ಸಾರಾಂಶ
ಬಿಜೆಪಿ ಕಚೇರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ।
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣಬಿಜೆಪಿ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕನಸಿನ ವಿಶ್ವಕರ್ಮ ಯೋಜನೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ಧರಾಮಯ್ಯ ಮಾತನಾಡಿ, ಮೋದಿಯವರ ಗ್ಯಾರಂಟಿಯಲ್ಲಿ ಫಲಾನುಭವಿಗಳಿಗೆ ಮೊದಲು1 ಲಕ್ಷ ಹಣವನ್ನು ಶೇ.5 ರಷ್ಟು ಬಡ್ಡಿಯಂತೆ ಸಾಲ ನೀಡಲಾಗುವುದು. ಆ ಹಣವನ್ನು 18 ತಿಂಗಳು ಒಳಗೆ ಮರುಪಾವತಿಸಿದರೆ ಮತ್ತೆ 3 ಲಕ್ಷ ಹಣವನ್ನು ನೀಡಲಾಗುವುದು. ಇದರ ಸದುಪಯೋಗವನ್ನು ಎಲ್ಲ ಫಲಾನುಭವಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವಿಶ್ವಕರ್ಮ ಯೋಜನೆ ಜಿಲ್ಲಾ ಸಂಚಾಲಕ ಮದ್ದೂರು ಸತೀಶ್ ಮಾತನಾಡಿ, ಟೈಲರ್, ಗಾರೆ ಕೆಲಸಗಾರ, ಆಯುಧ ತಯಾರಕ, ಕಂಬಾರ, ಕುಂಬಾರ, ಕ್ಷೌರಿಕ, ಅಕ್ಕಸಾಲಿಗ, ಮರ ಕೆಲಸಗಾರ, ಮೀನು ಬಲೆ ತಯಾರಕ, ಅಗಸ (ಡೋಬಿ) ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಫಲಾನುಭವಿಗಳು ಈ ಯೋಜನೆಯನ್ನು ಬಳಕೆ ಮಾಡಿ ತಮ್ಮ ವೃತ್ತಿ ಜೀವನದ ಆರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದರು.ರಾಜ್ಯ ಬಿಜೆಪಿ ರೈತ ಮೋರ್ಚ ಉಪಾಧ್ಯಕ್ಷ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಹಿಂದೆ ಯಾವುದೇ ಯೋಜನೆಗಳು ಪ್ರಾರಂಭವಾದರೂ ಜನಸಾಮಾನ್ಯರಿಗೆ ತಲುಪುತ್ತಿರಲಿಲ್ಲ. ಪ್ರಧಾನಿ ಮೋದಿ ಅವರ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಹಣವನ್ನು ನೇರವಾಗಿ ರೈತರ ಖಾತೆಗೆ ಹಾಕುವ ಮುಖಾಂತರ ಒಂದು ಇತಿಹಾಸವನ್ನು ನಿರ್ಮಿಸಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ರಮೇಶ್ ಮಾತನಾಡಿ, ಇಲ್ಲಿವರೆಗೆ ಹಲವರು ಈ ಯೋಜನೆಯು ಕೇವಲ ಒಂದೇ ಜನಾಂಗಕ್ಕೆ ಮೀಸಲಾಗಿತ್ತು ಎಂದು ಭಾವಿಸಿದ್ದರು. ಆದರೆ, ಇಂದು ಎಲ್ಲಾ ಜಾತಿ, ಜನಾಂಗಕ್ಕೂ ಕರಕುಶಲ ಕೆಲಸ ಮಾಡುವ ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕಾರ್ಯದರ್ಶಿಗಳಾದ ಪೈಲ್ವಾನ್ ಮಾದೇವು, ಇಂದ್ರಕುಮಾರ್, ವಿಶ್ವಕರ್ಮ ಯೋಜನೆಯ ಸಹಸಂಚಾಲಕ ನರಸಿಂಹಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ನಮೋ ಆಪ್‌ನ ಜಿಲ್ಲಾ ಸಂಚಾಲಕ ರಂಜಿತಾ, ತಾಲೂಕು ಸಂಚಾಲಕ ಕಿರಣ್ ಕುಮಾರ್, ಬಿ.ಸಿ ಕಷ್ಣೇಗೌಡ, ರೈತ ಮೋರ್ಚ ಅಧ್ಯಕ್ಷ ಡಿ.ಮಂಜುನಾಥ್ ಸೇರಿದಂತೆ ಇತರರು ಇದ್ದರು.-----------
6ಕೆಎಂಎನ್ ಡಿ34ಶ್ರೀರಂಗಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಿನ ವಿಶ್ವಕರ್ಮ ಯೋಜನೆಯಲ್ಲಿ ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ಮಾತನಾಡಿದರು.