ಸಾರಾಂಶ
ಚಿಕ್ಕಮಗಳೂರು, ನಗರದ ಹನುಮಂತಪ್ಪ ವೃತ್ತದಲ್ಲಿರುವ ನಲ್ಲೂರು ಮಠ ಮತ್ತು ಜಾಮಿಯಾ ಮಸೀದಿ ಸಮಿತಿ ನಡುವಿನ ವಿವಾದಿತ ಜಾಗದಲ್ಲಿರುವ ಅಂಗಡಿಗಳನ್ನು ಮಸೀದಿ ಸಮಿತಿ ಮಂಗಳವಾರ ಬೆಳಗ್ಗೆ ಏಕಾಏಕಿ ತೆರವಿಗೆ ಮುಂದಾಗಿ ಕಟ್ಟಡ ಮತ್ತು ಪೀಠೋಪಕರಣಗಳನ್ನು ಹಾನಿ ಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಜಾಮಿಯಾ ಮಸೀದಿ ಹಾಗೂ ನಲ್ಲೂರು ಮಠದ ನಡುವೆ ಭೂ ವಿವಾದ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಗರದ ಹನುಮಂತಪ್ಪ ವೃತ್ತದಲ್ಲಿರುವ ನಲ್ಲೂರು ಮಠ ಮತ್ತು ಜಾಮಿಯಾ ಮಸೀದಿ ಸಮಿತಿ ನಡುವಿನ ವಿವಾದಿತ ಜಾಗದಲ್ಲಿರುವ ಅಂಗಡಿಗಳನ್ನು ಮಸೀದಿ ಸಮಿತಿ ಮಂಗಳವಾರ ಬೆಳಗ್ಗೆ ಏಕಾಏಕಿ ತೆರವಿಗೆ ಮುಂದಾಗಿ ಕಟ್ಟಡ ಮತ್ತು ಪೀಠೋಪಕರಣಗಳನ್ನು ಹಾನಿ ಪಡಿಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಬೆಳ್ಳಂಬೆಳಿಗ್ಗೆ ಹಲವು ಮಂದಿ ಏಕಾಏಕಿ ತಾಲೂಕು ಕಚೇರಿ ಎದುರಿನ ಬಡಾ ಮಕಾನ್ ಆವರಣದಲ್ಲಿರುವ ಅಂಗಡಿ ಗೋಡೆ ಗಳನ್ನು ಹಾನಿಪಡಿಸಿ ಕಟ್ಟಡ ತೆರವಿಗೆ ಮುಂದಾಗಿದ್ದು, ಈ ವೇಳೆ ಕಟ್ಟಡದಲ್ಲಿದ್ದ ಹೋಟೆಲ್, ಜ್ಯುವೆಲ್ಲರಿ ಶಾಪ್ ಇನ್ನಿತರೆ ಅಂಗಡಿಗಳ ಪೀಠೋಪಕರಣಗಳು ಹಾನಿಗೀಡಾಗಿವೆ.ವಿಚಾರ ತಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ನೆಲ್ಲೂರು ಮಠದ ಕುಟುಂಬಸ್ಥರು ಮಸೀದಿ ಸಮಿತಿಯವರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಎರಡೂ ಕಡೆಯವರನ್ನು ಚದುರಿಸಿದ್ದಾರೆ. ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿದೂಪರ ಸಂಘಟನೆ ಕಾರ್ಯಕರ್ತರು ಏಕಾಏಕಿ ಕಟ್ಟಡಕ್ಕೆ ಹಾನಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಎಸ್ಪಿ ನೇತೃತ್ವದಲ್ಲಿ ಸಭೆ: ಪರಿಸ್ಥಿತಿ ಬಿಗಡಾಯಿಸುವ ಲಕ್ಷಣ ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಿಂದು ಪರ ಸಂಘಟನೆ ಹಾಗೂ ಮಸೀದಿ ಸಮಿತಿ ಮುಖಂಡರ ಸಭೆ ನಡೆಸಿದರು.
ಈ ವೇಳೆ ಹಿಂದೂಪರ ಸಂಘಟನೆ ಮುಖಂಡರು ಮಾತನಾಡಿ, ವಿವಾದ ಏನೇ ಇದ್ದರೂ ನ್ಯಾಯಾಲಯದ ತೀರ್ಪು ಬರುವ ಮುನ್ನವೇ ಪೊಲೀಸರು ಅಥವಾ ಸ್ಥಳೀಯ ನಗರಸಭೆ ಗಮನಕ್ಕೆ ತಾರದೆ ಏಕಾಏಕಿ ಜೆಸಿಬಿ ತಂದು ಕಟ್ಟಡ ಹಾಗೂ ಪೀಠೋಪ ಕರಣಗಳಿಗೆ ಹಾನಿಪಡಿಸಿದ್ದು ಅಕ್ಷಮ್ಯ. ಪೊಲೀಸರ ಗಮನಕ್ಕಿಲ್ಲದೆ ಇದೆಲ್ಲ ನಡೆಯಲು ಸಾಧ್ಯವಿಲ್ಲ. ಆ ರೀತಿ ವರ್ತಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಕಟ್ಟಡಕ್ಕೆ ಹಾನಿ ಪಡಿಸುವ ಸಂದರ್ಭದಲ್ಲಿ ವಕ್ಫ್ ಬೋರ್ಡ್‌ನ ಅಧಿಕಾರಿಯೂ ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ. ಈ ಕೃತ್ಯದ ಸಂದರ್ಭದಲ್ಲಿ ಅವರು ಏಕಿದ್ದರು ಎಂದು ಪ್ರಶ್ನಿಸಿದ ಮುಖಂಡರು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡ ಬೇಕು ಹಾಗೂ ಕಟ್ಟಡಕ್ಕೆ ಹಾನಿ ಪಡಿಸಿದವರು, ಜೆಸಿಬಿ ಮಾಲೀಕರು ಮತ್ತು ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸ ಬೇಕು ಎಂದು ಒತ್ತಾಯಿಸಿದರು.ವಿಶ್ವಹಿಂದೂ ಪರಿಷತ್ ಮುಖಂಡ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳ ಮುಖಂಡ ಶ್ಯಾಂ ವಿ.ಗೌಡ, ಕೃಷ್ಣ, ಯೋಗೀಶ್ ರಾಜ್ ಅರಸ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟ್ಟಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ನಗರಾಧ್ಯಕ್ಷ ಪುಷ್ಪರಾಜ್, ಹಿರಿಯ ಮುಖಂಡ ಬಿ.ರಾಜಪ್ಪ ಇತರರು ಭಾಗವಹಿಸಿದ್ದರು.ಸಾರ್ವಜನಿಕರ ಆಕ್ರೋಶ: ವಿವಾದ ಏನೇ ಇದ್ದರೂ ಕಟ್ಟದ ಮಾಲೀಕರ ಗಮನಕ್ಕೂ ತಾರದೆ, ಪೊಲೀಸರಿಗೂ ತಿಳಿಸದೆ, ನಗರಸಭೆ ಅನುಮತಿ ಪಡೆಯದೆ ಕಟ್ಟಡ ಧ್ವಂಸಗೊಳಿಸುವಷ್ಟು ಧೈರ್ಯ ಬಂದದ್ದು ಹೇಗೆ ಎಂದು ಪ್ರಶ್ನಿಸುತ್ತಿರುವ ಸಾರ್ವಜನಿಕರು, ಅಂತಹವರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ ಏರ್ಪಡಿಸಲಾಗಿದೆ. ನೆಲ್ಲೂರು ಮಠ ಮತ್ತು ಜಾಮಿಯಾ ಮಸೀದಿ ನಡುವೆ ಜಾಗದ ಸಂಬಂಧ ಹಲವು ವರ್ಷಗಳಿಂದ ವಿವಾದ ನ್ಯಾಯಾಲಯದಲ್ಲಿದೆ. ಕೋರ್ಟ್ ಸೂಚನೆಯಂತೆ ಕಳೆದ ಒಂದೂವರೆ ವರ್ಷದ ಹಿಂದೆ ನಗರಸಭೆ ನೇತೃತ್ವದಲ್ಲಿ ಜಾಗದ ಸರ್ವೇ ನಡೆಸಿ ವರದಿ ಸಲ್ಲಿಸ ಲಾಗಿದ್ದು ಅಂತಿಮ ತೀರ್ಪಿಗಾಗಿ ಕಾಯಲಾಗುತ್ತಿದೆ.4 ಕೆಸಿಕೆಎಂ 3ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದ ಬಳಿ ವಿವಾದಿತ ಜಾಗದಲ್ಲಿ ಅಂಗಡಿಗಳನ್ನು ಏಕಾಏಕಿ ತೆರವು ಮಾಡುವ ವೇಳೆಯಲ್ಲಿ ಕಟ್ಟಡಕ್ಕೆ ಹಾನಿಯಾಗಿರುವುದು.