ಸಮೃತ್ ಕೈಮಗ್ಗ ತರಬೇತಿಗೆ ಚಾಲನೆ

| Published : Jan 29 2025, 01:34 AM IST

ಸಾರಾಂಶ

ಕೇರಳಾಪುರ ಗ್ರಾಮದ ಶ್ರೀ ರಾಮ ಕೈ ಮಗ್ಗ ನೇಕಾರರ ಉತ್ಪನ್ನ ಮತ್ತು ಮಾರಾಟ ಸೇವಾ ಸಹಕಾರಿ ಸಂಘದಲ್ಲಿ ಕೇಂದ್ರ ಸರ್ಕಾರದ ಸಮೃತ್ ಯೋಜನೆಯಲ್ಲಿ ಸುಮಾರು ೩೦ ಜನರಿಗೆ ೪೫ ದಿನಗಳವರೆಗೆ ಪ್ರತಿದಿನ ೩೦೦ ರು. ಗಳ ಶಿಷ್ಯ ವೇತನ ದೊಂದಿಗೆ ಕೈ ಮಗ್ಗ ನೇಕಾರಿಕೆಯ ಬಗ್ಗೆ ತರಬೇತಿ ಚಾಲನೆ ನೀಡಲಾಯಿತು. ಮಹಿಳೆಯರಿಗೆ ತರಬೇತಿ ಅಡಿಯಲ್ಲಿ ಸ್ವ ಉದ್ಯೋಗಕ್ಕೆ ಅನುಕೂಲವಾಗುಂತೆ ಇದೊಂದು ಉತ್ತಮ ತರಬೇತಿ ಆಗಿದ್ದು ಸರ್ಕಾರ ದಿಂದ ಅನೇಕ ಸವಲತ್ತುಗಳು ದೊರೆಯುತ್ತದೆ.

ಬಸವಾಪಟ್ಟಣ: ಇಲ್ಲಿಗೆ ಸಮೀಪದ ಕೇರಳಾಪುರ ಗ್ರಾಮದ ಶ್ರೀ ರಾಮ ಕೈ ಮಗ್ಗ ನೇಕಾರರ ಉತ್ಪನ್ನ ಮತ್ತು ಮಾರಾಟ ಸೇವಾ ಸಹಕಾರಿ ಸಂಘದಲ್ಲಿ ಕೇಂದ್ರ ಸರ್ಕಾರದ ಸಮೃತ್ ಯೋಜನೆಯಲ್ಲಿ ಸುಮಾರು ೩೦ ಜನರಿಗೆ ೪೫ ದಿನಗಳವರೆಗೆ ಪ್ರತಿದಿನ ೩೦೦ ರು. ಗಳ ಶಿಷ್ಯ ವೇತನ ದೊಂದಿಗೆ ಕೈ ಮಗ್ಗ ನೇಕಾರಿಕೆಯ ಬಗ್ಗೆ ತರಬೇತಿ ಚಾಲನೆ ನೀಡಲಾಯಿತು.

ಹಾಸನ ಜಿಲ್ಲೆ ಪಂಚಾಯಿತಿ ಯಲ್ಲಿ ಕೈ ಮಗ್ಗ ಮತ್ತು ಜವಳಿ ವಿಭಾಗದ ಸಹಾಯಕ ನಿರ್ದೇಶಕರಾಗಿರುವ ಬೋಜರಾಜ್ ಕೊಠಾರಿ ಅವರು ಕಾರ್ಯಕ್ರಮದಲ್ಲಿ ಕೈ ಮಗ್ಗದಿಂದ ಇಂದಿನ ಯುವ ಜನಾಂಗ ಹಿಂದೆ ಸರಿದಿದ್ದು ಬೇಸರದ ಸಂಗತಿ ಆಗಿದ್ದು, ಸಂಘವನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ ಮಹಿಳೆಯರಿಗೆ ತರಬೇತಿ ಅಡಿಯಲ್ಲಿ ಸ್ವ ಉದ್ಯೋಗಕ್ಕೆ ಅನುಕೂಲವಾಗುಂತೆ ಇದೊಂದು ಉತ್ತಮ ತರಬೇತಿ ಆಗಿದ್ದು ಸರ್ಕಾರ ದಿಂದ ಅನೇಕ ಸವಲತ್ತುಗಳು ದೊರೆಯುತ್ತದೆ. ಅಲ್ಲದೆ ತಮ್ಮಿಂದ ಉದ್ಘಾಟನೆಯಾದ ಉತ್ಪನ್ನಗಳನ್ನು ರಾಜ್ಯಾದ್ಯಂತ ಮಾರಾಟ ಮಾಡಲು ಅನುಕೂಲ ಕಲ್ಪಿಸಿ ಕೂಡಲು, ಕೈ ಮಗ್ಗ ಸಂಸ್ಥೆ ಮತ್ತು ಸರ್ಕಾರ ಸಿದ್ಧವಿರುವುದಾಗಿ ಕೊಠಾರಿ ಅವರು ತಿಳಿಸಿದರು. ಬೆಂಗಳೂರಿನ ಸೇವಾ ತರಬೇತಿ ಕೇಂದ್ರದ ತುಳಸಿ ರಾಮ್ ಅವರು ಕೇಂದ್ರ ಸರ್ಕಾರದಿಂದ ತರಬೇತಿಯಿಂದ ಸಿಗುವ ಸೌಲಭ್ಯಗಳು, ಅದರಿಂದ ಪಡೆಯಬಹುದಾದ ಅನುಕೂಲಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇರಳಾಪುರದ. ಗ್ರಾಮಪಂಚಾಯತಿ ಅಧ್ಯಕ್ಷರಾದ ಗಂಗಾಮಣಿ ಅವರು ವಹಿಸಿದ್ದರು. ಉಪಾಧ್ಯಕ್ಷ ಚಂದ್ರು ಶ್ರೀರಾಮ ಕೈಮಗ್ಗ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಡಿ ಮಂಜುನಾಥ್, ನಿರ್ದೇಶಕ ಮೂರ್ತಿ, ಚಂದ್ರಶೇಖರ, ಶ್ರೀರಾಮ ಕೈಮಗ್ಗ ಸಂಸ್ಥೆಯ ಮಾಜಿ ಹಾಲಿ ಕಾರ್ಯದರ್ಶಿಗಳು, ನಿರ್ದೇಶಿತ ತರಬೇತುದಾರರು, ಆಡಳಿತ ಮಂಡಳಿ ಸದಸ್ಯರು ಹಾಜರಿದ್ದರು. ಕಾಮಾಕ್ಷಮ್ಮನವರು ಸಂಸ್ಥೆ ಯ ಉತ್ಪನ್ನದ ಮತ್ತು ಮಾರಾಟದ ಬಗ್ಗೆ ತಿಳಿಸಿದರು.