ಶನಿವಾರ ರೈತರು ತಮ್ಮ ಜಮೀನುಗಳಿಗೆ ಪ್ರವೇಶ ಮಾಡಲಿದ್ದಾರೆ. ಮೇ ೨೫ರಂದು ಹೆದ್ದಾರಿ ತಡೆ ನಡೆಸಲಾಗುವುದು.

ಕುರುಗೋಡು: ಸಮೀಪದ ಕುಡಿತಿನಿ ಭೂ ಸಂತ್ರಸ್ತರ ಹೊರಾಟ ಸಮಿತಿಯ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಮುಂದುವರೆದಿದೆ.

ಭೂ ಸಂತ್ರಸ್ತ ಹೋರಾಟಕ್ಕೆ ಬೆಂಬಲಿಸಿ ಸಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ಯು.ಬಸವರಾಜ ಮಾತನಾಡಿ, ಶನಿವಾರ ರೈತರು ತಮ್ಮ ಜಮೀನುಗಳಿಗೆ ಪ್ರವೇಶ ಮಾಡಲಿದ್ದಾರೆ. ಮೇ ೨೫ರಂದು ಹೆದ್ದಾರಿ ತಡೆ ನಡೆಸಲಾಗುವುದು. ಒಂದು ವೇಳೆ ಹೋರಾಟಕ್ಕೆ ತೊಂದರೆ ನೀಡಿದರೆ ಜೂ.೧೫ರ ಒಳಗೆ 500 ಬೈಕ್‌ಗಳ ರ್‍ಯಾಲಿ ಆಯೋಜಿಸಲಾಗುವುದು. ಇದರ ಮುಂದುವರೆದ ಭಾಗವಾಗಿ ಬಳ್ಳಾರಿ ಜಿಲ್ಲೆ ಹಾಗೂ ರಾಜ್ಯ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.

ರಾಜಶೇಖರ್ ಮಾತನಾಡಿ, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಭೂಮಿ ಖರೀದಿಸಿ ಕುಡತಿನಿ ರೈತರನ್ನು ಸರ್ಕಾರ ವಂಚಿಸಿದೆ. ಕೆಐಎಡಿಬಿ ಇಲಾಖೆ ರೈತರು ಮತ್ತು ಸರ್ಕಾರದ ನಡುವೆ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಕಡಿಮೆ ಬೆಲೆ ನಿಗದಿ ಮಾಡಿ ಕುಡಿತಿನಿ ರೈತರನ್ನು ವಂಚಿಸುವ ಕೆಲಸ ಮಾಡಿದೆ ಎಂದರು.

೧೨೪೫ ದಿನಗಳ ಕಾಲ ನಿತಂತರವಾಗಿ ರೈತರು ಧರಣಿ ನಡೆಸುತ್ತಿದ್ದರೂ ಜನಪ್ರತಿನಿಧಿಗಳು, ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಬಗ್ಗೆ ಬೇಸರವಿದೆ ಎಂದರು.

ಕುಡಿತಿನಿ, ಹರಗಿನದೋಣಿ, ವೇಣಿರಾಪುರ, ಕೊಳಗಲ್ಲು ಜಾನೆಕುಂಟೆ, ಸಿದ್ದಮನಹಳ್ಳಿ, ಏರಂಗಳ್ಳಿ ಗ್ರಾಮಗಳ ರೈತರು ಭಾಗವಹಿಸಿದ್ದರು. ಸಿಐಟಿಯು ಮುಖಂಡ ಜೆ.ಸತ್ಯಬಾಬು, ಜಂಗ್ಲಿಸಾಬ ಪಲ್ಲೆದ್‌, ಪ್ರಭುಲಿಂಗ, ವಿಸಿಕೆ ಚಂದ್ರಪ್ಪ, ಚಂದ್ರಾಯಿ ದೊಡ್ಡಬಸಪ್ಪ, ಜಿ.ಎಸ್. ವೆಂಕಟರಮಣ ಬಾಬು, ಎಂ.ತಿಪ್ಪೇಸ್ವಾಮಿ, ಮಾಳಮ್ಮ, ಶ್ರೀಧರ್, ನರಸಿಂಹ, ರಾಜು, ಸುರೇಶ ಗೌಡ, ನಾರಾಯಣ ರೆಡ್ಡಿ, ಎ.ಸ್ವಾಮಿ, ಖಾದರ್, ರತ್ನಮ್ಮ, ಸಂಪತ್‌ಕುಮಾರ್, ಪಂಪನಗೌಡ, ಎ.ಸ್ವಾಮಿ, ಖಾದರ ಇದ್ದರು.

ಕುರುಗೋಡು ಸಮೀಪದ ಕುಡಿತಿನಿ ಭೂ ಸಂತ್ರಸ್ತರ ಹೊರಾಟ ಸಮಿತಿಯ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಯಿತು.