ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಲಕ್ಷ್ಮೀಶ ಅವರು ನಮ್ಮ ಸಹಕಾರಿ ಸಂಘದಲ್ಲಿ ೧೭೦೦ ಜನ ಶೇರುದಾರರಿದ್ದು ಅದರಲ್ಲಿ ೧೧೦೦ ಜನರಿಗೆ ೮ ಕೋಟಿಯ? ಸಾಲ ಒದಗಿಸಲಾಗಿದೆ. ೩೦ ಸ್ವಸಾಯ ಸಂಘ ಗುಂಪುಗಳಿಗೆ ೯೪ ಲಕ್ಷ ಸಾಲ ನೀಡಲಾಗಿದೆ. ಸಕಾಲಕ್ಕೆ ಮರುಪಾವತಿಸುವ ಸದಸ್ಯರಿಗೆ ಹೆಚ್ಚುವರಿ ಸಾಲ ನೀಡುವ ಸಾಧ್ಯತೆ ಇದ್ದು ಶಾಸಕರಾದ ರೇವಣ್ಣನವರ ಸಹಕಾರ ಹಾಗೂ ವಿಧಾನ ಪರಿ?ತ್ ಸದಸ್ಯರಾದ ಸೂರಜ್ ರೇವಣ್ಣನವರ ಸಹಕಾರದಿಂದ ಇನ್ನೂ ಹೆಚ್ಚಿನ ಸಲಹೆಗಳು ರೈತರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಬರಗೂರು ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಡಿ.ಕೆ. ಲಕ್ಷ್ಮೀಶ ಆಯ್ಕೆಯಾಗಿದ್ದಾರೆ.
ಬಿ.ಪಿ. ಹರೀಶ ಅವರು ತೆರವು ಮಾಡಿದ್ದ ಸ್ಥಾನಕ್ಕೆ ಈ ದಿನ ನಡೆದ ಚುನಾವಣೆಯಲ್ಲಿ ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಡಿ.ಕೆ. ಲಕ್ಷ್ಮೀಶ್ ಒಬ್ಬರೇ ಅರ್ಜಿ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀಶವರನ್ನು ನಿರ್ದೇಶಕರು ಹಾಗೂ ಸ್ನೇಹಿತರು ಬಂಧುಗಳು ಅಭಿನಂದಿಸಿದರು.ಅಧಿಕಾರ ವಹಿಸಿಕೊಂಡ ನಂತರ ಮಾತನಾಡಿದ ಲಕ್ಷ್ಮೀಶ ಅವರು ನಮ್ಮ ಸಹಕಾರಿ ಸಂಘದಲ್ಲಿ ೧೭೦೦ ಜನ ಶೇರುದಾರರಿದ್ದು ಅದರಲ್ಲಿ ೧೧೦೦ ಜನರಿಗೆ ೮ ಕೋಟಿಯ? ಸಾಲ ಒದಗಿಸಲಾಗಿದೆ. ೩೦ ಸ್ವಸಾಯ ಸಂಘ ಗುಂಪುಗಳಿಗೆ ೯೪ ಲಕ್ಷ ಸಾಲ ನೀಡಲಾಗಿದೆ. ಸಕಾಲಕ್ಕೆ ಮರುಪಾವತಿಸುವ ಸದಸ್ಯರಿಗೆ ಹೆಚ್ಚುವರಿ ಸಾಲ ನೀಡುವ ಸಾಧ್ಯತೆ ಇದ್ದು ಶಾಸಕರಾದ ರೇವಣ್ಣನವರ ಸಹಕಾರ ಹಾಗೂ ವಿಧಾನ ಪರಿ?ತ್ ಸದಸ್ಯರಾದ ಸೂರಜ್ ರೇವಣ್ಣನವರ ಸಹಕಾರದಿಂದ ಇನ್ನೂ ಹೆಚ್ಚಿನ ಸಲಹೆಗಳು ರೈತರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷರಾದ ಜಯರಾಮ್ ನಿರ್ದೇಶಕರಾದ ಬಿ. ಆರ್. ನಾರಾಯಣಸ್ವಾಮಿ, ಸಿ.ಎಸ್. ನಾಗೇಶ, ಬಿ.ಪಿ. ಹರೀಶ, ಹೇಮಕುಮಾರ್, ಬಿ ಸಿ ರಾಜು, ಮಂಜುನಾಥ, ಮಂಜಮ್ಮ ಸುನಿತ, ಮಣಿಕಂಠ, ಸಹಕಾರಿ ಸಂಘದ ಮೇಲ್ವಿಚಾರಕರಾದ ಅಭಿಲಾಶ್, ಮಧು ಉಪಸ್ಥಿತರಿದ್ದರು.