Lapses during survey: Deprived of land rights
-ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಜೊತೆ ಶಾಸಕ ಗೋಪಾಲಕೃಷ್ಣ ಬೇಳೂರು ಸಭೆ
ಕನ್ನಡಪ್ರಭ ವಾರ್ತೆ ಸಾಗರತಾಲೂಕಿನ ಮಲಂದೂರು ಸೇರಿ ಮೀಸಲು ಅರಣ್ಯ ಪಟ್ಟಿಯಲ್ಲಿ ಸೇರಿರುವ ಗ್ರಾಮಸ್ಥರ ಪರವಾಗಿ ಸರ್ಕಾರವಿದೆ.
ಈ ಕುಟುಂಬಗಳಿಗೆ ಭೂಮಿಹಕ್ಕು ಕೊಡಿಸಲು ಸುಪ್ರೀಂಕೋರ್ಟ್‌ಗೆ ಹೋಗುವುದಾದರೆ ಸ್ವಂತವಾಗಿ ಖರ್ಚು ವೆಚ್ಚ ಭರಿಸುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.ಪ್ರವಾಸಿ ಮಂದಿರದಲ್ಲಿ ಮಲಂದೂರು ಮೀಸಲು ಅರಣ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಜತೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸೂರು, ಹೊಸಗುಂದ, ಮಲಂದೂರು, ತಾವರೆಹಳ್ಳಿ, ಯಡೇಹಳ್ಳಿ ಸೇರಿ ೭ಕ್ಕೂ ಹೆಚ್ಚು ಗ್ರಾಮಸ್ಥರು ಹಿಂದೆ ಸರ್ವೆ ನಡೆಸುವಾಗ ಆಗಿರುವ ಲೋಪದಿಂದ ಭೂಮಿಹಕ್ಕಿನಿಂದ ವಂಚಿತರಾಗಿದ್ದಾರೆ ಎಂದರು.
ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರನ್ನು ಒಳಗೊಂಡ ಸಮಿತಿ ರಚಿಸಿ ವರದಿ ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ. ಈಗಾಗಲೆ ಹೈಕೋರ್ಟ್‌ನಲ್ಲಿ ಭೂಮಿ ಗ್ರಾಮಸ್ಥರ ಪರವಾಗಿ ಆಗಿದೆ. ಆದರೂ ಕೆಲವು ಕಾನೂನು ತೊಡಕುಗಳಿಂದ ಅವರು ಹಕ್ಕಿಗಾಗಿ ಅಲೆಯುವಂತೆ ಆಗಿದೆ.೨೦೧೨-೧೩ರಲ್ಲಿ ಆಗಿರುವ ಸಣ್ಣ ಲೋಪದಿಂದ ೨೮೨೨ ಎಕರೆ ಭೂಮಿ ಅರಣ್ಯ ಎಂದು ನಮೂದಾಗಿದೆ.
೬೫೦ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದೆ. ತಮಗಾದ ಅನ್ಯಾಯದ ವಿರುದ್ಧ ಗ್ರಾಮಸ್ಥರಾದ ಗಂಗಾಧರ್ ನೇತೃತ್ವದಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಇವರ ಪರವಾಗಿಯೆ ತೀರ್ಪು ನೀಡಿದೆ ಎಂದರು.ಅರಣ್ಯಭೂಮಿ ಗುರುತಿಸುವ ಸಂಬಂಧ ಹಿಂದೆ ಸರ್ಕಾರ ಸುಬ್ರೋತ್ ಕಾಮತ್ ಅವರನ್ನು ಸೆಟಲ್ಮೆಂಟ್ ಅಧಿಕಾರಿಯಾಗಿ ನೇಮಕ ಮಾಡಿ, ವರದಿ ನೀಡಲು ಸೂಚನೆ ನೀಡಿತ್ತು.
ಈ ಸಂದರ್ಭದಲ್ಲಿ ಜನವಸತಿ ಇರುವ ಪ್ರದೇಶವನ್ನೂ ಸಹ ಅರಣ್ಯ ಎಂದು ವರದಿಯಲ್ಲಿ ತೋರಿಸಿದ್ದೇ ಸಮಸ್ಯೆಗೆ ಕಾರಣ.ಏನೇ ಸಮಸ್ಯೆ ಇದ್ದರೂ ಅದನ್ನು ನಿಭಾಯಿಸಿ ನಿಮ್ಮ ಭೂಮಿಹಕ್ಕು ನಿಮಗೆ ಕೊಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದ ಬೇಳೂರು, ಇಂತಹದ್ದೇ ಸಮಸ್ಯೆ ಇಕ್ಕೇರಿ ಗ್ರಾಮಕ್ಕೆ ಸಂಬಂಧಿಸಿದಂತೆ ಮುಜರಾಯಿ ಜಾಗದಲ್ಲೂ ಕಂಡು ಬಂದಿದ್ದು ಅದನ್ನು ಬಗೆಹರಿಸಲಾಗುತ್ತದೆ. ಪ್ರಜಾಸೇವೆ ಕಾರ್ಯಕ್ರಮದಲ್ಲಿ ಭೂಮಿಹಕ್ಕು ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹ್ಮದ್ ಫಯಾಜುದ್ದೀನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್, ಗ್ರಾಮಸ್ಥರಾದ ಗಂಗಾಧರ್, ಚೇತನರಾಜ್ ಕಣ್ಣೂರು, ಶ್ರೀನಿವಾಸಮೂರ್ತಿ ಇದ್ದರು...ಬಾಕ್ಸ್..
ವಿಜಯೇಂದ್ರ ಬಿಂಬಿಸುವ ಪಾದಯಾತ್ರೆಬಳ್ಳಾರಿ ಪಾದಯಾತ್ರೆ ಬಿಜೆಪಿ ಪಾದಯಾತ್ರೆಯಲ್ಲ, ಬದಲಾಗಿ ವಿಜಯೇಂದ್ರರನ್ನು ಬಿಂಬಿಸಲು, ರೆಡ್ಡಿಗಳ ಹಣ ಖರ್ಚು ಮಾಡಲು ಮಾಡಿದ ಪಾದಯಾತ್ರೆ. ಇದರಿಂದ, ವಿಜಯೇಂದ್ರರಿಗೆ, ರೆಡ್ಡಿಗಳಿಗೆ ಯಾವುದೇ ಲಾಭ ಇಲ್ಲ. ೨೦೨೮ರ ಚುನಾವಣೆಯಲ್ಲಿ ಮತ್ತೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಡಿಕೆ ಜನಸಾಮಾನ್ಯರ ಸಿಎಂ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಅವಿರತ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿ ಸಹ ಉತ್ತಮವಾಗಿ ನಡೆಯುತ್ತಿದೆ ಎಂದ ಅವರು, ಸ್ಥಳೀಯ ಮಾಜಿ ಶಾಸಕರು ನಾನು, ಶಿಕ್ಷಕ ದಿನಾಚರಣೆಗೆ ಹೋಗಿಲ್ಲ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ನಿಜ, ನಾನು ರೈತ ಸಮೂಹದ ಏಳಿಗೆಗೆ ಕಸ್ತೂರಿ ರಂಗನ್ ವರದಿ ವಿರೋಧಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರಿಂದ ಶಿಕ್ಷಕ ದಿನಾಚರಣೆಗೆ ಹೋಗಲು ಸಾಧ್ಯವಾಗಿಲ್ಲ.
ಇವರ ರೀತಿ ಶಿಕ್ಷಣ ಸಂಸ್ಥೆಯೊಂದಕ್ಕೆ ಹೋಗಿ ತಮ್ಮ ಪಟಾಲಂ ಮೂಲಕ ಗೂಂಡಾಗಿರಿ ನಡೆಸಿ ಹೆಣ್ಣುಮಕ್ಕಳ ಮೇಲೆ ಹಲ್ಲೆ ನಡೆಸಿಲ್ಲ ಎಂದು ಹಾಲಪ್ಪನವರಿಗೆ ಕೌಂಟರ್ ನೀಡಿದರು.ಪೋಟೊ
೧೨ಕೆ.ಎಸ್.ಎ.ಜಿ.೧ಮಲಂದೂರು ಮೀಸಲು ಅರಣ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬೇಳೂರು ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ಜೊತೆ ಸಭೆ ನಡೆಸಿದರು.