25 ರಂದು ಕೆ.ಎಸ್. ಅಶ್ವತ್ಥ್ ಜನ್ಮ ಶತಾಬ್ಧಿ

| Published : Mar 21 2025, 12:37 AM IST

ಸಾರಾಂಶ

ಕೆ.ಎಸ್. ಅಶ್ವತ್ಥ್ ಅವರು 1955 ರಲ್ಲಿ ಸ್ತ್ರೀರತ್ನ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರೂ ಬಳಿಕ ಪೋಷಕ ಪಾತ್ರಗಳ ಮೂಲಕ ಜನರ ಮನದಲ್ಲಿ ಉಳಿದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟರಲ್ಲೊಬ್ಬರಾದ ದಿವಂಗತ ಕೆ.ಎಸ್. ಅಶ್ವತ್ಥ್ ಅವರ ಜನ್ಮಶತಾಬ್ಧಿ ಹಿನ್ನೆಲೆಯಲ್ಲಿ ಮಾ.25ರ ಸಂಜೆ 4.30ಕ್ಕೆ ನಗರದ ಕಲಾಮಂದಿರದಲ್ಲಿ ಕೆ.ಎಸ್. ಅಶ್ವತ್ಥ್‌ 100 ಜನ್ಮ ಶತಾಬ್ಧಿ ಆಯೋಜಿಸಲಾಗಿದೆ ಎಂದು ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ನಾಡಿನ ಗಣ್ಯರಿಂದ ನುಡಿನಮನ, ಛಾಯಾಚಿತ್ರ ಪ್ರದರ್ಶನ, ಕರ್ನಾಟಕ ಸುಗಮ ಸಂಗೀತ ಪರಿಷತ್ ಗಾಯಕರಿಂದ ಗೀತ ನಮನ ನಡೆಯಲಿದೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕೆ.ಎಸ್. ಅಶ್ವತ್ಥ್ ಅವರು 1955 ರಲ್ಲಿ ಸ್ತ್ರೀರತ್ನ ಚಲನಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರೂ ಬಳಿಕ ಪೋಷಕ ಪಾತ್ರಗಳ ಮೂಲಕ ಜನರ ಮನದಲ್ಲಿ ಉಳಿದಿದ್ದಾರೆ. ನಾಗರಹಾವು ಚಿತ್ರದ ಚಾಮಯ್ಯ ಮೇಸ್ಟ್ರು ಪಾತ್ರದಿಂದಾಗಿ ನಂತರವೂ ಚಾಮಯ್ಯ ಮೇಷ್ಟ್ರು ಎಂದೇ ಕರೆಸಿಕೊಳ್ಳುತ್ತಿದ್ದರು. ನಮ್ಮ ಮಕ್ಕಳು, ಮುತ್ತಿನಹಾರ ಮೊದಲಾದ 350 ಚಿತ್ರದಲ್ಲಿ ನಟಿಸಿದ್ದು, ಡಾ. ರಾಜ್‌ ಕುಮಾರ್ ಅವರ ಚಿತ್ರಗಳಲ್ಲಿನ ಪಾತ್ರ ಅಚ್ಚಳಿಯದೇ ಉಳಿದಿವೆ. ಹೀಗಾಗಿ, ಅವರನ್ನು ಸ್ಮರಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.ಕೆ.ಎಸ್. ಅಶ್ವತ್ಥ್ ಅವರ ಪುತ್ರ, ಹಿರಿಯ ಕಲಾವಿದ ಶಂಕರ್ ಅಶ್ವತ್ಥ್ ಮಾತನಾಡಿ, ಈ ಕಾರ್ಯಕ್ರಮದಲ್ಲಿ ಹಿರಿಯ ನಟರಾದ ಶ್ರೀನಾಥ್, ದೊಡ್ಡಣ್ಣ, ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್, ಬಿ. ಗಣಪತಿ, ಅಂಶಿ ಪ್ರಸನ್ನಕುಮಾರ್ ಮೊದಲಾದವರು ಪಾಲ್ಗೊಳ್ಳುವರು ಎಂದರು.ಕರ್ನಾಟಕ ಸುಗಮ ಸಂಗೀತ ಪರಿಷತ್ತು ಜಿಲ್ಲಾಧ್ಯಕ್ಷ ನಾಗರಾಜ್ ವಿ. ಬೈರಿ, ಮಂಡ್ಯ ಸತ್ಯ, ನಾಗರಾಜ್, ಬೆಟ್ಟೇಗೌಡ ಇದ್ದರು.