ಸಾರಾಂಶ
ಕೆರೆ ಸಂರಕ್ಷಣೆ ಮಾಡುವುದರಿಂದ ಸುತ್ತಮುತ್ತ ಪ್ರದೇಶ ಉತ್ತಮ ವಾತಾವರಣದಿಂದ ಕೂಡಿರುತ್ತದೆಯಲ್ಲದೇ ಪರಿಸರ ಕೂಡ ರಕ್ಷಣೆಯಾಗುತ್ತದೆ.
ಕೆರೆ ಉಳಿಸಿ ಅಭಿಯಾನ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮುಂಡಗೋಡಕೆರೆ ಸಂರಕ್ಷಣೆ ಮಾಡುವುದರಿಂದ ಸುತ್ತಮುತ್ತ ಪ್ರದೇಶ ಉತ್ತಮ ವಾತಾವರಣದಿಂದ ಕೂಡಿರುತ್ತದೆಯಲ್ಲದೇ ಪರಿಸರ ಕೂಡ ರಕ್ಷಣೆಯಾಗುತ್ತದೆ ಎಂದು ಮುಂಡಗೋಡ ಹಿರೇಮಠದ ರುದ್ರಮುನಿಸ್ವಾಮಿಗಳು ಹೇಳಿದರು
ಸೋಮವಾರ ಇಲ್ಲಿಯ ದೈವಜ್ಞ ಕಲ್ಯಾಣ ಮಂಟಪದಲ್ಲಿ ಜೈಭೀಮ್ ಕೆರೆ ಸಂರಕ್ಷಣಾ ಜಾಗೃತಿ ಸಮಿತಿ ಮುಂಡಗೋಡ ವತಿಯಿಂದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕೆರೆ ಉಳಿಸಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಕೆರೆ ಅಣೆಕಟ್ಟು ನಿರ್ಮಾಣವಾಗಿದ್ದು, ಇಂದಿನ ಸರ್ಕಾರಗಳಿಗೆ ಅವುಗಳನ್ನು ನಿರ್ವಹಣೆ ಮಾಡಲಾಗುತ್ತಿಲ್ಲ. ಹಾಗಾಗಿ ರಾಮಕೃಷ್ಣ ಹೆಗಡೆಯರನ್ನು ನಾವಿಂದು ನೆನೆಯಬೇಕಿದ್ದು, ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಹೂಳು ತುಂಬಿಕೊಂಡಿರುವ ಕೆರೆಗಳ ಹೂಳು ತೆಗೆದು ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವ ಮೂಲಕ ಒತ್ತುವರಿದಾರರಿಗೆ ಪರ್ಯಾಯ ಸ್ಥಳಾವಕಾಶ ಮಾಡಿಕೊಡಬೇಕು ಎಂದರು. ಇದರಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜೈಭೀಮ್ ಕೆರೆ ಸಂರಕ್ಷಣಾ ಜಾಗೃತಿ ಸಮಿತಿ ಅಧ್ಯಕ್ಷ ಮಹೇಶ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನಿಲ ವಿತರಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಓಶಿಮಠ, ದಲಿತ ಮುಖಂಡ ಚಿದಾನಂದ ಹರಿಜನ, ಜೈಭೀಮ್ ಕೆರೆ ಸಂರಕ್ಷಣಾ ಜಾಗೃತಿ ಸಮಿತಿ ಉಪಾಧ್ಯಕ್ಷ ಬಸವರಾಜ ಬೋವಿ, ಕಾರ್ಯದರ್ಶಿ ಎಂ. ಮಹೇಶ, ಕುಮಾರ ರಾಥೋಡ, ಪಪಂ ಉಪಾಧ್ಯಕ್ಷೆ ರಹಿಮಾಬಾನು ಕುಂಕೂರ, ಎಲ್.ಎಸ್.ಎಂ.ಪಿ ಸೊಸೈಟಿ ಉಪಾಧ್ಯಕ್ಷ ಸೋಮಲಪ್ಪ ಲಮಾಣಿ, ತಾಪಂ ಮಾಜಿ ಸದಸ್ಯ ಜ್ಞಾನದೇವ ಗುಡಿಯಾಳ, ಪ್ರಕಾಶ ಚಂದಾಪುರ, ಮಾರುತಿ ಲಮಾಣಿ, ರಾಜೆಸಾಬ ಕುಂಕೂರ ಮುಂತಾದವರಿದ್ದರು.;Resize=(128,128))
;Resize=(128,128))