ಸಾರಾಂಶ
ಜೆನಿಸಿಸ್ ಆಫ್ ದಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಪ್ರೊಫೆಶನ್ ಇನ್ ಇಂಡಿಯಾ ಆ್ಯಂಡ್ ಇಟ್ಸ್ ಗ್ರೋಥ್’ ಎಂಬ ಕೃತಿ ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಇದು ಪ್ರಮುಖ ಆಕರ ಗ್ರಂಥವಾಗಲಿದ್ದು, ಡಾ. ಕಲ್ಯಾಣಿ ಮಂಡ್ಕೆ ಮತ್ತು ಡಾ. ಬಿ. ರಾಜಶೇಖರ್ ಸಂಪಾದಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಶನ್ (ಮಾಹೆ)ಯ ಪ್ರಕಾಶನ ಘಟಕವಾದ ಮಣಿಪಾಲ್ ಯೂನಿವರ್ಸಲ್ ಪ್ರೆಸ್ (ಎಂಯುಪಿ)ನ ಪ್ರಕಟಣೆಯಾಗಿರುವ ‘ಜೆನಿಸಿಸ್ ಆಫ್ ದಿ ಸ್ಪೀಚ್ ಆ್ಯಂಡ್ ಹಿಯರಿಂಗ್ ಪ್ರೊಫೆಶನ್ ಇನ್ ಇಂಡಿಯಾ ಆ್ಯಂಡ್ ಇಟ್ಸ್ ಗ್ರೋಥ್’ ಎಂಬ ಕೃತಿಯನ್ನು ಲೋಕಾರ್ಪಣೆಗೊಳಿಸಲಾಯಿತು.ಆರೋಗ್ಯ ವಿಜ್ಞಾನ ಕ್ಷೇತ್ರದಲ್ಲಿ ಇದು ಪ್ರಮುಖ ಆಕರ ಗ್ರಂಥವಾಗಲಿದ್ದು, ಡಾ. ಕಲ್ಯಾಣಿ ಮಂಡ್ಕೆ ಮತ್ತು ಡಾ. ಬಿ. ರಾಜಶೇಖರ್ ಸಂಪಾದಿಸಿದ್ದಾರೆ. ಇದು ಭಾರತದಲ್ಲಿ ವಾಕ್ ಮತ್ತು ಶ್ರವಣ ಕ್ಷೇತ್ರದ ಇತಿಹಾಸ ಮತ್ತು ಅಭಿವೃದ್ಧಿಯ ಹಂತಗಳ ಅಪೂರ್ವ ದಾಖಲೆಯಾಗಿದೆ.
ಮಾಹೆ ಉಪಕುಲಪತಿ ಲೆ.ಜ. (ಡಾ.)ಎಂ.ಡಿ. ವೆಂಕಟೇಶ್ ಗ್ರಂಥವನ್ನು ಲೋಕಾರ್ಪಣೆಗೊಳಿಸಿ, ವಾಕ್ ಮತ್ತು ಶ್ರವಣ ಕ್ಷೇತ್ರದ ಮೇಲೆ ತಂತ್ರಜ್ಞಾನ ಕ್ಷೇತ್ರವು ಮಹತ್ತರ ಪರಿವರ್ತನೆಯನ್ನು ತರುತ್ತಿದ್ದು, ಈ ಪರಿವರ್ತನೆಯನ್ನು ಪ್ರಸ್ತುತ ಗ್ರಂಥವು ಸಮರ್ಥವಾಗಿ ದಾಖಲಿಸಿದೆ. ವರ್ತಮಾನದ ಮತ್ತು ಭವಿಷ್ಯದ ಸಂಶೋಧಕರಿಗೆ ಈ ಗ್ರಂಥವು ಅತ್ಯುತ್ತಮ ಸಂಪನ್ಮೂಲ ಕೃತಿಯಾಗಲಿದೆ ಎಂದರು.ಡಾ. ಕಲ್ಯಾಣಿ ಮಂಡ್ಕೆ ಅವರು ತಮ್ಮ ವೃತ್ತಿಜೀವನದ ಅನುಭವಗಳನ್ನು ಹಂಚಿಕೊಂಡರು.
ಡಾ.ಬಿ.ರಾಜಶೇಖರ್ ಅವರು ವಾಕ್ ಮತ್ತು ಶ್ರವಣಕ್ಷೇತ್ರದ ಸಂಶೋಧನೆಯಲ್ಲಿ ಮಾರ್ಗದರ್ಶಕರಾದ ಡಾ. ಎನ್. ರತ್ನ ಮತ್ತು ಪ್ರೊ. ರಮೇಶ್ ಓಝಾ ಅವರ ಪ್ರಯತ್ನಗಳನ್ನು ಸ್ಮರಿಸಿಕೊಂಡರು.ಎಂಯುಪಿಯ ಪ್ರಧಾನ ಸಂಪಾದಕರು ಮತ್ತು ಮಾಹೆಯ ಐರೋಪ್ಯ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಡಾ. ನೀತಾ ಇನಾಂದಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.