ವೈವಿಧ್ಯಮಯ ಸಾಹಿತ್ಯದಿಂದ ಭಾಷೆ ಸಮೃದ್ಧ: ಮುದ್ದು ಮೂಡುಬೆಳ್ಳೆ

| Published : Feb 17 2025, 12:33 AM IST

ವೈವಿಧ್ಯಮಯ ಸಾಹಿತ್ಯದಿಂದ ಭಾಷೆ ಸಮೃದ್ಧ: ಮುದ್ದು ಮೂಡುಬೆಳ್ಳೆ
Share this Article
  • FB
  • TW
  • Linkdin
  • Email

ಸಾರಾಂಶ

ತುಲುವೆರೆ ಕಲ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಆಶ್ರಯದಲ್ಲಿ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್‌ನಲ್ಲಿ ‘ಉದಿಪು ನೇಸರೆ’ ತುಳು ಕವಿಗೋಷ್ಠಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ವೈವಿಧ್ಯತೆಯಿಂದ ಕೂಡಿದ ಸಾಹಿತ್ಯ ಪ್ರಕಾರಗಳ ರಚನೆ ಭಾಷೆಯ ಬೆಳವಣಿಗೆಗೆ ಪೂರಕ. ಈ ನಿಟ್ಟಿನಲ್ಲಿ ಕವಿ, ಸಾಹಿತಿಗಳು ಗಮನವಹಿಸಬೇಕು. ಭಾಷೆಯ ಬಗೆಗಿನ ತುಡಿತ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗುತ್ತದೆ ಎಂದು ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಹೇಳಿದರು. ತುಲುವೆರೆ ಕಲ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಆಶ್ರಯದಲ್ಲಿ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾ ಪಾರ್ಕ್‌ನಲ್ಲಿ ‘ಉದಿಪು ನೇಸರೆ’ ತುಳು ಕವಿಗೋಷ್ಠಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು. ಉದ್ಯಾನದಲ್ಲಿ ಅರಳುವ ಪುಷ್ಪಗಳ ರೀತಿ ಬಹುಬಗೆಯ ಸಾಹಿತ್ಯ ರಚನೆಯಿಂದ ಕವಿ, ಸಾಹಿತಿಗಳು ಪರಿಪೂರ್ಣತೆ ಪಡೆಯಲು ಸಾಧ್ಯ ಎಂದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಹಿರಿಯ ಸಾಹಿತಿ ಸದಾನಂದ ನಾರಾವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಅಗಲಿದ ಪತ್ರಕರ್ತ ಶಶಿ ಬಂಡಿಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ‘ತುಲುವೆರೆ ಕಲ’ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರಿಂದ ಮಾನಸಿಕ ಒತ್ತಡ ನಿವಾರಣೆ ಸಾಧ್ಯ ಎಂದರು.ಪತಂಜಲಿ ಯೋಗ ಶಿಕ್ಷಣ ಟ್ರಸ್ಟ್ ಜತೆ ಕಾರ್ಯದರ್ಶಿ ಪ್ರಭಾ ಚಂದ್ರಶೇಖರಯ್ಯ ಇದ್ದರು. ಸುಮಂಗಲಾ ದಿನೇಶ್ ಶೆಟ್ಟಿ ಕುಂಪಲ ಸ್ವಾಗತಿಸಿದರು. ರಾಜೇಶ್ ಶೆಟ್ಟಿ ದೋಟ ವಂದಿಸಿದರು. ಶ್ರೀಶಾವಾಸವಿ ನಿರೂಪಿಸಿದರು.