ಸಾರಾಂಶ
ಅಜ್ಜನ ಜಾತ್ರೆ ಎಂದ ಕೂಡಲೇ ರೊಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ. ರೊಟ್ಟಿ, ಕುಂಬಳಿಕಾಯಿ ಪಲ್ಲೆ, ಮಾದಲಿ, ಮಿರ್ಚಿ, ಶೇಂಗಾ ಹೋಳಿಗೆ, ಅನ್ನ, ಸಾಂಬಾರ್, ಉಪ್ಪಿನಕಾಯಿ, ಚಟ್ನಿ, ಮಜ್ಜಿಗೆ ಸಾರು ಹೀಗೆ ತರಹೇವಾರಿ ಭೋಜನವನ್ನು ಭಕ್ತರು ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸವಿದರು.
ಕೊಪ್ಪಳ: ಗವಿಸಿದ್ದೇಶ್ವರ ಮಹಾರಥೋತ್ಸವದ ಮರುದಿನ ಭಾನುವಾರವೂ ಮಹಾದಾಸೋಹದಲ್ಲಿ ಲಕ್ಷ ಲಕ್ಷ ಭಕ್ತರು ಪ್ರಸಾದ ಸ್ವೀಕರಿಸಿದ್ದಾರೆ.
ಭಾನುವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಸಿದ್ದರು. ಜಾತ್ರೆಗೆ ಆಗಮಿಸಿದ ಭಕ್ತರು ಮಹಾ ಪ್ರಸಾದ ಸವಿದರು. ಮಹಾ ಪ್ರಸಾದಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸರದಿಯಲ್ಲಿ ನಿಂತು ಪ್ರಸಾದ ಸ್ವೀಕರಿಸಿಲು ತೆರಳಿದರು. ಮಹಾ ಪ್ರಸಾದದ ದ್ವಾರ ಬಾಗಿಲು ಬಳಿ ಸರದಿಯಲ್ಲಿ ನಿಂತು ಪ್ರಸಾದ ಸ್ವೀಕರಿದರು.ಮಾದಲಿ, ಮಿರ್ಚಿ ಸವಿದ ಭಕ್ತರು:ಅಜ್ಜನ ಜಾತ್ರೆ ಎಂದ ಕೂಡಲೇ ರೊಟ್ಟಿ ಜಾತ್ರೆ ಎಂದೇ ಪ್ರಸಿದ್ಧಿ. ರೊಟ್ಟಿ, ಕುಂಬಳಿಕಾಯಿ ಪಲ್ಲೆ, ಮಾದಲಿ, ಮಿರ್ಚಿ, ಶೇಂಗಾ ಹೋಳಿಗೆ, ಅನ್ನ, ಸಾಂಬಾರ್, ಉಪ್ಪಿನಕಾಯಿ, ಚಟ್ನಿ, ಮಜ್ಜಿಗೆ ಸಾರು ಹೀಗೆ ತರಹೇವಾರಿ ಭೋಜನವನ್ನು ಭಕ್ತರು ಗವಿಸಿದ್ದೇಶ್ವರ ಜಾತ್ರೆಯಲ್ಲಿ ಸವಿದರು.ರಾಶಿ ರಾಶಿ ಅನ್ನ:ಮಹಾಪ್ರಸಾದಕ್ಕೆ ಆಗಮಿಸುವ ಭಕ್ತರಿಗೆ ಅನ್ನ ತಯಾರು ಮಾಡಲಾಗಿತ್ತು. ಅನ್ನವನ್ನು ರಾಶಿ ರಾಶಿ ಹಾಕಲಾಗಿತ್ತು. ಹಾಗೆ ಮಾದಲಿಯನ್ನು ಒಂದೆಡೆ ಸಂಗ್ರಹ ಮಾಡಲಾಗಿತ್ತು. ಗವಿಸಿದ್ದೇಶ್ವರ ಮಹಾಪ್ರಸಾದ ತಯಾರಿಕೆಗೆ ನಾನಾ ಗ್ರಾಮಗಳಿಂದ ಅನೇಕ ಭಕ್ತರು ಸ್ವಯಂ ಪ್ರೇರಿತವಾಗಿ ಬಂದು ಅಡುಗೆ ಮಾಡುವಲ್ಲಿ ಭಾಗಿದ್ದರು. ಕೆಲವರು ಅಡುಗೆ ನೀಡಲು ಅಡುಗೆ ತಂಡು ಕೊಡುತ್ತಿದ್ದರು. ಇನ್ನು ಕೆಲವರು ಅಡುಗೆ ಬಡಿಸುತ್ತಿದ್ದರು. ಮಿರ್ಚಿಗಳನ್ನು ಟಂಟಂ ವಾಹನಗಳಲ್ಲಿ ತರಲಾಗುತ್ತಿತ್ತು. ಸಾಂಬಾರನ್ನು ಸುಮಾರು 15ಕ್ಕೂ ಹೆಚ್ಚು ದೊಡ್ಡ ಕೊಳಗದಲ್ಲಿ ಮಾಡಲಾಗಿತ್ತು. ದೊಡ್ಡ ಕೊಳಗಕ್ಕೆ ನಳಗಳನ್ನು ಅಳವಡಿಸಿ, ಸಾಂಬಾರ್ ಉಣಬಡಿಸಲು ತೆಗೆಯಲಾಗುತ್ತಿತ್ತು.