ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಭೂತೋ ಎಂಬಂತೆ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ವಿಶ್ವ ದಾಖಲೆಯಾಗಿ ದಾಖಲಾಗುತ್ತಿದೆ.

ಉಡುಪಿ: ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಭೂತೋ ಎಂಬಂತೆ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮವು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ ನಲ್ಲಿ ವಿಶ್ವ ದಾಖಲೆಯಾಗಿ ದಾಖಲಾಗುತ್ತಿದೆ. ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಒಂದೇ ಗೀತೆಯನ್ನು ಅತೀ ಹೆಚ್ಚುಮಂದಿ ಪಠಿಸಿದ ದಾಖಲೆಯಾಗಿ ಈ ಕಾರ್ಯಕ್ರಮ ದಾಖಲಾಗಿದೆ ಎಂದು ಈ ಗೋಲ್ಡನ್ ಬುಕ್‌ನ ಏಶಿಯಾ ಹೆಡ್ ಡಾ. ಮನೀಶ್ ವಿಷ್ಣೊಯಿ ತಿಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಗೀತೆಯ 15 ಅಧ್ಯಯನವನ್ನು ಏಕಕಾಲದಲ್ಲಿ, ಒಂದೇ ಸ್ಥಳದಲ್ಲಿ ಫಠಿಸಿದ್ದನ್ನು ದಾಖಲೆಗೆ ಪರಿಗಣಿಸಲಾಗಿದೆ. ಹೊರತು ಆನ್‌ಲೈನ್‌ನಲ್ಲಿ ಪಾರಾಯಣದಲ್ಲಿ ಭಾಗವಹಿಸಿದ್ದವರು ಲೆಕ್ಕಕ್ಕೆ ಸಿಗುವುದಗಿಲ್ಲವಾದ್ದರಿಂದ ಅದನ್ನು ಪರಿಗಣಿಸಲಾಗುವುದಿಲ್ಲ ಎಂದವರು ಹೇಳಿದ್ದಾರೆ.ಶುಕ್ರವಾರ ಸಂಜೆಯೇ ಡಾ. ಮನೀಶ್ ವಿಷ್ಣೊಯಿ ದಾಖಲೆಯ ಪ್ರಮಾಣ ಪತ್ರವನ್ನು ಶ್ರೀಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭ ಕಾರ್ಯದರ್ಶಿ ಪ್ರಸನ್ನಾಚಾರ್ಯ ಉಪಸ್ಥಿತರಿದ್ದರು.