ಕನ್ನಡಪ್ರಭ ವಾರ್ತೆ ಕೊರಟಗೆರೆ
ನಾಡಪ್ರಭು ಕೆಂಪೇಗೌಡ ಭವನ ಮತ್ತು ವಿದ್ಯಾರ್ಥಿ ನಿಲಯಕ್ಕೆ ಭೂಮಿಗೆ ಈಗಾಗಲೇ ದಾಖಲೆ ಪರಿಶೀಲನೆ ನಡೆದಿದೆ ಡಿಸಿಎಂ ಡಾ.ಜಿ.ಪರಮೇಶ್ವರ ಅವರ ಜೊತೆ ಚರ್ಚಿಸಿ ಮಂಜೂರು ಮಾಡಿಸುವ ಜವಾಬ್ದಾರಿ ನನ್ನದು ಎಂದು ತಹಸೀಲ್ದಾರ್ ಮಂಜುನಾಥ.ಕೆ ಭರವಸೆ ನೀಡಿದರು.ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ಕೊರಟಗೆರೆ ಆಡಳಿತ ಮತ್ತು ಒಕ್ಕಲಿಗ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ೫೧೭ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೊರಟಗೆರೆ ಜೆಡಿಎಸ್ ಅಧ್ಯಕ್ಷ ಕಾಮರಾಜು ಮಾತನಾಡಿ ನಾಡಪ್ರಭು ಕೆಂಪೇಗೌಡ ಕಟ್ಟಿದ ಬೆಂಗಳೂರು ಈಗ ವಿಶ್ವಪ್ರಸಿದ್ದಿ ಪಡೆದಿದೆ. ಅವರ ಅಭಿವೃದ್ದಿಯ ಕೆಲಸಗಳೇ ನಮ್ಮೇಲ್ಲರಿಗೂ ಮಾದರಿ. ಕೊರಟಗೆರೆ ಕ್ಷೇತ್ರದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ನಮ್ಮೇಲ್ಲರ ಸಹಕಾರ ಇರಲಿದೆ ಎಂದು ತಿಳಿಸಿದರು.ಕೋಳಾಲ ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ ಕೆಂಪೇಗೌಡ ಭವನ ನಿರ್ಮಾಣಕ್ಕೆ ನಾನು ೫೧ಲಕ್ಷ ದೇಣಿಗೆ ನೀಡುತ್ತೇನೆ. ಒಕ್ಕಲಿಗ ಸಮುದಾಯದ ಅಭಿವೃದ್ಧಿಗೂ ಆದ್ಯತೆ ನೀಡುತ್ತೇನೆ ಎಂದು ತಿಳಿಸಿದರು. ಸಮಾಜ ಸೇವಕ ಮಂಜುನಾಥ ಮಾತನಾಡಿ, ೨೦೨೮ಕ್ಕೆ ಕೊರಟಗೆರೆ ಪಟ್ಟಣದಲ್ಲಿ ಕೆಂಪೇಗೌಡ ಸಮುದಾಯ ನಿರ್ಮಾಣ ಆಗುತ್ತದೆ. ಒಕ್ಕಲಿಗ ಕ್ಷೇಮಾಭಿವೃದ್ದಿ ಸಂಘ ಈಗಾಗಲೇ ಭವನ ನಿರ್ಮಾಣದ ರೂಪುರೇಷೇ ಸಿದ್ಧಪಡಿಸಲಾಗಿದೆ ಕೆಂಪೇಗೌಡ ಭವನದ ನಿರ್ಮಾಣಕ್ಕೆ ನಾನು ೫೦ಲಕ್ಷ ರುದೇಣಿಗೆ ನೀಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ರಂಗರಸಯ್ಯ, ಉಪಾಧ್ಯಕ್ಷ ಎಲ್.ವಿ.ಪ್ರಕಾಶ್, ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಸಾಕರಾಜು, ಅಕ್ಷರದಾಸೋಹ ಶಿಕ್ಷಣಾಧಿಕಾರಿ ಸುಧಾಕರ್, ಮಾಜಿ ತಾಪಂ ಸದಸ್ಯ ರವಿಕುಮಾರ್, ಕೆಂಪಣ್ಣ, ತಾಪಂ ಇಒ ಅಪೂರ್ವ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶಮೂರ್ತಿ, ಮುಖಂಡರಾದ ಮಂಜುನಾಥ, ಜಯಮ್ಮ, ವೀರಕ್ಯಾತರಾಯ, ಗಟ್ಲಹಳ್ಳಿ ಕುಮಾರ್, ವೆಂಕಟಾರೆಡ್ಡಿ, ಲಕ್ಷ್ಮೀಶ್, ಹೇಮಂತಗೌಡ, ಕಾಕಿಮಲ್ಲಯ್ಯ, ಸಂದೀಪ್‌ಕೋಕಿಲಾ ಸೇರಿದಂತೆ ಇತರರು ಇದ್ದರು.