ಸಾರಾಂಶ
ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುವ ಸಂಶೋಧನಾ ಪತ್ರಿಕೆ ಲೋಕಜ್ಞಾನದ ಸಂಯುಕ್ತ ಸಂಚಿಕೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಕುಲಸಚಿವೆ ನಾಹಿದಾ ಜುಮ್ ಜುಮ್ ಮಂಗಳವಾರ ಬಿಡುಗಡೆಗೊಳಿಸಿದರು.
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸುವ ಸಂಶೋಧನಾ ಪತ್ರಿಕೆ ಲೋಕಜ್ಞಾನದ ಸಂಯುಕ್ತ ಸಂಚಿಕೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮತ್ತು ಕುಲಸಚಿವೆ ನಾಹಿದಾ ಜುಮ್ ಜುಮ್ ಮಂಗಳವಾರ ಬಿಡುಗಡೆಗೊಳಿಸಿದರು. ಲೋಕಜ್ಞಾನ ಯುಜಿಸಿ ಕೇರ್ ಮಾನ್ಯತೆ ಹೊಂದಿರುವ ಪತ್ರಿಕೆಯಾಗಿದ್ದು, ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲೇ ತುಮಕೂರು ವಿಶ್ವವಿದ್ಯಾಲಯದ ಈ ಪತ್ರಿಕೆಗೆ ಮಾತ್ರ ಇಂತಹ ಮಾನ್ಯತೆ ಒದಗಿದೆ.ಇಲ್ಲಿಯ ಎಲ್ಲ ಲೇಖನಗಳು ಆಹ್ವಾನಿತ ಲೇಖನಗಳಾಗಿದ್ದು ಕನ್ನಡ ಸಂಶೋಧನೆಯ ಗಾಂಭೀರ್ಯವನ್ನು ಎತ್ತಿ ಹಿಡಿಯುತ್ತಿವೆ ಎಂದು ಕುಲಪತಿಪ್ರೊ. ಎಂ.ವೆಂಕಟೇಶ್ವರಲು ಈ ಸಂದರ್ಭದಲ್ಲಿ ತಿಳಿಸಿದರು.
ಲೋಕಜ್ಞಾನದ ನಿಯತಕಾಲಿಕೆ ಸಂಪಾದಕ ಪ್ರೊ.ನಿತ್ಯಾನಂದ ಬಿ.ಶೆಟ್ಟಿ, ಆಂತರಿಕ ಗುಣಮಟ್ಟ ಭರವಸೆ ಕೋಶದ (ಐಕ್ಯೂಎಸಿ)ನಿರ್ದೇಶಕ ಪ್ರೊ. ಬಿ.ರಮೇಶ್, ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಂಡಳಿ (ಪಿಎಂಇಬಿ) ನಿರ್ದೇಶಕ ಪ್ರೊ.ಬಿ. ಟಿ.ಸಂಪತ್ ಕುಮಾರ್ ಮತ್ತು ವಿವಿಯ ಉದ್ಯೋಗಾಧಿಕಾರಿ ಪ್ರೊ.ಕೆ.ಜಿ. ಪರಶುರಾಮ ಉಪಸ್ಥಿತರಿದ್ದರು.