ಸೆ.4ರಂದು ಮಡಿಲು ತುಂಬುವ ಕಾರ್ಯಕ್ರಮ; ಶಾಸಕರಿಂದ ಸ್ಥಳ ಪರಿಶೀಲನೆ

| Published : Sep 02 2025, 01:00 AM IST

ಸಾರಾಂಶ

ಶ್ರೀರಂಗಪಟ್ಟಣದ ಶ್ರೀನಿಮಿಷಾಂಬ ದೇವಾಲಯದ ಆವರಣದಲ್ಲಿ ಸರ್ಕಾರದಿಂದ ನಡೆಯುವ ಮಡಿಲು ತುಂಬುವ ಕಾರ್ಯಕ್ರಮದ ಹಿನ್ನೆಲೆ ಶಾಸಕ ರಮೇಶ ಬಂಡಿಸಿದ್ದೇಗೌಡ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿನೆ ಮಾಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸರ್ಕಾರದಿಂದ ಸೆ.4ರಂದು ನಡೆಯುವ ಗರ್ಭಿಣಿ ಸ್ತ್ರೀಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯುವ ನಿಮಿಷಾಂಬ ದೇವಸ್ಥಾನದ ಆವರಣದವನ್ನು ಶಾಸಕ ರಮೇಶ್ ಬಂಡಿಸಿದ್ದೇಗೌಡ ಪರಿಶೀಲಿಸಿದರು.

ಗಂಜಾಂನ ಪ್ರಸಿದ್ಧ ಶ್ರೀನಿಮಿಷಾಂಬ ದೇವಾಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಮಾತನಾಡಿದ ಶಾಸಕರು, ಸೆ.4ರಂದು ನಡೆಯುವ ಮಡಿಲು ತುಂಬುವ ಕಾರ್ಯಕ್ರಮಕ್ಕೆ ಆಗಮಿಸುವರಿಗೆ ಕುಳಿತುಕೊಳ್ಳಲು ಆಸನ, ಬೃಹತ್ ಶಾಮಿಯಾನ, ವೇದಿಕೆಗಳ ನಿರ್ಮಿಸಲಾಗುತ್ತಿದೆ. ಅವರಿಗೆ ಯಾವುದೇ ಲೋಪ ಬರದ ನೋಡಿಕೊಳ್ಳಬೇಕು. ಸ್ಥಳೀಯ ಆಶಾ ಕಾರ್ಯಕರ್ತರು ಮಹಿಳೆಯರನ್ನು ಜೋಪಾನವಾಗಿ ವಾಹನಗಳ ಮೂಲಕ ಕರೆತರಲು ಸೂಚಿಸಲಾಗಿದೆ ಎಂದರು.

ಅಂದು ಪುರಸಭೆ ಕಚೇರಿ ಆವರಣದಲ್ಲಿ ತೋಟಗಾರಿಕಾ ಇಲಾಖೆಯಿಂದ ರೈತರಿಗೆ ವಿವಿಧ ಸವಲತ್ತು ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ವಿತರಿಸಲಾಗುವುದು ಎಂದರು.

ಈ ವೇಳೆ ನಿಮಿಷಾಂಬ ದೇವಾಲಯದ ಪ್ರಧಾನ ಅರ್ಚಕ ಸೂರ್ಯನಾರಾಯಣ ಭಟ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

ಅನಾಥಾಶ್ರಮದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಣೆ

ಮದ್ದೂರು:

ಉಳ್ಳವರು ತಮ್ಮ ಹಾಗೂ ಕುಟುಂಬದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಕದಂಬ ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಎಸ್.ಬಿ.ನಾಗರಾಜು ತಮ್ಮ ಮೊಮ್ಮಗಳು ಸಂಸ್ಕೃತಿ 2ನೇ ವರ್ಷದ ಹುಟ್ಟುಹಬ್ಬವನ್ನು ಅನಾಥಾಶ್ರಮದ ಮಕ್ಕಳೊಂದಿಗೆ ಆಚರಿಸಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಾಲೂಕಿನ ವಳಗೆರೆಹಳ್ಳಿಯ ಗುರುದತ್ತ ಆಶ್ರಮದಲ್ಲಿ ಅನಾಥ ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಮೊಮ್ಮಗಳ ಹುಟ್ಟುಹಬ್ಬವನ್ನು ಆಚರಿಸಿ ಸಂಸ್ಕೃತಿ ಲಯನ್ಸ್ ಸಂಸ್ಥೆ ಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಟಿ.ಆರ್.ಕೆಂಗಲ್ ಗೌಡ, ಹೆಚ್.ಸುರೇಶ, ಎಸ್ .ಬಿ.ನಾಗರಾಜು, ಅನಾಥಾಶ್ರಮದ ಮೇಲ್ವಿಚಾರಕಿ ಸುಷ್ಮಾ ಭಾಗವಹಿಸಿದ್ದರು.