ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕಪಿಲೇಶ್ವರ ಮಂದಿರ ಸುತ್ತ-ಮುತ್ತಲಿನ ಸುಮಾರು 500 ಮುಕ್ಕಾದ ದೇವರ ಫೋಟೋಗಳನ್ನು ಸಂಗ್ರಹಿಸಿದ ಸರ್ವಲೋಕ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಹಿಂದು ವಿಧಿ-ವಿಧಾನಗಳ ಮೂಲಕ ಅಂತಿಮ ಸಂಸ್ಕಾರ ನೀಡಿದರು.

ಬೆಳಗಾವಿ ಜನರಿಗೆ ಸಾಕಷ್ಟು ಬಾರಿ ವೀರೇಶ ಬಸಯ್ಯ ಹಿರೇಮಠ ಅವರು ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ನಡುವೆ ಇಡುವ ಬದಲು ಅದನ್ನು ತಾವೇ ಸ್ವತಃ ಮುಂದೆ ನಿಂತು ವಿರ್ಸನೆ ಮಾಡಬೇಕೆಂದು ತಿಳುವಳಿಕೆ ನೀಡಿದ್ದರೂ ಜನರು ಮತ್ತೆ ಅದೇ ಕಾಯಕ ಮಾಡುತ್ತಿದ್ದಾರೆ. ತಮ್ಮ ನಿತ್ಯದ ಕೆಲಸದ ಜೊತೆಗೆ ತಮ್ಮ ತಂಡದ ಜೊತೆಗೆ ಮುಕ್ಕಾದ ಫೋಟೋ ಸಂಗ್ರಹ ಕಾರ್ಯವನ್ನು ವೀರೇಶ ಹಿರೇಮಠ ಮುಂದುವರೆಸಿದ್ದಾರೆ. ಈ ಸಂದರ್ಭದಲ್ಲಿ ಯೋಗೀಶ್ ದೇಸೂರಕರ, ಬಾಳು ಕಣಬರಕರ, ಗೌರೀಶ್ ಹಿರೇಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕೋಟ್...ಹಿಂದು ಸಂಪ್ರದಾಯದಂತೆ ದೇವರ ಫೋಟೋಗಳಿಗೂ ಜೀವ ಇರುತ್ತದೆ. ದೇವಸ್ಥಾನ, ಜಾತ್ರೆ ಸೇರಿದಂತೆ ಐತಿಹಾಸಿಕ ತಾಣಗಳಿಂದ ತೆಗೆದುಕೊಂಡು ಬಂದ ದೇವರ ಫೋಟೋವನ್ನು ಮನೆಯಲ್ಲಿ ಪೂಜೆ ಮಾಡಿ ಜನರು ಅದಕ್ಕೆ ಜೀವ ನೀಡುತ್ತಾರೆ. ಭಕ್ತಿ ಭಾವದಿಂದ ನೋಡುತ್ತಾರೆ. ಅದೇ ಫೋಟೋ ಮುಕ್ಕಾದಾಗ ದೇವಸ್ಥಾನ, ಗಿಡ, ಮರಗಳ ಕೆಳಗಡೆ ಇಡುವುದು ಸರಿಯಲ್ಲ. ಅದನ್ನು ಸರಿಯಾದ ರೀತಿಯಲ್ಲಿ ವಿಸರ್ಜನೆ ಮಾಡಬೇಕು.
-ವೀರೇಶ ಬಸಯ್ಯ ಹಿರೇಮಠ, ಸರ್ವಲೋಕ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರು.