ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಪಿತ್ರಾರ್ಜಿತ ಹಾಗೂ ಪೂರ್ವಾರ್ಜಿತವಾಗಿ ಬಂದಿರುವ ನೆಲವನ್ನು ಕೊಡವರಿಗೆ ಮಾರಾಟ ಮಾಡುವ ಹಕ್ಕಿಲ್ಲ. ಆತ್ಮಸಾಕ್ಷಿಯೊಂದಿಗೆ ನಾವು ಆಸ್ತಿಯನ್ನು ಮಾರಾಟ ಮಾಡದೇ ನಮ್ಮ ನೆಲವನ್ನು ರಕ್ಷಿಸಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಪ್ರತಿಪಾದಿಸಿದರು.ಬಿಟ್ಟಂಗಾಲದಲ್ಲಿ ಜಬ್ಬೂಮಿ ಸಂಘಟನೆ ಹಾಗೂ ರೂಟ್ಸ್ ಆಫ್ ಕೊಡಗು ಸಹಯೋಗದಲ್ಲಿ ಇತರ ಸಂಘ ಸಂಸ್ಥೆಗಳ ಸಹಕಾರದಲ್ಲಿ ನಡೆದ ‘ಬೇಲ್ ಪಣಿ’ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಈ ನೆಲ ಸ್ವಅರ್ಜಿತವಾಗಿ ಸಂಪಾದಿಸಿದಲ್ಲ. ಸ್ವಾಭಿಮಾನದಿಂದ ಈ ನೆಲವನ್ನು ರಕ್ಷಿಸಬೇಕು. ರಾಜರ ಕಾಲದಲ್ಲಿಯೂ ಸಹ ಈ ನೆಲವನ್ನು ರಕ್ಷಿಸಬೇಕು ಎಂದು ರಾಜರ ಆಡಳಿತದಲ್ಲಿ ಕೊಡವರು ಯೋಧರಾಗಿ ಹೋರಾಟ ಮಾಡಿದ್ದಾರೆ, ಹೊರತು ಬದುಕಿನ ಹೊಟ್ಟೆ ಬಟ್ಟೆಗಲ್ಲ ಅಲ್ಲ. ನಾಟಿ ಗದ್ದೆಯ ಕ್ರೀಡಾಕೂಟದ ಸಂಭ್ರಮದೊಂದಿಗೆ ಈ ನೆಲ ಜಲವನ್ನು ಶಾಶ್ವತವಾಗಿ ರಕ್ಷಿಸಲು ಪಣತೊಡಬೇಕು. ನೆಲ ನಮ್ಮ ಕೈಜಾರದಂತೆ ಸಂಕಲ್ಪ ಕೈಗೊಳ್ಳಬೇಕು ಎಂದು ಕರೆ ನೀಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್ ಸಂಚಾಲಕ ಚೊಟ್ಟೆಕ್’ಮಾಡ ರಾಜೀವ್ ಬೋಪಯ್ಯ ಅವರು ಬತ್ತದ ಕೃಷಿಯಲ್ಲಿ ಕೊಡವರಿಗೆ ಲಾಭ ನಷ್ಟದ ಪ್ರಶ್ನೆ ಬರುವುದಿಲ್ಲ. ಬತ್ತದ ಕೃಷಿ ನಮಗೆ ಸಂಸ್ಕೃತಿ -ಸಂಸ್ಕಾರ ನೀಡಿದೆ. ಭೂಮಿಯೊಂದಿಗಿನ ಸಂಬಂಧವನ್ನು ಅರ್ಥ ಮಾಡಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬತ್ತದ ಕೃಷಿಯೊಂದಿಗೆ ಕೊಡವ ಸಂಸ್ಕೃತಿ ಮಿಡಿತ ಹೊಂದಿದ್ದು ಕೊಡವರ ಪ್ರತಿ ಹಬ್ಬವೂ ಬತ್ತದ ಕೃಷಿಯೊಂದಿಗೆ ಬೆರೆತುಕೊಂಡಿದೆ. ಇದನ್ನು ನಮ್ಮ ಮಕ್ಕಳಿಗೆ ಅರ್ಥಮಾಡಿಕೊಟ್ಟು ಅಭಿಮಾನ ಮೂಡಿಸಲು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.ಬಿಟ್ಟಂಗಾಲದಲ್ಲಿ ಈ ಕಾರ್ಯಕ್ರಮ ಆಯೋಜಿಸಲು ಮುಖ್ಯ ಕಾರಣ ಈ ವ್ಯಾಪ್ತಿಯಲ್ಲಿ ಬತ್ತದ ಗದ್ದೆಗಳು ಅತಿ ಹೆಚ್ಚು ಭೂಪರಿವರ್ತನೆ ಆಗುತ್ತಿದೆ. ಕೊಡವರು ಪ್ರಕೃತಿ ಆರಾಧಕರಾಗಿ ಬದುಕಿಕೊಂಡು ಬಂದ ಜನ ಕೊಡಗಿನ ಜಾಗವನ್ನು ಉಳಿಸಿಕೊಳ್ಳಲು ನಮ್ಮ ತಂಡದಿಂದ ವಿದೇಶದಲ್ಲಿ ನೆಲೆಸಿರುವ ಕೊಡವರಿಗೂ ಜಾಗೃತಿ ಮೂಡಿಸಿ ಕೊಡಗಿನಲ್ಲಿ ನೆಲ ಉಳಿಸಲು ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಕೊಡಗಿನಲ್ಲಿ ಕೊಡವರೇ ತಮ್ಮ ಭೂಮಿ ಮಾರಾಟ ಮಾಡಿ ಕೊಡವರನ್ನು ದುರ್ಬಲಗೊಳಿಸುತ್ತಿದ್ದಾರೆ. ಭೂಪರಿವರ್ತನೆ ಮಾಡಿ ತೋಡುಗಳನ್ನು ಮುಚ್ಚಿ, ಹೊರಗಿನವರಿಗೆ ಮಾರಾಟ ಮಾಡಿದರೆ, ನಾಳೆ ನಮ್ಮ ಮಕ್ಕಳು, ಮುಂದಿನ ಪೀಳಿಗೆ ಏನು ಮಾಡಬೇಕು, ಅವರ ಭವಿಷ್ಯವೇನು ಎಂಬ ಬಗ್ಗೆ ಚಿಂತಿಸಬೇಕಾಗಿದೆ ಎಂದು ಎಚ್ಚರಿಸಿದರು.
ಗದ್ದೆ ಮಾಲೀಕ ನಾಯಡ ಸೋಮಣ್ಣ, ಕೊಡಗು ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಮಾಚೆಟ್ಟಿರ ಚೋಟು ಕಾವೇರಪ್ಪ , ಅಮ್ಮತ್ತಿ ಕೊಡವ ಸಮಾಜ ಅಧ್ಯಕ್ಷ ಐನಂಡ ಪ್ರಕಾಶ್, ಅಂತಾರಾಷ್ಟ್ರೀಯ ರಗ್ಮಿ ಆಟಗಾರ ಮಾದಂಡ ತಿಮ್ಮಯ್ಯ ಹಾಜರಿದ್ದರು.ಫಲಿತಾಂಶ : ಕೆಸರು ಗದ್ದೆ ಓಟ (6 ವರ್ಷದೊಳಗೆ) ಗಂಡು ಮಕ್ಕಳ ವಿಭಾಗ : 1.ಕಡೆಮಾಡ ಸ್ವರೂಪ್, 2.ಚೆಟ್ಟಂಗಡ ಪ್ರದೀಕ್ ಪೂವಣ್ಣ ಹೆಣ್ಣು ಮಕ್ಕಳ ವಿಭಾಗ : 1.ಪುದಿಯೊಕ್ಕಡ ತಪಸ್ಯ ಬೊಳ್ಳಮ್ಮ, 2. ಚೇಂದ್ರಿಮಾಡ ಹಿಹಾಮಿ ದೇಚಮ್ಮ, 3.ಮಾಣಿಯಪಂಡ ತ್ರಿಯನ್ ದೇಚಕ್ಕ 6-12 ವರ್ಷದೊಳಗೆ ವಿಭಾಗ : ಗಂಡು ಮಕ್ಕಳು : 1. ಚೇಂದಂಡ ರಿಯೊ ಪೂಣಚ್ಚ, ಮತ್ತು ಕಡೆಮಾಡ ಹರ್ಷ ದೇವಯ್ಯ
2. ನಂಬಿಯಪಂಡ ವಿಹಾನ್ ಮಂದಣ್ಣ ಮತ್ತು ಶಿವಚಾಳಿಯಂಡ ಸುಹಾಸ್ ಸುಬ್ಬಯ್ಯ, 3.ಕಲಿಯಂಡ ರೀಚ್ ಪೊನ್ನಣ್ಣ ಮತ್ತು ಪೊರ್ಕಂಡ ಚರಣ್ ಮಾದಪ್ಪ ಹೆಣ್ಣು ಮಕ್ಕಳ ವಿಭಾಗ:1.ಚೋಯಮಾದಂಡ ಧನ್ವಿ ಪೊನ್ನಮ್ಮ, 2.ಹಂಚೇಟ್ಟಿರ ಲಿಪಿ ಮಾದಪ್ಪ, 3.ಮಂಡೇಪಂಡ ಶಾನ್ವಿ ಬಿದ್ದಪ್ಪ12-16 ವರ್ಷ ವಿಭಾಗ: ಗಂಡು ಮಕ್ಕಳು: 1. ಚೇಯಂಡ ಕೃಶ್ ಕಾರ್ಯಪ್ಪ, 2. ಚಾರಿಮಂಡ ಸೋಮಣ್ಣ, 3.ಬಿದ್ದಂಡ ಚರ್ಮಣ
ಹೆಣ್ಣು ಮಕ್ಕಳ ವಿಭಾಗ :1. ಗುಡ್ಡಂಡ ಸ್ಪೂರ್ತಿ, 2. ಮಯೂಕ್ ಪಿ. ಎಂ. 3. ಬಲ್ಯಾಟಂಡ ಕನ್ನಿಕಾ16-40 ವರ್ಷಗಳ ವಿಭಾಗ: ಪುರುಷರು :1.ಅಳಮೆಂಗಡ ಸೋಮಣ್ಣ, 2. ಕುಂಡಿಯೋಳಂಡ ಅಯ್ಯಪ್ಪ, 3.ಪಟ್ಟಚೇರ ವಂಡ ಗಗನ್
ಮಹಿಳೆಯ ವಿಭಾಗ : 1. ಕಾಳಚಂಡ ಚೋಂದಮ್ಮ, 2. ನೆರವಂಡ ಅಧಿತಿ ಗಂಗಮ್ಮ, 3.ಮೂಕೊಂಡ ಸಮೃದ್ಧಿ ದೇವಯ್ಯವೇಗದ ನಡಿಗೆ 60 ವರ್ಷ ಮೇಲ್ಪಟ್ಟ ವಿಭಾಗ : ಚೇಮೀರ ಪ್ರಭು ಪೂವಯ್ಯ, 2.ಪಟ್ಟಚೆರವಂಡ ಲಾಲು ಚಂಗಪ್ಪ, 3.ಬೊಪ್ಪಂಡ ರವಿ ಕೈಪುಳಿ ಕೈಕಣೆ : 1.ಕುಪ್ಪಣಮಾಡ ಸಲೀನಾ ವಿಜಯ, 2.ಮಾಯಣಮಾಡ ಭಾಗ್ಯ 3.ನೆಲ್ಲವಂಡ ಕಾವೇರಮ್ಮ
ಅಂತರ್ಶಾಲಾ ವಿಭಾಗ ಹಗ್ಗ ಜಗ್ಗಾಟ : ಗಂಡು ಮಕ್ಕಳು ವಿಭಾಗ : 1.ನಾಪೋಕ್ಲು ಅಂಕೂರ್ ವಿದ್ಯಾಸಂಸ್ಥೆ, 2.ಗೋಣಿಕೊಪ್ಪ ಕಾಲ್ಸ್ ವಿದ್ಯಾಸಂಸ್ಥೆ ಹೆಣ್ಣು ಮಕ್ಕಳ ವಿಭಾಗ : 1.ನಾಪೋಕ್ಲು ಅಂಕೂರ್ ವಿದ್ಯಾ ಸಂಸ್ಥೆ, 2. ಗೋಣಿಕೊಪ್ಪ ಕಾಲ್ಸ್ ವಿದ್ಯಾ ಸಂಸ್ಥೆ ವಾಲಗತಾಟ್,4- 12 ವಯೋಮಿತಿ, ಹೆಣ್ಣು ಮಕ್ಕಳು ವಿಭಾಗ :1.ಮುರುವಂಡ ನಿಹಾರಿಕ, 2.ಮಂಡೇಟೀರ ಪ್ರಶಸ್ತಿ ಪೂವಮ್ಮ, 3.ಚೊಟ್ಟೆಮಂಡ ತಾನ್ಯಾ ತಂಗಮ್ಮ ಗಂಡು ಮಕ್ಕಳ ವಿಭಾಗ : 1. ಕಿರುಂದಂಡ ನಂದೀತ್ ಮುತ್ತಣ್ಣ, 2.ಚೊಟ್ಟೆಮಂಡ ಕೃಷ್ ಕಾಳಪ್ಪ, 3.ಪುದಿಯೊಕ್ಕಡ ಶಿವಸ್ಯ 12-16 ವರ್ಷ ಗಂಡು ಮಕ್ಕಳ ವಿಭಾಗ :1.ಕೊಣಿಯಂಡ ಪೂವಣ್ಣ, 2.ಬೊಪ್ಪಂಡ ಪೂವಣ್ಣ, 3.ಚೀಯಂಡ ಕೃಶ್ ಕಾರ್ಯಪ್ಪ.40 ವರ್ಷ ಮೇಲ್ಪಟ್ಟ ವಿಭಾಗ:
1. ಪೊನ್ನಕಚ್ಚಿರ ಸಂಜು, 2. ಪುಡಿಯಂಡ ಶುಭಾಶ್, 3. ಪಟ್ಟಚೆರವಂಡ ಲಾಲು ಚಂಗಪ್ಪ ಹಾಗೂ ವಿಶೇಷ ಬಹುಮಾನ ಕೊಣಿಯಂಡ ಮಂಜು ಮಾದಯ್ಯ.ಮಹಿಳೆಯರ ವಿಭಾಗ : 1.ಮೂಕೊಂಡ ವೀಣಾ, 2. ಮೂಡೇರ ಸುಮತಿ 3. ಕುಪ್ಪಂಗಡ ಸುಮಿಹಗ್ಗ ಜಗ್ಗಾಟ : ಪುರುಷರ ವಿಭಾಗ : 1. ಟೀಮ್ ಸ್ಕೋರರ್, 2. ಬೇಗೂರು ಶ್ರೀ ಮಹಾವಿಷ್ಣು, 3. ವಗರೆ ಶ್ರೀ ಅಯ್ಯಪ್ಪ
ಮಹಿಳೆಯರ ವಿಭಾಗ: 1.ಕೋಕೇರಿ ನೀಲಿ ಆಟ್, 2.ಅಮ್ಮತ್ತಿ ಕೊಡವ ಸಮಾಜ, 3.ವಗರೆ ಶ್ರೀ ಅಯ್ಯಪ್ಪ.ಕೆಸರು ಗದ್ದೆ ಕ್ರೀಡಾಕೂಟದ ಎಲ್ಲಾ ಓಟ ಸ್ಪರ್ಧೆಯ ಬಹುಮಾನದ ಪ್ರಯೋಜಕತ್ವವನ್ನು ಅಂತಾರಾಷ್ಟ್ರೀಯ ಹಾಕಿ ತೀರ್ಪುಗಾರ್ತಿ ದಿವಂಗತ ಅನುಪಮಾ ಪುಚ್ಚಿಮಂಡ ಅವರ ಜ್ಞಾಪಕರ್ತವಾಗಿ ಅವರ ಸಹೋದರ ಹೇ ಶ್ಯಾಕ್ ಹೋಟೆಲ್ ಮಾಲೀಕ ಪುಚ್ಚಿಮಂಡ ಬಬ್ಬುಲ್ ಅಪ್ಪಯ್ಯ ಅವರು ನೀಡಿದರು.