ಜಮೀನು ವಿವಾದ: ತಮ್ಮನನ್ನು ಕೊಂದ ಅಣ್ಣ

| Published : Oct 04 2025, 12:00 AM IST

ಸಾರಾಂಶ

ತುರುವೇಕೆರೆ: ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಸಹೋದರರ ನಡುವೆ ನಡೆದ ಹೊಡೆದಾಟದಲ್ಲಿ ತಮ್ಮನನ್ನು ಅಣ್ಣ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಬ್ಯಾಲಹಳ್ಳಿಯಲ್ಲಿ ನಡೆದಿದೆ

ತುರುವೇಕೆರೆ: ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಸಹೋದರರ ನಡುವೆ ನಡೆದ ಹೊಡೆದಾಟದಲ್ಲಿ ತಮ್ಮನನ್ನು ಅಣ್ಣ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಬ್ಯಾಲಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಮಾಯಸಂದ್ರ ಹೋಬಳಿಯ ಬ್ಯಾಲಹಳ್ಳಿಯಲ್ಲಿ ಜಮೀನಿನ ವಿವಾದದ ಹಿನ್ನೆಲೆಯಲ್ಲಿ ಅಣ್ಣ ಕೃಷ್ಣಪ್ಪ ಎಂಬುವವರು ಒಡಹುಟ್ಟಿದ ತಮ್ಮ ಶ್ರೀನಿವಾಸ್ ನನ್ನು ಮಚ್ಚಿನಿಂದ ಹೊಡೆದು ಕೊಲೆಗೈದಿದ್ದಾರೆ.ಶ್ರೀನಿವಾಸ್ ತನ್ನ ತೋಟಕ್ಕೆ ತೆರಳುವಾಗ ದಾರಿ ಮಧ್ಯೆ ಕೃಷ್ಣಪ್ಪ ಮತ್ತು ಆತನ ಮಗ ಪ್ರಮೋದ ಸಿಕ್ಕಿದ್ದಾರೆ. ಆ ವೇಳೆ ಶ್ರೀನಿವಾಸ್‌ ಮತ್ತು ಕೃಷ್ಣಪ್ಪನವರ ನಡುವೆ ಎಂದಿನಂತೆ ಜಮೀನಿನ ವಿವಾದದ ಬಗ್ಗೆ ಜೋರು ಮಾತುಕತೆ ಆಡಿದ್ದಾರೆ. ಆ ವೇಳೆ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಅಣ್ಣ ಕೃಷ್ಣಪ್ಪ (65) ಮತ್ತು ಈತನ ಮಗ ಪ್ರಮೋದ (45) ಈರ್ವರೂ ಶ್ರೀನಿವಾಸ್ (60) ನನ್ನು ಮಚ್ಚಿನಿಂದ ಹೊಡೆದಿದ್ದಾರೆ. ತೀವ್ರವಾಗಿ ಪೆಟ್ಟು ಬಿದ್ದ ಕಾರಣ ಹೆಚ್ಚು ರಕ್ತ ಸ್ರಾವವಾಗಿ ಶ್ರೀನಿವಾಸ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ಥಳಕ್ಕೆ ಬಂದ ತುರುವೇಕೆರೆ ಸಿಪಿಐ ಲೋಹಿತ್, ಪಿಎಸ್.ಐ ಮೂರ್ತಿ ಪರಿಶೀಲನೆ ನಡೆಸಿದರು. ಆರೋಪಿಗಳಾದ ಕೃಷ್ಣಪ್ಪ ಮತ್ತು ಆತನ ಮಗ ಪ್ರಮೋದ್‌ ನನ್ನು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ.