ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರು ಬಿಡುಗಡೆ

| Published : Nov 18 2024, 12:01 AM IST

ಸಾರಾಂಶ

ಸುಮಾರು ೧೫ ದಿನಗಳ ಜೀವಿತಾವಧಿಯನ್ನು ಹೊಂದಿರುವ ಈ ಉತ್ಪನ್ನದ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯ ಸುಧಾರಣೆ, ಮೂಳೆಗಳ ಬೆಳವಣಿಗೆ, ತೂಕ ನಿರ್ವಹಣೆ, ಹೃದಯ ರಕ್ತನಾಳದ ಆರೋಗ್ಯ ವೃದ್ಧಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಶನಿವಾರ ನಡೆದ 71ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ ಕೆಎಂಎಫ್‌ ವ್ಯಾಪ್ತಿಯಲ್ಲಿಯೇ ಪ್ರಥಮವಾಗಿ ನಂದಿನಿ ಪ್ರಿಮಿಯಮ್ ಪ್ರೊಬಯಾಟಿಕ್ ಮೊಸರನ್ನು ಬಿಡುಗಡೆಗೊಳಿಸಿದೆ.

ರಾಜ್ಯ ಸಹಕಾರ ಸಚಿವ ಕೆ. ಎನ್. ರಾಜಣ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಸಚಿವ ದಿನೇಶ್ ಗುಂಡುರಾವ್ ಮತ್ತು ಇತರ ಗಣ್ಯರ ಸಮಕ್ಷಮದಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.

ಸುಮಾರು ೧೫ ದಿನಗಳ ಜೀವಿತಾವಧಿಯನ್ನು ಹೊಂದಿರುವ ಈ ಉತ್ಪನ್ನದ ಸೇವನೆಯಿಂದ ಉತ್ತಮ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿಯ ಸುಧಾರಣೆ, ಮೂಳೆಗಳ ಬೆಳವಣಿಗೆ, ತೂಕ ನಿರ್ವಹಣೆ, ಹೃದಯ ರಕ್ತನಾಳದ ಆರೋಗ್ಯ ವೃದ್ಧಿ, ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಎಲ್ಲ ವಯೋಮಾನದವರು ಉಪಯೋಗಿಸಲು ಯೋಗ್ಯವಾಗಿದ್ದು ಗ್ರಾಹಕರು ಇದರ ಸದುಪಯೋಗವನ್ನು ಪಡದುಕೊಳ್ಳುವಂತೆ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದರು. ಒಕ್ಕೂಟದ ಉಪಾಧ್ಯಕ್ಷ ಎಸ್. ಬಿ. ಜಯರಾಮ ರೈ, ಒಕ್ಕೂಟದ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕ ವಿವೇಕ್ ಡಿ. ಮತ್ತಿತರರಿದ್ದರು.