ಹೊಸಕೋಟೆ: ತಾಲೂಕಿನ ಸೂಲಿಬೆಲೆ ಬಳಿ ಗಂಗಾಮತಸ್ಥ ಸಮುದಾಯ ಭವನಕ್ಕೆ 1.10 ಎಕರೆ ಸ್ಥಳ ಗುರುತಿಸಿದ್ದು ಮುಂದಿನ ಅಂಬಿಗರ ಚೌಡಯ್ಯ ಜಯಂತಿ ವೇಳೆಗೆ ಭವನ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೆಗೌಡ ತಿಳಿಸಿದರು.

ಹೊಸಕೋಟೆ: ತಾಲೂಕಿನ ಸೂಲಿಬೆಲೆ ಬಳಿ ಗಂಗಾಮತಸ್ಥ ಸಮುದಾಯ ಭವನಕ್ಕೆ 1.10 ಎಕರೆ ಸ್ಥಳ ಗುರುತಿಸಿದ್ದು ಮುಂದಿನ ಅಂಬಿಗರ ಚೌಡಯ್ಯ ಜಯಂತಿ ವೇಳೆಗೆ ಭವನ ನಿರ್ಮಾಣಕ್ಕೆ ಭೂಮಿಪೂಜೆ ಮಾಡಲಾಗುವುದು ಎಂದು ಶಾಸಕ ಶರತ್ ಬಚ್ಚೆಗೌಡ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ಅವರು ಸಮಾಜ ಸುಧಾರಣೆಗೆ ಶ್ರಮಿಸಿದ ಬಸವಣ್ಣನವರ ಸಮಕಾಲೀನರು. ಸಮುದಾಯದ ಪ್ರತಿಯೊಬ್ಬರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.

ನಗರಸಭೆ ಸದಸ್ಯ ಗೌತಮ್ ಮಾತನಾಡಿ, ಸರಳ ಕೀರ್ತನೆ, ತತ್ವ ಪದಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಅಂಬಿಗರ ಚೌಢಯ್ಯ ಅವರು ಬಸವಣ್ಣನವರ ಅನುಭವ ಮಂಟಪ ಸ್ಥಾಪನೆಗೆ ಶ್ರಮಿಸಿದವರು. ಇವರ ಆದರ್ಶಗಳನ್ನು ಇಂದಿನ ಯುವ ಸಮುದಾಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಈ ವೇಳೆ ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ಮುನಿಯಪ್ಪ, ಪೌರಾಯುಕ್ತ ನೀಲಲೋಚನ ಪ್ರಭು, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಸಿ.ಜಯರಾಜ್, ವಿಜಯ್ ಕುಮಾರ್, ಸಮುದಾಯದ ಮುಖಂಡರಾದ ವೇಣುಗೋಪಾಲ್, ನಾಗರಾಜ್, ಪ್ರದೀಪ್, ಕೃಷ್ಣ, ಮಂಜುನಾಥ, ಸುಬ್ಬಣ್ಣ, ಮುನಿರಾಜು, ಜೈ ಕುಮಾರ್ ಇತರರು ಹಾಜರಿದ್ದರು.

ಫೋಟೋ : 21 ಹೆಚ್ ಎಸ್ ಕೆ 1

ಹೊಸಕೋಟೆ ನಗರದ ಕುರಬರಪೇಟೆಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಪ್ರಯುಕ್ತ ಶಾಸಕ ಶರತ್ ಬಚ್ಚೇಗೌಡ ಅಂಬಿಗರ ಚೌಡಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.