ಕಷ್ಟ ಎಂಬ ಭ್ರಮೆ ಕಳಚಿದರೆ ಯಶಸ್ಸು ಕೈಹಿಡಿಯುತ್ತದೆ

| Published : Jan 06 2025, 01:01 AM IST

ಸಾರಾಂಶ

ಯುಜಿಸಿ ನೆಟ್ಪರೀಕ್ಷೆಯ ಗುಟ್ಟು ಹಳೆಯ ಪ್ರಶ್ನೆಗಳನ್ನು ಆಗಾಗ್ಗೆ ತಿರುವು ಹಾಕಿ.

ಕನ್ನಡಪ್ರಭ ವಾರ್ತೆ ಮೈಸೂರು

ಕಷ್ಟ ಎನ್ನುವ ಭ್ರಮೆಯನ್ನು ಕಳಚಿದರೆ ಯಶಸ್ಸು ಕೈಹಿಡಿಯುತ್ತದೆ. ನಿರಂತರ ಕಠಿಣ ಪರಿಶ್ರಮದಿಂದ ಅಸಾಧ್ಯವಾದುದನ್ನು ಸಾಧಿಸಬಹುದು. ಯಶಸ್ಸಿಗೆ ಆತ್ಮವಿಶ್ವಾಸ ಮುಖ್ಯ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿ ಕುಲಸಚಿವ ಪ್ರೊ.ಎಂ.ಜಿ. ಮಂಜುನಾಥ್ ತಿಳಿಸಿದರು.ನಗರದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಜ್ಞಾನಬುತ್ತಿ ಸಂಸ್ಥೆಯು ಗುರುವಾರ ಆಯೋಜಿಸಿದ್ದ ಯುಜಿಸಿ ನೆಟ್ಪರೀಕ್ಷಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 1996 ರಲ್ಲಿ ಯುಜಿಸಿ ಪರೀಕ್ಷೆ ಆರಂಭವಾಗಿದ್ದು, ನಾನು ಕೂಡ ಪರೀಕ್ಷೆ ಎದುರಿಸಿ ಅಧ್ಯಾಪಕನಾಗಿ ಆಯ್ಕೆಯಾದೆ ಎಂದರು.ಯುಜಿಸಿ ನೆಟ್ಪರೀಕ್ಷೆಯ ಗುಟ್ಟು ಹಳೆಯ ಪ್ರಶ್ನೆಗಳನ್ನು ಆಗಾಗ್ಗೆ ತಿರುವು ಹಾಕಿ. ಮೊದಲು ಸುಲಭದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರೆ ಸಮಯದ ಮಿತಿಯ ನಡುವೆ ಅತಿ ಹೆಚ್ಚು ಪ್ರಶ್ನೆಗೆ ಉತ್ತರಿಸಲು ಸಾಧ್ಯ. ಯುಜಿಸಿ ಪರೀಕ್ಷೆಯಲ್ಲಿ ಅತಿಹೆಚ್ಚಿನ ಅಂಕ ಬಂದರೆ ಪ್ರತಿ ತಿಂಗಳು ಸುಮಾರು 40 ಸಾವಿರ ಯುಜಿಸಿ ಶಿಷ್ಯವೇತನ 5 ವರ್ಷಗಳ ಕಾಲ ಸಿಗಲಿದೆ. ಈ ಹೊತ್ತು ಯಾವುದೇ ಕೆಲಸಕ್ಕೂ ಇಷ್ಟೊಂದು ಮೊತ್ತದ ಸಂಬಳ ಸಿಗುವುದಿಲ್ಲ. ಇದೇ ಸಮಯದಲ್ಲಿ ಪಿಎಚ್.ಡಿ ಅಧ್ಯಯನದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತಯಾರಿ ನಡೆಸಬಹುದು ಎಂದು ಅವರು ಹೇಳಿದರು.ಯುಜಿಸಿ ನೆಟ್ಅಧ್ಯಯನ ಪುಸ್ತಕ ಬಿಡುಗಡೆಗೊಳಿಸಿದ ಮಹಾಜನ ಕಾಲೇಜು ಪ್ರಾಂಶುಪಾಲೆ, ಮೈಸೂರು ವಿವಿ ಸಿಂಡಿಕೇಟ್ಸದಸ್ಯೆ ಡಾ.ಬಿ.ಆರ್.ಜಯಕುಮಾರಿ ಮಾತನಾಡಿ, ಸಂಪತ್ತನ್ನು ನಾವು ಕಾಪಾಡಬೇಕು ಆದರೆ ವಿದ್ಯೆ ನಮ್ಮನ್ನು ಕಾಪಾಡುತ್ತದೆ. ಸಂಪತ್ತನ್ನು ಅಪಹರಿಸಬಹುದು ಆದರೆ ಜ್ಞಾನವನ್ನು ಕದಿಯಲು ಸಾಧ್ಯವಿಲ್ಲ. ನಮ್ಮ ಒಳಗಿರುವ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊರಗೆ ತರಲು ಸ್ಪರ್ಧೆ ಇರಬೇಕು. ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಅಂತಹ ಕೆಲಸವನ್ನು ಮಾಡುತ್ತವೆ ಎಂದು ತಿಳಿಸಿದರು.ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆ ಇದ್ದರೆ ಪ್ರತಿಫಲವಾಗಿ ಯಶಸ್ಸು ಸಿಗುವುದರಲ್ಲಿ ಯಾವುದೇ ಅನುಮಾನ ಬೇಡ. ಮನಸ್ಸು ಮಾಡಿ, ಕರ್ತವ್ಯನಿಷ್ಠರಾಗಿ, ಕಾದು ನೋಡಿ ಎಂಬ ಮಾತಿನಲ್ಲಿ ಸದಾ ನಂಬಿಕೆಯಿಟ್ಟು ಕೆಲಸ ಮಾಡಿ ಎಂದರು.ಹಿರಿಯ ಸಹಕಾರಿ ವೈ.ಎನ್.ಶಂಕರೇಗೌಡ, ಪ್ರೊ.ಆರ್. ಎನ್.ಪದ್ಮನಾಭ, ಪ್ರೊ.ಎಚ್.ಎಸ್. ಮಲ್ಲಿಕಾರ್ಜುನಶಾಸ್ತ್ರಿ, ಪ್ರೊ.ವಿ. ಜಯಪ್ರಕಾಶ್, ಡಾ.ಕೃ.ಪ. ಗಣೇಶ, ಜೈನಹಳ್ಳಿ ಸತ್ಯನಾರಾಯಣಗೌಡ, ಎಚ್.ಬಾಲಕೃಷ್ಣ, ಕೆ.ವೈ. ನಾಗೇಂದ್ರ, ಕಿರಣ್ಕೌಶಿಕ್, ಯು.ಎಂ. ಶರದ್ ರಾವ್, ಪ್ರೊ.ಎಚ್.ಆರ್.ತಿಮ್ಮೇಗೌಡ, ಡಾ.ಎಸ್.ಬಿ.ಎಂ.ಪ್ರಸನ್ನ, ರೋಹನ್ರವಿಕುಮಾರ್ ಇದ್ದರು.