ಹೊಲ, ಗದ್ದೆ ತೋಟಗಳಿಗೆ ನುಗ್ಗುತ್ತಿರುವ ಕೆರೆ ನೀರು

| Published : Oct 25 2024, 12:59 AM IST

ಹೊಲ, ಗದ್ದೆ ತೋಟಗಳಿಗೆ ನುಗ್ಗುತ್ತಿರುವ ಕೆರೆ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಕುದೂರು: ಕುದೂರು ಭೈರವನದುರ್ಗದ ತಪ್ಪಲಿನಲ್ಲಿದ್ದ ಕೆರೆಯನ್ನು ಕೆಎಸ್ಆರ್ ಟಿಸಿ ಡಿಪೋ ಮತ್ತು ಬಸ್ ನಿಲ್ದಾಣದ ಸಲುವಾಗಿ ಕೆರೆಯನ್ನು ನೆಲಸಮ ಮಾಡಿದ್ದರಿಂದ ಇದೀಗ ಕೆರೆ ನೀರು ರೈತರ ಹೊಲ, ಗದ್ದೆ, ತೋಟಗಳಿಗೆ ನುಗ್ಗುತ್ತಿದೆ.

ಕುದೂರು: ಕುದೂರು ಭೈರವನದುರ್ಗದ ತಪ್ಪಲಿನಲ್ಲಿದ್ದ ಕೆರೆಯನ್ನು ಕೆಎಸ್ಆರ್ ಟಿಸಿ ಡಿಪೋ ಮತ್ತು ಬಸ್ ನಿಲ್ದಾಣದ ಸಲುವಾಗಿ ಕೆರೆಯನ್ನು ನೆಲಸಮ ಮಾಡಿದ್ದರಿಂದ ಇದೀಗ ಕೆರೆ ನೀರು ರೈತರ ಹೊಲ, ಗದ್ದೆ, ತೋಟಗಳಿಗೆ ನುಗ್ಗುತ್ತಿದೆ.

ಕೆರೆಯ ಏರಿ ಹೊಡೆದು ಹಾಕುವ ಮುನ್ನ, ಮಳೆ ಬಂದಾಗ ಕೆರೆಗೆ ನೀರು ಬರುತ್ತಿದ್ದುದನ್ನು ಹೇಗೆ ತಡೆಯಬೇಕೆಂದು ಯೋಚನೆ ಮಾಡಲಿಲ್ಲ. ಮತ್ತು ನೀರಿನ ಹರಿವು ಹೇಗೆ ಆಗಬೇಕು ಎಂದು ಯೋಚನೆ ಮಾಡದ ಪರಿಣಾಮ, ಧಾರಾಕಾರವಾಗಿ ಸುರಿದ ಚಿತ್ತೆ ಮಳೆಯ ನೀರು ಕೆರೆಯಲ್ಲಿ ನಿಲ್ಲಲು ಜಾಗವಿಲ್ಲದೆ ಸಿಕ್ಕಸಿಕ್ಕ ಕಡೆ ಹರಿದು ಹೋಯಿತು. ಹೀಗೆ ಹೆಚ್ಚಾದ ನೀರು ಹರಿದ ಪರಿಣಾಮ ತೋಟಗಳಿಗೆ ನುಗ್ಗಿ ಅಕ್ಷರಶಃ ತೋಟಗಳು ಕೆರೆಗಳಂತಾಗಿ ರೈತರು ಪರದಾಡುವಂತಗಾಗಿದೆ.

ಕುದೂರು ಗ್ರಾಮದ ಗಂಗಣ್ಣ, ರಮೇಶ್ ಇವರುಗಳ ತೋಟ ಮತ್ತು ಆ ಸಾಲಿನಲ್ಲಿದ್ದ ಎಲ್ಲಾ ತೋಟ ಹೊಲಗಳಿಗೆ ನೀರು ಹರಿದು ಆ ಭಾಗದ ರೈತರು ತೊಂದರೆ ಆನುಭವಿಸುವಂತಾಗಿದೆ.

ಕೆಎಸ್ಆರ್‌ಟಿಸಿ ಡಿಪೋ ಕಾಮಗಾರಿ ಆರಂಭವಾಗುವ ಮುನ್ನ ಎಚ್ಚೆತ್ತುಕೊಂಡು ಕೆರೆಗೆ ಬರುತ್ತಿದ್ದ ನೀರು ಹೇಗೆ ಮುಂದಕ್ಕೆ ಹರಿದು ಹೋಗಬೇಕು. ಹಾಗೆ ಹೆಚ್ಚಾದ ನೀರು ಹರಿದು ಹೋಗುವಾಗ ಆ ಮಾರ್ಗದ ರೈತರ ಹೊಲ ಗದ್ದೆ ತೋಟಗಳಿಗೆ ತೊಂಂದರೆ ಆಗದಂತೆ ಹರಿದು ಹೋಗುವುದು ಹೇಗೆ ಎಂಬೆಲ್ಲಾ ಮುಂದಾಲೋಚನೆ ಮಾಡಿ ಕಾಮಗಾರಿಯನ್ನು ಆರಂಭ ಮಾಡಬೇಕು ಎಂಬುದು ಗ್ರಾಮಸ್ಥರ ಮನವಿಯಾಗಿದೆ.

24ಕೆಆರ್ ಎಂಎನ್ 5,6.ಜೆಪಿಜಿ

ಕುದೂರು ಬೆಟ್ಟದ ತಪ್ಪಲಿನಿಂದ ಹರಿವ ನೀರು ನಿಲ್ಲಲು ಕೆರೆಯಿಲ್ಲದೆ ಹರಿದ ಪರಿಣಾಮವಾಗಿ ರೈತರ ತೋಟಗಳು ಅಕ್ಷರಶಃ ಕೆರೆಗಳಂತಾಗಿರುವುದು.

ಬಾಕ್ಸ್‌............

ತಿಪ್ಪಸಂದ್ರ ಹೋಬಳಿ ಹತ್ತಾರು ಕೆರೆಗಳು ಭರ್ತಿ

ಕುದೂರು: ಕುದೂರು ತಿಪ್ಪಸಂದ್ರ ಹೋಬಳಿಯ ಹತ್ತಾರು ಕೆರೆಗಳು ತುಂಬಿ ಭರ್ತಿಯಾಗಿ ಹರಿಯುತ್ತಿವೆ. ಶಿವಗಂಗೆ ಬೆಟ್ಟದ ತಪ್ಪಲಿನಿಂದ ಹರಿವ ನೀರು ಶ್ರೀಗಿರಿಪುರ, ಕೆರೆಗಳು ತುಂಬಿ ತುಳುಕುತ್ತಿವೆ. ರಾಷ್ಟ್ರೀಯ ಹೆದ್ದಾರಿ 75 ನಾರಸಂದ್ರ ಕೆರೆ ಭರ್ತಿಯಾಗಿ ಕೋಡಿ ನೀರು ಹರಿದು ನೋಡುಗರ ಕಣ್ಣುಗಳನ್ನು ತಂಪು ಮಾಡುತ್ತಿದೆ. ಕಾಳಾರಿ ಬೆಟ್ದದ ತಪ್ಪಲಿನಿಂದ ಹಿರದ ನೀರು ನಾರಸಂದ್ರ ಕೆರೆಯನ್ನು ಭರ್ತಿ ಮಾಡಿ ಬಿಸ್ಕೂರು ಕೆರೆ ಮಾರ್ಗವಾಗಿ ಕೊನೆಗೆ ಕುಣಿಗಲ್ ಕೆರೆಗೆ ಸೇರುತ್ತದೆ. ಶಿವಗಂಗೆ ಬೆಟ್ಟದ ತಪ್ಪಲಿನಿಂದ ಹರಿವ ನೀರು ಕೂಡಾ ಕುದೂರು ಹೋಬಳಿ ಹಾಗು ತಿಪ್ಪಸಂದ್ರ ಹೋಬಳಿಯ ಕೆರೆಗಳನ್ನು ಭರ್ತಿ ಮಾಡಿಕೊಂಡು ಅದೂ ಕೂಡಾ ಕುಣಿಗಲ್ ಕೆರೆಯಲ್ಲಿ ಮುಕ್ತಾಯವಾಗುತ್ತದೆ.

24ಕೆಆರ್ ಎಂಎನ್ 3.ಜೆಪಿಜಿ

ಮಾಗಡಿ ತಾಲೂಕು ನಾರಸಂದ್ರ ಕೆರೆ ಕೋಡಿಯ ರಮಣೀಯ ದೃಶ್ಯ.

ಬಾಕ್ಸ್‌............

ಕುದೂರು ಗ್ರಾಮದಲ್ಲಿ ಮಳೆಗೆ ಉರುಳಿದ ಮನೆ

ಕುದೂರು: ನಿತ್ಯ ಸುರಿಯುತ್ತಿರುವ ಮಳೆಗೆ ಕುದೂರು ಗ್ರಾಮದಲ್ಲಿ ಹಳೆಯ ಮನೆಗಳು ಉರುಳಿ ಬೀಳುತ್ತಿವೆ.

ಮಾಗಡಿ ತಾಲೂಕು ಶ್ರೀಗಿರಿಪುರ ಗ್ರಾಮದಲ್ಲಿ ಕರಗಯ್ಯ ಎಂಬ ಕೂಲಿ ಕೆಲಸಗಾರನ ಮನೆ ರಾತ್ರಿ ಸುರಿದ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಅವರು ಮನೆಯ ಗೋಡೆ ಬೀಳುವ ಜಾಗದಲ್ಲಿ ಮಲಗಿರಲಿಲ್ಲ.

ಗೋಡೆ ಉರುಳಿ ಬಿದ್ದ ಪರಿಣಾಮವಾಗಿ ಮನೆಯಲಿದ್ದ ರಾಗಿ ಹಾಗೂ ದಿನಸಿ ವಸ್ತುಗಳು ನೀರು ಪಾಲಾಗಿವೆ. ಕೂಲಿ ಕೆಲಸ ನಿರ್ವಹಿಸಿಕೊಂಡು ವೃದ್ದ ದಂಪತಿಗಳು ಜೀವನ ನಡೆಸುತ್ತಿದ್ದಾರೆ. ಅವರ ಜೀವನ ನಿರ್ವಹಣೆಗೆ ಅನುಕೂಲವಾಗಲು ಸರ್ಕಾರ ಅವರಿಗೆ ಪರಿಹಾರ ಒದಗಿಸಿಕೊಡಬೇಕೆಂದು ರಾಮನಹಳ್ಳಿ ಗೋವಿಂದರಾಜು ಮನವಿ ಮಾಡಿದ್ದಾರೆ.

--------------------------

24ಕೆಆರ್ ಎಂಎನ್ 4.ಜೆಪಿಜಿ

ಶ್ರೀಗಿರಿಪುರ ಗ್ರಾಮದಲ್ಲಿ ಕರಗಯ್ಯ ಎಂಬುವರ ಮನೆ ಮಳೆಯ ಕಾರಣದಿಂದಾಗಿ ಗೋಡೆ ಉರುಳಿ ಬಿದ್ದಿರುವುದು.

-----------------------------