ದಲಿತರ ಭೂಮಿಯನ್ನು ಅತಿಕ್ರಮಣವಾಗಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಕೆಲವರು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಹಲವಾರು ವರ್ಷಗಳಿಂದ ನಾವು ಕೂಡ ಭೂಮಿ ಉಳಿಮೆ ಮಾಡುತ್ತಿದ್ದೇವೆ. ಇದನ್ನು ಕೂಲಂಕುಶವಾಗಿ ಪರಿಶೀಲಿಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಬಳಿ ಇರುವಂತಹ ದಾಖಲಾತಿಗಳನ್ನು ತೆಗೆದುಕೊಂಡು ಆಯೋಗಕ್ಕೆ ಬರುವಂತೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಕುಣಿಗಲ್
ತಾಲೂಕಿನ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ಇರುವ ಲಕ್ಷ್ಮಿ ನರಸಿಂಹಯ್ಯ ಎಂಬುವರಿಗೆ ಸೇರಿದ ಭೂಮಿಯನ್ನು ಅವರ ಹೆಸರಿಗೆ ಪೋಡಿ, ಚೆಕ್ ಬಂದಿ ಮಾಡಿಕೊಡಲು ಸರ್ಕಾರ ಉದಾಸೀನತೆ ಮಾಡುತ್ತಿದೆ ಹಾಗೂ ಹಲವಾರು ಇತರ ಮೇಲ್ವರ್ಗದವರು ಅತಿಕ್ರಮಣವಾಗಿ ವಶಪಡಿಸಿಕೊಂಡಿದ್ದಾರೆ ಎಂದು ಆಯೋಗಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಎಸ್‌ಸಿ ಎಸ್‌ಟಿ ಆಯೋಗದ ಅಧ್ಯಕ್ಷರಾದ ಮೂರ್ತಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.ಸ್ಥಳಕ್ಕೆ ಬಂದ ಆಯೋಗದ ಅಧ್ಯಕ್ಷರು ಹಲವಾರು ದಾಖಲಾತಿಗಳನ್ನು ಪರಿಶೀಲನೆ ಮಾಡಿದರು. ತಹಸೀಲ್ದಾರ್ ಸಭೆಗೆ ಬಾರದ ಹಿನ್ನೆಲೆಯಲ್ಲಿ ದೂರವಾಣಿ ಮುಖಾಂತರ ಮಾತನಾಡಿ ಆಯೋಗದ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಜೊತೆ ಸೇರಿ ವ್ಯವಸ್ಥೆ ಸರಿಪಡಿಸುವಂತೆ ಸೂಚನೆ ನೀಡಿದರು. ಮುಂದಿನ ತನಿಖೆಗಾಗಿ ಅವಶ್ಯಕತೆ ಇರುವಂತಹ ದಾಖಲಾತಿಗಳನ್ನು ತೆಗೆದುಕೊಂಡು ಆಯೋಗಕ್ಕೆ ಖುದ್ದಾಗಿ ಬಂದು ಸಲ್ಲಿಕೆ ಮಾಡುವಂತೆ ಸೂಚಿಸಿದರು.ದಲಿತರ ಭೂಮಿಯನ್ನು ಅತಿಕ್ರಮಣವಾಗಿ ವಶಪಡಿಸಿಕೊಂಡಿದ್ದಾರೆ ಎನ್ನಲಾದ ಕೆಲವರು ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಹಲವಾರು ವರ್ಷಗಳಿಂದ ನಾವು ಕೂಡ ಭೂಮಿ ಉಳಿಮೆ ಮಾಡುತ್ತಿದ್ದೇವೆ. ಇದನ್ನು ಕೂಲಂಕುಶವಾಗಿ ಪರಿಶೀಲಿಸಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಬಳಿ ಇರುವಂತಹ ದಾಖಲಾತಿಗಳನ್ನು ತೆಗೆದುಕೊಂಡು ಆಯೋಗಕ್ಕೆ ಬರುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಓಂ ಪ್ರಕಾಶ್, ಸಿಪಿಐ ನವೀನ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಆಯೋಗದ ಸದಸ್ಯರು ಸಮಾಜ ಕಲ್ಯಾಣ ಸಿಬ್ಬಂದಿ ಅಧಿಕಾರಿಗಳು ಇದ್ದರು.