಶಿ ಜಗದೀಶ್, ಗೌರವ ಅಧ್ಯಕ್ಷೆ ಶಾಂತ, ಸಲೀಂ, ಶಶಿ, ಪ್ರವೀಣ್‌ ಕುಮಾರ್, ಕೆಂಚಯ್ಯ ಮುಂತಾದವರಿದ್ದರು.