ಲಕ್ಷದಿಪೋತ್ಸವ ಮತ್ತು ರಾಮಸೀತಾ ಕಲ್ಯಾಣೋತ್ಸವ

| Published : Dec 15 2024, 02:01 AM IST

ಸಾರಾಂಶ

ಹನುಮ ಜಯಂತಿ ಪ್ರಯುಕ್ತ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಲಕ್ಷದಿಪೋತ್ಸವ ಮತ್ತು ರಾಮಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಕೊರಟಗೆರೆಯಲ್ಲಿ ಅದ್ದೂರಿಯಾಗಿ ನಡೆಯಿತು.

ಕ್ಯಾಮೇನಹಳ್ಳಿ ಶ್ರೀಕ್ಷೇತ್ರದಲ್ಲಿ ಹನುಮ ಜಯಂತಿ । ರಾಜಗೋಪುರ ನಿರ್ಮಾಣಕ್ಕೆ ೧೫ಲಕ್ಷ ಮೀಸಲುಕನ್ನಡಪ್ರಭ ವಾರ್ತೆ ಕೊರಟಗೆರೆಹನುಮ ಜಯಂತಿ ಪ್ರಯುಕ್ತ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಲಕ್ಷದಿಪೋತ್ಸವ ಮತ್ತು ರಾಮಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಅದ್ದೂರಿಯಾಗಿ ನಡೆಯಿತು.ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿಯ ಸುಪ್ರಸಿದ್ದ ಕಮನೀಯ ಕ್ಷೇತ್ರವಾದ ಶ್ರೀಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ದೇವಾಲಯಕ್ಕೆ ವಿಶೇಷ ಹೂವು ಮತ್ತು ಬೆಳಕಿನ ಅಲಂಕಾರ ಮಾಡಲಾಗಿತ್ತು. ಭಕ್ತರಿಂದ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು.ತಹಸೀಲ್ದಾರ್ ಮಂಜುನಾಥ.ಕೆ ಮಾತನಾಡಿ ಕ್ಯಾಮೇನಹಳ್ಳಿ ಶ್ರೀಕ್ಷೇತ್ರದಲ್ಲಿ ಅದ್ಧೂರಿಯಿಂದ ಹನುಮಜಯಂತಿ ಮತ್ತು ಲಕ್ಷದಿಪೋತ್ಸವ ಕಾರ್ಯಕ್ರಮ ನಡೆದಿದೆ. ಪ್ರಸ್ತುತ ವರ್ಷ ರಾಮಸೀತಾ ಕಲ್ಯಾಣ ಮಹೋತ್ಸವ ಕಾರ್ಯಕ್ರಮವು ವಿಶೇಷವಾಗಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದೆ ಎಂದರು.ಆಂಜನೇಯ ದೇವಾಲಯದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಜಿ.ವಿ.ರಾಮಮೂರ್ತಿ ಮಾತನಾಡಿ ಆಂಜನೇಯ ದೇವಾಲಯದ ಅಧ್ಯಕ್ಷರಾಗಿ ಆಯ್ಕೆಮಾಡಿದ ಗೃಹಸಚಿವರಿಗೆ ತುಂಬು ಹೃದಯದ ಧನ್ಯವಾದ. ರಾಜಗೋಪುರ ನಿರ್ಮಾಣಕ್ಕೆ ನಾನೇ ವೈಯಕ್ತಿಕವಾಗಿ ೧೫ಲಕ್ಷ ನೀಡುತ್ತೇನೆ. ದೇವಾಲಯದ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ ಎಂದರು.ಆಂಜನೇಯ ದೇವಾಲಯದ ಪ್ರಧಾನ ಅರ್ಚಕ ರಾಮಚಾರ್ ಮಾತನಾಡಿ ಕಮನೀಯ ಕ್ಷೇತ್ರದಲ್ಲಿ ಹನುಮ ಜಯಂತಿ ಕಾರ್ಯಕ್ರಮವೇ ವಿಶೇಷವಾಗಿ ನಡೆಯುತ್ತೆ. ಭಕ್ತರಿಂದ ದೇವಾಲಯ ಮತ್ತು ಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು. ಶ್ರೀಕ್ಷೇತ್ರಕ್ಕೆ ಪುರಾತನವಾದ ಇತಿಹಾಸವಿದ್ದು ಭಕ್ತರು ಬೇಡಿಕೆ ವರವನ್ನು ಕರುಣಿಸುವ ಸ್ವಾಮಿಗೆ ವಿಶೇಷವಾದ ಶಕ್ತಿಯಿದೆ ಎಂದರು.ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್ಥನಾರಾಯಣ್, ಉಪ ತಹಸೀಲ್ದಾರ್ , ಶಿರಸ್ತೆದಾರ್ ಗೊರವನಹಳ್ಳಿ ವಿಶೇಷ ಅಧಿಕಾರಿ ಕೇಶವಮೂರ್ತಿ, ಪಿಎಸೈ ಚೇತನಗೌಡ, ಡಾ.ಮಲ್ಲಿಕಾರ್ಜುನ್, ಬಿಜೆಪಿ ಮಂಡಲ ಅಧ್ಯಕ್ಷ ಡಾ.ದರ್ಶನ್, ಮಾಜಿ ಅಧ್ಯಕ್ಷ ಪವನಕುಮಾರ್, ಉಮಾಶಂಕರ್, ಶ್ರೀನಿವಾಸ್, ಸತ್ಯನಾರಾಯಣರಾವ್, ಕೇಶವ, ಜಯರಾಮ ರಘುನಂದನ್, ಅರುಣ್, ಜಯರಾಮ್, ಕಾರ್ತಿಕ್, ಮಣಿ, ನವೀನ್, ಚಂದನ್, ಮಂಜುನಾಥ್, ಮನು, ಹೇಮಂತ್, ರಂಗನಾಥ್, ಮುನಿರಾಜು, ನಾರಾಯಣ್, ಸೇರಿದಂತೆ ಇತರರು ಇದ್ದರು.