ಜರ್ಮನಿ, ಜಪಾನ್, ಇಟಲಿ ಹಾಗೂ ಅಮೆರಿಕ ಸೇರಿದಂತೆ ವಿವಿಧ ವಿದೇಶಗಳಲ್ಲಿ ಭಾರತೀಯ ನರ್ಸ್ಗಳಿಗೆ, ಅರೆವೈದ್ಯಕೀಯ ಪದವೀಧರರಿಗೆ ಅತ್ಯಧಿಕ ಬೇಡಿಕೆ ಹಾಗೂ ಉತ್ತಮ ವೇತನವಿದೆ. ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಜತೆಗೆ ಆಯಾ ದೇಶಗಳ ಭಾಷೆಗಳನ್ನು ಕರಗತ ಮಾಡಿಕೊಂಡರೆ, ವಿದೇಶಗಳಲ್ಲಿ ನೇರ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ಕನ್ನಡಪ್ರಭ ವಾರ್ತೆ ಕಲಬುರಗಿಜರ್ಮನಿ, ಜಪಾನ್, ಇಟಲಿ ಹಾಗೂ ಅಮೆರಿಕ ಸೇರಿದಂತೆ ವಿವಿಧ ವಿದೇಶಗಳಲ್ಲಿ ಭಾರತೀಯ ನರ್ಸ್ಗಳಿಗೆ, ಅರೆವೈದ್ಯಕೀಯ ಪದವೀಧರರಿಗೆ ಅತ್ಯಧಿಕ ಬೇಡಿಕೆ ಹಾಗೂ ಉತ್ತಮ ವೇತನವಿದೆ. ವಿದ್ಯಾರ್ಥಿಗಳು ಇಂಗ್ಲಿಷ್ ಭಾಷೆಯ ಜತೆಗೆ ಆಯಾ ದೇಶಗಳ ಭಾಷೆಗಳನ್ನು ಕರಗತ ಮಾಡಿಕೊಂಡರೆ, ವಿದೇಶಗಳಲ್ಲಿ ನೇರ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.ನಗರದ ಎಂ/ ಪಂಡಿತ ರಂಗಮಂದಿರದಲ್ಲಿ ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೆ.ಎಸ್.ಎನ್.ಸಿ.ಯ ಆನ್ಲೈನ್ ಮತ್ತು ಇತರೆ ಸೇವೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದೇಶಗಳಿಗೆ ತೆರಳಲು ಭಾಷೆಯೇ ಏಕೈಕ ತಡೆಗೋಡೆಯಾಗಿದ್ದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಷಾ ಕೌಶಲ್ಯ ರೂಢಿಸಿಕೊಳ್ಳಬೇಕು ಎಂದರು.ರಾಜ್ಯದ ನರ್ಸಿಂಗ್ ಹಾಗೂ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವ ನಿಟ್ಟಿನಲ್ಲಿ, ನರ್ಸಿಂಗ್ ನೋಂದಣಿ ಮತ್ತು ನವೀಕರಣ ಪ್ರಕ್ರಿಯೆಗಳನ್ನು ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಹಿಂದೆ ವಿದ್ಯಾರ್ಥಿಗಳು ರಿಜಿಸ್ಟ್ರೇಷನ್ಗಾಗಿ ಬೆಂಗಳೂರಿಗೆ ಬಂದು ಸಾಲಿನಲ್ಲಿ ನಿಂತು ಪರದಾಡುವ ಸ್ಥಿತಿ ಇತ್ತು. ಈ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ತಪ್ಪಿಸಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ಸುಲಭವಾಗಿ ನೋಂದಣಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು. ಕರ್ನಾಟಕವು ವೈದ್ಯಕೀಯ ಮತ್ತು ಅರೆವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಅತಿ ಹೆಚ್ಚು ವೈದ್ಯಕೀಯ ಕಾಲೇಜುಗಳು, ಪಿ.ಜಿ. ಹಾಗೂ ಎಂಬಿಬಿಎಸ್ ಸೀಟುಗಳು (15,000ಕ್ಕೂ ಅಧಿಕ) ಲಭ್ಯವಿವೆ. ಈ ನಾಯಕತ್ವವನ್ನು ಕೇವಲ ಸಂಖ್ಯೆಯಲ್ಲಿ ಮಾತ್ರವಲ್ಲದೆ, ಗುಣಮಟ್ಟದಲ್ಲೂ ಕಾಯ್ದುಕೊಳ್ಳಲು ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ತು ಕುಲಸಚಿವ ಶ್ರೀಕಾಂತ ಪುಲಾರಿ ಅವರು ಮಾತನಾಡಿ, ಇನ್ನು ಮುಂದೆ ನರ್ಸ್ಗಳು ಪ್ರಾಥಮಿಕ ನೋಂದಣಿ, ನವೀಕರಣ, ಎನ್ಒಸಿ ಹಾಗೂ ಇತರೆ ಸೇವೆಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಮನೆಯಲ್ಲಿ ಪಡೆಯಬಹುದು. ಆಧಾರ್ ಆಧಾರಿತ ಬಯೋಮೆಟ್ರಿಕ್ ಮತ್ತು ಡಿಜಿ ಲಾಕರ್ ತಂತ್ರಜ್ಞಾನದಡಿ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವ ಸುಧಾರಿತ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.ಕೆಎಸ್ಎನ್ಸಿ ಉಪಾಧ್ಯಕ್ಷ ಡಾ. ವೆಂಕಟಗಿರಿ ಮಾತನಾಡಿ, ಸಚಿವರ ಸಹಕಾರದಿಂದ ಈಗ ಎಲ್ಲಾ ಸೇವೆಗಳು ಆನ್ಲೈನ್ನಲ್ಲಿ ಲಭ್ಯವಿದ್ದು, ವಿದೇಶಿ ವಿದ್ಯಾರ್ಥಿಗಳ ಗುಡ್ ಸ್ಟ್ಯಾಂಡಿಂಗ್ ಪ್ರಮಾಣಪತ್ರಗಳನ್ನು ಕೇವಲ 48 ಗಂಟೆಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಎನ್ಆರ್ಟಿಎಸ್ ನರ್ಸಿಂಗ್ ರಿಜಿಸ್ಟ್ರೇಷನ್ ಟ್ರ್ಯಾಕಿಂಗ್ ಸಿಸ್ಟಮ್ ಜಾರಿಗೆ ಬಂದಿದ್ದು, ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದರಿಂದ ದೇಶ ಅಥವಾ ವಿದೇಶದಲ್ಲೂ ಪ್ರಾಕ್ಟೀಸ್ ಮಾಡಲು ಅರ್ಹತೆ ಸಿಗುತ್ತದೆ ಎಂದು ತಿಳಿದರು.ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಡಾ. ಶಿವಕುಮಾರ್ ಸಿ.ಆರ್, ಕಿರಣಕುಮಾರ್ ಅಣ್ಣಿಗೇರಿ ಅವರು ಮಾತನಾಡಿದರು. ಕಾರ್ಯಾಗಾರದಲ್ಲಿ ಜಯದೇವ ಆಸ್ಪತ್ರೆಯ ಸಂಪರ್ಕಾಧಿಕಾರಿ ಡಾ.ರುದ್ರಪ್ಪ ಗುಗ್ಗವಾಡ, ಕರ್ನಾಟಕ ರಾಜ್ಯ ನರ್ಸಿಂಗ್ ಪರೀಕ್ಷಾ ಮಂಡಳಿ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಸದಸ್ಯರಾದ ಡಾ.ಸಿದ್ದು ತಡಲಗಿ, ಚೆನ್ನಮ್ಮ ಗದಗೆ, ವಿವಿಧ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಿದ್ದರು.
