ರಾಜ್ಯದಲ್ಲಿ ಅವೈಜ್ಞಾನಿಕವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಸಿದ್ದು, ಈ ಪ್ರಕ್ರಿಯೆ ವಿರೋಧಿಸಿ ಸೆ. 1ರಂದು ರಾಜಧಾನಿ ಬೆಂಗಳೂರಿನಲ್ಲಿ ಚುನಾವಣಾ ಆಯೋಗ ಚಲೋ ಧರಣಿ ಆಯೋಜಿಸಲಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಧಾರವಾಡ: ರಾಜ್ಯದಲ್ಲಿ ಅವೈಜ್ಞಾನಿಕವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ನಡೆಸಿದ್ದು, ಈ ಪ್ರಕ್ರಿಯೆ ವಿರೋಧಿಸಿ ಸೆ. 1ರಂದು ರಾಜಧಾನಿ ಬೆಂಗಳೂರಿನಲ್ಲಿ ಚುನಾವಣಾ ಆಯೋಗ ಚಲೋ ಧರಣಿ ಆಯೋಜಿಸಲಾಗಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೇ ತಿಂಗಳಲ್ಲಿ ತರಾತುರಿಯಾಗಿ ಎಸ್‌ಐಆರ್ ತಪ್ಪಾಗಿ ಮಾಡಲಾಗಿದೆ. ಆರು ತಿಂಗಳು ಕಾಲವಕಾಶ ನೀಡಿ, ಈ ಪ್ರಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಮಾಡಬೇಕಿತ್ತು ಎಂದು ಪ್ರತಿಪಾದಿಸಿದರು.

ಐದೂವರೆ ಕೋಟಿ ಪ್ರಜೆಗಳಿರುವ ಕರ್ನಾಟಕದಲ್ಲಿ ತರಾತುರಿಯಲ್ಲಿ ತಪ್ಪಾಗಿ ಎಸ್ಐಆರ್ ಪ್ರಕ್ರಿಯೆ ಮಾಡಿದ್ದರಿಂದ ಲಕ್ಷಾಂತರ ಮತದಾರರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ರಾಜ್ಯದಲ್ಲಿ 43 ಲಕ್ಷಕ್ಕೂ ಅಧಿಕ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವಂತಾಗಿದೆ. ಅವೈಜ್ಞಾನಿಕ ಎಸ್ಐಆರ್ ವಿರುದ್ಧ ಸೆ. 1ರಂದು ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ''''''''ಚುನಾವಣಾ ಆಯೋಗ ಚಲೋ'''''''' ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ನಡೆಸದೇ, ಕನಿಷ್ಠ 6 ತಿಂಗಳು ಕಾಲವಕಾಶ ಕೊಡದೇ ಅವಸರದಲ್ಲಿ ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆಯಲ್ಲಿ ಮಾಡಿದ್ದನ್ನು ನಾಗರಿಕ ಸಮಾಜ ಒಪ್ಪುವುದಿಲ್ಲ. ರಾಜ್ಯ ಮುಖ್ಯ ಚುನಾವಣಾಧಿಕಾರಿಯಾಗಲಿ ಅಥವಾ ಬಿಎಲ್ಒಗಳ ವಿರುದ್ಧ ನಮ್ಮ ಹೋರಾಟವಲ್ಲ, ನಮ್ಮ ಹೋರಾಟ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಂದರು.

ಸ್ಥಳಾಂತರ ಹಾಗೂ ಮನೆ ಬದಲಾಯಿಸಿದ ತಕ್ಷಣ ಒಬ್ಬ ಹಳೆಯ ಮತದಾರರನ್ನು ಹೊಸಬನಂತೆ ನೋಂದಣಿ ಮಾಡಲು ಫಾರಂ ನಂ. 6 ಸಲ್ಲಿಸುವಂತೆ ಆಯೋಗ ಕೇಳುತ್ತಿರುವುದು ತಪ್ಪು. ಹಳೇ ಮತದಾರರು ದಿಢೀರ್ ಹೊಸ ಮತದಾರರು ಆಗಬೇಕೆ? ಗೈರು, ಸ್ಥಳಾಂತರ ಆಗಿರುವವರಿಗೆ ಫಾರ್ಮ್‌ ನಂ. 6'''''''' ಕೊಡುವ ಬದಲು ಫಾರ್ಮ್‌ ನಂ. 8 ಭತಿರ್ಗೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ಹೆಸರು, ವಯಸ್ಸು, ಸ್ಪೆಲಿಂಗ್, ಒಂದು ಮಗುವಿಗೂ ಇನ್ನೊಂದು ಮಗುವಿಗೂ 9 ತಿಂಗಳು ವ್ಯತ್ಯಾಸವಿರಬೇಕು ಎಂದು ನಿಯಮ ರೂಪಿಸಲಾಗಿದೆ. ಅವಳಿ ಮಕ್ಕಳಿದ್ದರೆ ಏನು ಮಾಡಬೇಕು? ನಾಗರಿಕ ಸಮಾಜ ಇದನ್ನು ಪ್ರಶ್ನಿಸುತ್ತಿದೆ. ಎಷ್ಟೋ ಮತದಾರರಿಗೆ ಎನ್ಯುಮುರೇಷನ್ ಫಾರ್ಮ್‌ ಹೋಗಿಲ್ಲ. ಹೋದರೂ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಭರ್ತಿ ಮಾಡಿ ಕೊಟ್ಟಿರುವ ಅದೆಷ್ಟೋ ಫಾರ್ಮ್‌ಗಳನ್ನು ಬಿಎಲ್ಒ ಅಪ್‌ಲೋಡ್‌ ಮಾಡಿಲ್ಲ. ಲಕ್ಷಾಂತರ ಮತದಾರರು ನಮ್ಮ ಹಕ್ಕು ವಾಪಸ್ ಕೊಡಿ ಎಂದು ಕೇಳುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಶಂಕರ ಹಲಗತ್ತಿ, ಡಾ. ಇಸಬೆಲ್ಲಾ ಝೇವಿಯರ, ಇಸಾಕ ತಮಟಗಾರ, ವಿಶ್ವೇಶ್ವರಿ ಹಿರೇಮಠ, ಮುಸ್ತಾಕ ಹಾವೇರಪೇಟ ಇದ್ದರು.