ಕರಾವಳಿಯ ಹೆಮ್ಮೆಯ ಹಾಗೂ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್ ೪೫ ವರ್ಷಗಳಿಂದ ತನ್ನ ಪ್ರಾಮಾಣಿಕ ಮತ್ತು ಯಶಸ್ವಿ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆಯನ್ನು ಗಳಿಸಿದೆ. ಈ ಸುದೀರ್ಘ ಯಶಸ್ವಿ ಹಾದಿಯ ಸವಿನೆನಪಿಗಾಗಿ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ, ನಾಡಿನ ಜನತೆಗೆ ಯೋಗ್ಯವಾದ ನಾಲ್ಕು ಭವ್ಯ ಸಭಾಭವನಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡುತ್ತಿದೆ.
ಮಂಗಳೂರು: ಕರಾವಳಿಯ ಹೆಮ್ಮೆಯ ಹಾಗೂ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ಲ್ಯಾಂಡ್ ಲಿಂಕ್ಸ್ ೪೫ ವರ್ಷಗಳಿಂದ ತನ್ನ ಪ್ರಾಮಾಣಿಕ ಮತ್ತು ಯಶಸ್ವಿ ಉದ್ಯಮದ ಮೂಲಕ ಲಕ್ಷಾಂತರ ಜನರ ನಂಬಿಕೆಯನ್ನು ಗಳಿಸಿದೆ. ಈ ಸುದೀರ್ಘ ಯಶಸ್ವಿ ಹಾದಿಯ ಸವಿನೆನಪಿಗಾಗಿ ಸಂಸ್ಥೆಯು ಮಂಗಳೂರಿನ ಪ್ರಮುಖ ನಾಲ್ಕು ಸ್ಥಳಗಳಲ್ಲಿ ಪ್ರಪ್ರಥಮ ಬಾರಿಗೆ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ, ನಾಡಿನ ಜನತೆಗೆ ಯೋಗ್ಯವಾದ ನಾಲ್ಕು ಭವ್ಯ ಸಭಾಭವನಗಳನ್ನು ಏಕಕಾಲದಲ್ಲಿ ಲೋಕಾರ್ಪಣೆ ಮಾಡುತ್ತಿದೆ.
ಮೇ ೨೩ ರಂದು ಮಂಗಳೂರಿನ ಮೇರಿಹಿಲ್‌ನಲ್ಲಿರುವ ಪಾಲೇಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ಬೆಳಗ್ಗೆ 10 ಗಂಟೆಗೆ ಲೋಕಾರ್ಪಣಾ ಕಾರ್ಯಕ್ರಮ ವೈಭವದಿಂದ ನಡೆಯಲಿದೆ. ಅಂದು ಬೆಳಿಗ್ಗೆ ೧೦:೦೦ ಗಂಟೆಗೆ ಆಂಧ್ರ ಪ್ರದೇಶದ ರಾಜ್ಯಪಾಲ ಜಸ್ಟೀಸ್ ಎಸ್. ಅಬ್ದುಲ್ ನಜೀರ್ ಅವರು ನಾಲ್ಕೂ ಸಭಾಂಗಣಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಲ್ಯಾಂಡ್ ಲಿಂಕ್ಸ್ ಗ್ರೂಪ್ ಅಧ್ಯಕ್ಷ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್ ಬುಧವಾರ ಪಾಲೇಮಾರ್ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ, ಕರ್ನಾಟಕ ವಿಧಾನಸಭೆ ಅಧ್ಯಕ್ಷ ಯು. ಟಿ. ಖಾದರ್, ದ.ಕ. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ಉತ್ತರ ಶಾಸಕ ವೈ. ಭರತ್ ಶೆಟ್ಟಿ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸೇರಿದಂತೆ ಧಾರ್ಮಿಕ ಮುಖಂಡರು ಹಾಗೂ ಉದ್ಯಮಿಗಳು ಭಾಗವಹಿಸಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುತ್ತಿರುವ ವಿಕಾಸ್ ಎಜುಕೇಶನ್ ಟ್ರಸ್ಟ್ ವತಿಯಿಂದ ಶೈಕ್ಷಣಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.ಲ್ಯಾಂಡ್ ಲಿಂಕ್ಸ್ ಗ್ರೂಪ್ ಉಪಾಧ್ಯಕ್ಷ ಪ್ರದೀಪ್ ಪಾಲೇಮಾರ್, ಟ್ರಸ್ಟಿಗಳಾದ ಜೆ. ಕೆ.ರಾವ್, ಜೆ.ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ.ಸಂತೋಷ್ ಕುಮಾರ್ ಮತ್ತಿತರರು ಇದ್ದರು. ಕೈಗೆಟಕುವ ದರದಲ್ಲಿ ಲಭ್ಯ
ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಗೆ ಒತ್ತು ನೀಡುವುದು ಮತ್ತು ಇಲ್ಲಿನ ಜನರಿಗೆ ಸುಲಭವಾಗಿ ಕೈಗೆಟಕುವ ದರದಲ್ಲಿ ಅತ್ಯುನ್ನತ ಸೌಲಭ್ಯಗಳ ಸಭಾಂಗಣಗಳನ್ನು ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ. ವಿವಾಹ ಕಾರ್ಯಕ್ರಮಗಳು, ಸಾಮೂಹಿಕ ವಿವಾಹಗಳು, ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳು, ಉದ್ಯೋಗ ಮೇಳಗಳು, ವಸ್ತು ಪ್ರದರ್ಶನಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಮಹಿಳಾ ಸಬಲೀಕರಣದಂತಹ ಸಮಾಜಮುಖಿ ಚಟುವಟಿಕೆಗಳಿಗೆ ಮುಕ್ತವಾಗಿರಲಿವೆ ಎಂದರು.ಸಾಮೂಹಿಕ ಕಾರ್ಯಕ್ರಮಗಳಿಗೆ ಉಚಿತ
ಲ್ಯಾಂಡ್ ಲಿಂಕ್ಸ್ ಸಂಸ್ಥೆಯು ಸದಾ ಸಾಮಾಜಿಕ ಕಳಕಳಿಗೆ ಹೆಸರುವಾಸಿಯಾಗಿದೆ. ಈ ಸಾಮಾಜಿಕ ಬದ್ಧತೆಯ ಭಾಗವಾಗಿ, ಸಮಾಜದ ಒಳಿತಿಗಾಗಿ ಆಯೋಜಿಸುವ ಸಾಮೂಹಿಕ ವಿವಾಹಗಳು ಹಾಗೂ ಸದುದ್ದೇಶದ ಉದಾತ್ತ ಸಾರ್ವಜನಿಕ ಕಾರ್ಯಕ್ರಮಗಳಿಗೆ ಈ ಎಲ್ಲ ಸಭಾಂಗಣಗಳನ್ನು ನಿಯಮಾನುಸಾರವಾಗಿ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ ಎಂದರು. ನಾಲ್ಕು ಸಭಾಭವನಗಳ ವಿಶಿಷ್ಟತೆ, ಅತ್ಯಾಧುನಿಕ ಸೌಲಭ್ಯಗಳುಪ್ರತಿಯೊಂದು ಸಭಾಭವನವನ್ನು ಅತ್ಯಂತ ಚಿಂತನಶೀಲವಾಗಿ ರೂಪಿಸಲಾಗಿದ್ದು, ಸರ್ವ ಧರ್ಮದವರೂ ತಮ್ಮ ಇಷ್ಟದ ಶೈಲಿಯಲ್ಲಿ ಅತ್ಯಂತ ಆರಾಮದಾಯಕವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ವಿನ್ಯಾಸಗೊಳಿಸಲಾಗಿದೆ. ಕಾರ್ಪೊರೇಟ್ ಶೈಲಿಯ ಅದ್ದೂರಿ ಈವೆಂಟ್‌ಗಳಿಂದ ಹಿಡಿದು ಜನಸಾಮಾನ್ಯರ ಸಣ್ಣ ಬಜೆಟ್‌ನ ಕಾರ್ಯಕ್ರಮಗಳವರೆಗೆ, ಇಲ್ಲಿ ಸಭಾಂಗಣಗಳು ಲಭ್ಯವಿವೆ.೧. ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೇರಿಹಿಲ್:
ಅದ್ದೂರಿತನ ಮತ್ತು ಸಾಂಪ್ರದಾಯಿಕತೆಯ ಅದ್ಭುತ ಸಮ್ಮಿಲನವೇ ಮೇರಿಹಿಲ್‌ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್. ಕಣ್ ಸೆಳೆಯುವ ಮರದ ಕರಕುಶಲತೆಯಿಂದ ಕೂಡಿದ ಭವ್ಯ ಒಳಾಂಗಣ ವಿನ್ಯಾಸ ಇದರ ಪ್ರಮುಖ ಆಕರ್ಷಣೆ. ವಿಶೇಷತೆಗಳು: ಅತ್ಯಾಧುನಿಕ ತಂತ್ರಜ್ಞಾನದ ಒಳಾಂಗಣ ಸಭಾಂಗಣ, ಸುಸಜ್ಜಿತ ಹಾಗೂ ವಿಶಾಲವಾದ ಅತಿಥಿ ಕೊಠಡಿಗಳು, ಪ್ರತ್ಯೇಕ ಪ್ರಾರ್ಥನಾ ಮಂದಿರ ಹಾಗೂ ಅತ್ಯಂತ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ. ಇಲ್ಲಿ ಶೀಘ್ರದಲ್ಲಿಯೇ ಗ್ರೀನ್ ವ್ಯಾಲಿ ಎಂಬ ವಿನೂತನ ತೆರೆದ ಸಭಾಂಗಣ ಸಿದ್ಧವಾಗಲಿದೆ. ತೆರೆದ ಸಭಾಂಗಣ ಸರ್ವರೀತಿಯ ಹೊರಾಂಗಣ ಕಾರ್ಯಕ್ರಮಗಳಿಗೂ ಸೂಕ್ತವಾಗುವಂತೆ ಮೂಡಿಬರಲಿದೆ.೨. ಪಾಲೆಮಾರ್ ಗಾರ್ಡನ್, ಮೋರ್ಗನ್ಸ್ ಗೇಟ್:
ಮೋರ್ಗನ್ಸ್ ಗೇಟ್‌ನಲ್ಲಿ ಸಾಂಸ್ಕೃತಿಕ ಪರಂಪರೆಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವಂತೆ ಈ ಭವ್ಯ ಗಾರ್ಡನ್ ನಿರ್ಮಿಸಲಾಗಿದೆ. ಹಸಿರು ಪರಿಸರದಲ್ಲಿ, ಐಷಾರಾಮಿತನದ ಜೊತೆಗೆ ನಿಸರ್ಗದ ಸೌಂದರ್ಯವನ್ನು ಸವಿಯಲು ಇಚ್ಛಿಸುವವರಿಗೆ ಯೋಗ್ಯವಾಗಿದೆ. ಸಮಾರಂಭವನ್ನು ಅದ್ದೂರಿಯಾಗಿ ನಡೆಸಲು, ಬದುಕಿನ ಸುಂದರ ಕ್ಷಣಗಳನ್ನು ಅವಿಸ್ಮರಣೀಯಗೊಳಿಸಲು ಅನುವು ಮಾಡಿಕೊಡಲಿದೆ.ವಿಶೇಷತೆಗಳು: ವೈಭವದ ಒಳಾಂಗಣ ಸಭಾಂಗಣ, ತೆರೆದ ಸಭಾಂಗಣ, ಸಾಂಪ್ರದಾಯಿಕ ಕಾಟೇಜ್‌ಗಳು ಮತ್ತು ವಿಶಾಲವಾದ ರೂಮ್‌ಗಳು, ಸುಂದರವಾದ ಹೊರಾಂಗಣ ಈಜುಕೊಳ, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಮತ್ತು ಬೃಹತ್ ಹಸಿರು ಮೈದಾನ.೩. ಪಾಲೆಮಾರ್ ಫಾರ್ಮ್ಸ್ ಸುರತ್ಕಲ್:
ನಗರ ಪ್ರದೇಶದ ವಾತಾವರಣದಿಂದ ದೂರವಿದ್ದು, ನಿಸರ್ಗದ ಮೌನ, ತಂಪಾದ ಗಾಳಿ, ಮರಗಳ ನೆರಳು ಹಾಗೂ ಪಕ್ಷಿಗಳ ಕಲರವದ ನಡುವೆ ಹಸಿರನ್ನು ಪ್ರೀತಿಸುವವರಿಗಾಗಿ ಸುರತ್ಕಲ್ ಸಮೀಪ ೨೦ ಎಕರೆ ವಿಶಾಲವಾದ ಜಾಗದಲ್ಲಿ ಈ ಫಾರ್ಮ್ಸ್ ಸಿದ್ಧಗೊಂಡಿದೆ.ವಿಶೇಷತೆಗಳು: ವಿಶಾಲವಾದ ತೆರೆದ ಸಭಾಂಗಣ, ಈಜುಕೊಳ, ಮಕ್ಕಳು ಆನಂದಿಸಲು ಸುಸಜ್ಜಿತ ಮಕ್ಕಳ ಆಟದ ಪ್ರದೇಶ ಮತ್ತು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ.೪. ನೇತ್ರಾವತಿ ಸಭಾಭವನ, ಕಡೆಕಾರ್ ಜೆಪ್ಪಿನಮೊಗರು:
ನೇತ್ರಾವತಿ ನದಿಯ ದಡದಲ್ಲಿರುವ ಜೆಪ್ಪಿನಮೊಗರಿನ ಕಡೆಕಾರ್ ಎಂಬ ಪ್ರಶಾಂತ ವಾತಾವರಣದಲ್ಲಿ ಈ ಸಭಾಂಗಣ ತಲೆಯೆತ್ತಿದೆ. ಒಂದು ಬದಿಯಲ್ಲಿ ನದಿಯ ತಣ್ಣನೆ ಗಾಳಿ, ಇನ್ನೊಂದು ಬದಿಯಲ್ಲಿ ಪುರಾತನ ದೇವಸ್ಥಾನವಿದ್ದು, ಇಡೀ ಪರಿಸರಕ್ಕೆ ದೈವಿಕ ಕಳೆಯನ್ನು ನೀಡುತ್ತದೆ. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಇದನ್ನು ನಿರ್ಮಿಸಲಾಗಿದೆ.ವಿಶೇಷತೆಗಳು: ವಿಶಾಲ ಒಳಾಂಗಣ ಸಭಾಂಗಣ, ಅಚ್ಚುಕಟ್ಟಾದ ಊಟದ ಹಾಲ್ ಮತ್ತು ಅಡುಗೆ ಮನೆ. (ಇಲ್ಲಿ ಕೇವಲ ಶುದ್ಧ ಸಸ್ಯಾಹಾರಿ ಆಹಾರ ತಯಾರಿಕೆಗೆ ಮಾತ್ರ ಅವಕಾಶವಿದೆ).ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ:
ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ಅತ್ಯಂತ ವಿಶಾಲವಾದ, ವ್ಯವಸ್ಥಿತವಾದ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ನೂರಾರು ವಾಹನಗಳು ಏಕಕಾಲದಲ್ಲಿ ಯಾವುದೇ ಗೊಂದಲವಿಲ್ಲದೆ ಬಂದು ಹೋಗಲು ಇಲ್ಲಿ ಮುಕ್ತ ಅವಕಾಶವಿದೆ. ಅತೀ ಶೀಘ್ರ ಕಡಲ ತೀರದಲ್ಲಿ ತೆರೆದ ಸಭಾಂಗಣ: ಕಡಲ ನಗರಿ ಮಂಗಳೂರಿನ ಸಮುದ್ರ ತೀರದಲ್ಲಿ ಅದ್ದೂರಿ, ಭವ್ಯ ಸಮಾರಂಭಗಳನ್ನು ನಡೆಸಲು ಸುಸಜ್ಜಿತ ತೆರೆದ ಸಭಾಂಗಣ ಸಿದ್ಧಗೊಳ್ಳುತ್ತಿದೆ. ಶೀಘ್ರದಲ್ಲೇ ಈ ಸಭಾಂಗಣವೂ ಸಾರ್ವಜನಿಕರಿಗಾಗಿ ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: ೭೪೧೧೩೯೪೭೫೯, ೭೪೮೩೫೭೪೭೫೯, ೯೧೪೮೪೩೫೭೫೯ಭೇಟಿ ನೀಡಿ: ಅಧಿಕೃತ ವೆಬ್‌ಸೈಟ್: www.palemar.com
ಈ ನಾಲ್ಕು ಸಭಾಭವನಗಳನ್ನು ನಾನು ಕೇವಲ ಒಬ್ಬ ಉದ್ಯಮಿಯ ಲಾಭದ ದೃಷ್ಟಿಯಿಂದ ನಿರ್ಮಿಸಿದ್ದಲ್ಲ. ಕರಾವಳಿಯ ಜನತೆ ಕಳೆದ ೪೫ ವರ್ಷಗಳಿಂದ ನಮಗೆ ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಪ್ರತಿಯಾಗಿ, ಸಮಾಜಕ್ಕೆ ಏನಾದರೂ ಕೊಡುಗೆಯನ್ನು ನೀಡಬೇಕು ಎಂಬ ಸದುದ್ದೇಶದಿಂದ ಇವುಗಳನ್ನು ರೂಪಿಸಿದ್ದೇನೆ. ಬಡ ಕುಟುಂಬಗಳ ಸಾಮೂಹಿಕ ವಿವಾಹದಂತಹ ಸಂದರ್ಭದಲ್ಲಿ ಹೆತ್ತವರ ಕಣ್ಣಲ್ಲಿ ಕಾಣುವ ಸಾರ್ಥಕತೆ ಮತ್ತು ನೆಮ್ಮದಿಯ ಭಾವವೇ ನನಗೆ ನಿಜವಾದ ಸಂಪತ್ತು.
-ಕೃಷ್ಣ ಜೆ.ಪಾಲೇಮಾರ್, ಅಧ್ಯಕ್ಷರು, ಲ್ಯಾಂಡ್ ಲಿಂಕ್ಸ್ ಗ್ರೂಪ್, ಮಂಗಳೂರು