ಸಾರಾಂಶ
ಸವಣೂರು: ಮಕ್ಕಳಲ್ಲಿರುವ ಸೂಪ್ತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಇಂತಹ ವೇದಿಕೆಗಳು ಅ ವಕಾಶಗಳನ್ನು ಕಲ್ಪಿಸುತ್ತಿವೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಹೇಳಿದರು. ತಾಲೂಕಿನ ಹೊಸನೀರಲಗಿ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾವೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸವಣೂರ ಹಾಗೂ ಸಮೂಹ ಸಂಪನ್ಮೂಲ ಕೇಂದ್ರ ಕಾರಡಗಿ ಸಂಯುಕ್ತ ಆಶ್ರಯದಲ್ಲಿ ಕಾರಡಗಿ ಕ್ಲಸ್ಟರ ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಗ್ರಾಮದ ದಾನಿಗಳಿಂದ ಸುಮಾರು ೭೫ ಸಂಗ್ರಹಿಸಿ ಶಾಲೆಯ ೧೩ ಕೊಠಡಿಗಳಿಗೆ ಸಿಸಿ ಟಿವಿ ಅಳವಡಿಸಿ ಚಾಲನೆ ನೀಡಲಾಗಿದೆ.ಇದರಿಂದಾಗಿ ಮಕ್ಕಳಿಗೆ ಪಾರದರ್ಶಕ ಶಿಕ್ಷಣಕ್ಕೆ ಸಹಕಾರಿಯಾಗಲಿದೆ ಎಂದ ಅವರು ಸಿಸಿ ಟಿವಿ ಅಳವಡಿಸಲು ದೇಣಿಗೆ ನೀಡಿದ ದಾನಿಗಳಿಗೆ ಅಭಿನಂದಿಸಿ ದಾನಿಗಳು ಹೆಚ್ಚಾದಲ್ಲಿ ಗ್ರಾಮದ ಶಾಲೆ ಜಿಲ್ಲೆಯ ಇತರೆ ಶಾಲೆಗಳಿಗೆ ಮಾದರಿಯಗಲಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಓ ಎಂ.ಎಫ. ಬಾರ್ಕಿ, ಶಾಲಾ ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಮತ್ತು ಅವರ ಪ್ರತಿಭೆಯನ್ನು ಅನಾವರಣಗೊಳಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಅತ್ಯುತ್ತಮವಾದ ವೇದಿಕೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಕವಿತಾ ವಾಲ್ಮೀಕಿ, ನಿಂಗಪ್ಪ ಬಸನಾಳ, ಶೇಖಪ್ಪ ಮಾಗಿ, ಈಶ್ವರ ಬಡಿಗೇರ, ನೀಲವ್ವ ದಳವಾಯಿ, ರೇಣುಕಾ ಕಿನ್ನೂರಿ, ಪವಿತ್ರಾ ಬಾಣದ, ಗ್ರಾಮದ ಹಿರಿಯರಾದ ಗಂಗಾಧರ ಬಾಣದ, ಫಕ್ಕೀರಪ್ಪ ವಾಲ್ಮೀಕಿ, ನಿಂಗಪ್ಪ ಹಳವಳ್ಳಿ, ಶಿದ್ದಪ್ಪ ಶಿಗ್ಗಾಂವಿ, ನಾಗರಾಜ ವಾಲ್ಮೀಕಿ, ಗ್ರಾ.ಪಂ.ಸದಸ್ಯರಾದ ಈಶ್ವರ ವಿಜಾಪೂರ, ಗೀತಾ ಶಿಗ್ಗಾಂವಿ, ದ್ಯಾಮವ್ವ ಹರಿಜನ, ಬಿಆರ್‌ಸಿ ಎಂ.ಎನ್.ಅಡಿವೆಪ್ಪನವರ, ಸಿಆರ್‌ಪಿ ಎಂ.ಆರ್.ರಿತ್ತಿ, ಪ್ರಧಾನ ಗುರು ಪ್ರವೀಣ ಗುಜ್ಜರ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಎಸ್.ಟಿ.ಮಹಾಪುರುಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಚ್.ಮಾದರ ಸ್ವಾಗತಿಸಿದರು. ಸುಜಾತ ಸಿ.ಎಸ್. ನಿರೂಪಿಸಿದರು. ಸೀಮಾ ಮಠಪತಿ ವಂದಿಸಿದರು.