ಪಾಲಗ್ರಹಾರ ಗ್ರಾಪಂ ಉಪಾಧ್ಯಕ್ಷರಾಗಿ ಲತಾ ಚನ್ನಪ್ಪ ಆಯ್ಕೆ

| Published : Jul 02 2024, 01:30 AM IST

ಪಾಲಗ್ರಹಾರ ಗ್ರಾಪಂ ಉಪಾಧ್ಯಕ್ಷರಾಗಿ ಲತಾ ಚನ್ನಪ್ಪ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಲತಾ ಚನ್ನಪ್ಪ ಉಪಾಧ್ಯಕ್ಷೆಯಾಗಿ ಗೆಲುವು ಸಾಧಿಸಿದರೆಂಬ ಮಾಹಿತಿ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಪಂ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಪಾಲಗ್ರಹಾರ ಗ್ರಾಪಂ ಉಪಾಧ್ಯಕ್ಷರಾಗಿ ಕೋಟೆಬೆಟ್ಟ ಗ್ರಾಮದ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಲತಾ ಚನ್ನಪ್ಪ ಚುನಾಯಿತರಾದರು.

ಗ್ರಾಪಂನ 9 ಮಂದಿ ಸದಸ್ಯ ಬಲದಲ್ಲಿ ಹಿಂದಿನ ಉಪಾಧ್ಯಕ್ಷೆ ಹಾಲಿ ಗ್ರಾಮದ ಪುಷ್ಪ ಗಿರೀಶ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಲತಾ ಚನ್ನಪ್ಪ ಮತ್ತು ಭಾಗ್ಯಮ್ಮ ನಾಮಪತ್ರ ಸಲ್ಲಿಸಿದ್ದರು. 5 ಮತ ಪಡೆದು ಲತಾ ಗೆಲುವು ಸಾಧಿಸಿದರೆ, 3 ಮತ ಪಡೆದ ಭಾಗ್ಯಮ್ಮ ಪರಾಭವಗೊಂಡರು. ತಾಪಂ ಇಒ ಚಂದ್ರಮೌಳಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.

ಲತಾ ಚನ್ನಪ್ಪ ಉಪಾಧ್ಯಕ್ಷೆಯಾಗಿ ಗೆಲುವು ಸಾಧಿಸಿದರೆಂಬ ಮಾಹಿತಿ ಪ್ರಕಟಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಗ್ರಾಪಂ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿಕೆ ಮಾಡಿ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಪರ ಜಯಘೋಷಮೊಳಗಿಸಿ ವಿಜಯೋತ್ಸವ ಆಚರಿಸಿದರು.

ಈ ವೇಳೆ ಗ್ರಾಪಂ ಅಧ್ಯಕ್ಷೆ ರಾಧಾ ನಾಗರಾಜು, ಸದಸ್ಯರಾದ ಪುಷ್ಪ ಗಿರೀಶ್, ಸುಂದರ್‌ರಾಜ್, ದೇವಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎನ್.ಗಿರೀಶ್, ಮುಖಂಡರಾದ ಬಿ.ಎನ್.ವನರಾಜು, ಪುಟ್ಟರಾಜು, ಬಿ.ಎನ್.ರಾಜೇಶ್, ಹರೀಶ್, ಬಿ.ವಿ.ಗಿರೀಶ್ ಸೇರಿದಂತೆ ಹಲವರು ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಸರ್ಕಾರ ನೀಡುವ ಪರಿಸರ ಪ್ರಶಸ್ತಿಗೆ ರಮೇಶ್ ಆಯ್ಕೆ

ಶ್ರೀರಂಗಪಟ್ಟಣ:ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ವ್ಯಕ್ತಿಗಳಿಗೆ ರಾಜ್ಯ ಸರ್ಕಾರ ಕೊಡ ಮಾಡುವ 2024ನೇ ಸಾಲಿನ ಪರಿಸರ ಪ್ರಶಸ್ತಿಗೆ ಪರಿಸರ ಪ್ರೇಮಿ ರಮೇಶ್ ಆಯ್ಕೆಯಾಗಿದ್ದಾರೆ.

ಪಟ್ಟಣದ ಚಿಕ್ಕಬಂಡಿಕೇರಿ ಬೀದಿ ನಿವಾಸಿ ರಮೇಶ್ ವೈ.ಬಿನ್. ಯಾಲಕ್ಕಯ್ಯ ದಕ್ಷಿಣ ವಲಯದ ವ್ಯಕ್ತಿ ವಿಭಾಗದಿಂದ ಆಯ್ಕೆಯಾಗಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜು.3ರಂದು ಬೆಂಗಳೂರಿನ ಕಂಠೀರಣ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ವನ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.ರಾಜ್ಯ ಸರ್ಕಾರ ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರದಲ್ಲಿ ವ್ಯಕ್ತಿ ಮತ್ತು ಸಂಸ್ಥೆಗಳು ಸಲ್ಲಿಸಿರುವ ಸೇವೆ ಗುರುತಿಸಿ ಸನ್ಮಾನಿಸಿ 1 ಲಕ್ಷ ರು. ನಗದು ಹಾಗೂ ಪ್ರಶಸ್ತಿ ಪತ್ರ ನೀಡುವುದಾಗಿ ಅಧಿಕೃತ ಪತ್ರ ಪ್ರಕಟಣೆ ಹೊರಡಿಸಿದೆ.

ಅರಣ್ಯ ಅಭಿವೃದ್ಧಿ ಮಾಡುವಲ್ಲಿ 12 ವರ್ಷಗಳ ನಿರಂತರ ನನ್ನ ಪ್ರಕೃತಿ ಸೇವೆಯನ್ನು ಪರಿಗಣಿಸಿ, ರಾಜ್ಯ ಸರ್ಕಾರವು ಪ್ರಶಸ್ತಿ ನೀಡಿ ಗೌರವಿಸುತಿರುವುದು ತುಂಬಾ ಹರ್ಷ ತಂದಿದೆ. ಜೊತೆಗೆ ಮತ್ತಷ್ಟು ಸೇವೆಯಲ್ಲಿ ತೊಡಗಲು ಪ್ರೇರಣೆ ನೀಡಿದೆ ಎಂದುಪರಿಸರ ರಮೇಶ್ ತಿಳಿಸಿದ್ದಾರೆ.