ಸಾರಾಂಶ
ಹುಬ್ಬಳ್ಳಿಯಿಂದ ಬೆಳಗ್ಗೆ 5ಕ್ಕೆ ವಂದೇ ಭಾರತ್ ರೈಲು ಆರಂಭಿಸಿ ಬೆಳಗ್ಗೆ 11ರೊಳಗೆ ಬೆಂಗಳೂರು ತಲುಪುವಂತಾಗಬೇಕು. ಹುಬ್ಬಳ್ಳಿಯಿಂದ ಶಿರಡಿಗೆ ನೇರ ಸಂಪರ್ಕದ ರೈಲು ಸೌಲಭ್ಯ ಕಲ್ಪಿಸಬೇಕು ಎಂದು ರೈಲ್ವೆ ಖಾತೆ ಸಚಿವ ವಿ. ಸೋಮಣ್ಣಗೆ ಮನವಿ ಸಲ್ಲಿಸಲಾಗಿದೆ.
ಹುಬ್ಬಳ್ಳಿ:
ಹುಬ್ಬಳ್ಳಿ-ಬೆಂಗಳೂರು, ಹುಬ್ಬಳ್ಳಿ-ಮುಂಬೈ ನಡುವೆ ಸ್ಲೀಪರ್ ಕೋಚ್ ಇರುವ ವಂದೇ ಭಾರತ್ ರೈಲು ಓಡಿಸುವುದು ಸೇರಿದಂತೆ ಮತ್ತಿತರ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸೇರಿದಂತೆ ಸಾರ್ವಜನಿಕರ ನಿಯೋಗ ಆಗ್ರಹಿಸಿದೆ.ಬೆಳಗಾವಿಯಲ್ಲಿ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರನ್ನು ಭೇಟಿ ಮಾಡಿರುವ ನಿಯೋಗವೂ ಈ ಭಾಗದ ರೈಲ್ವೆ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದೆ.
ಹುಬ್ಬಳ್ಳಿಯಿಂದ ಬೆಳಗ್ಗೆ 5ಕ್ಕೆ ವಂದೇ ಭಾರತ್ ರೈಲು ಆರಂಭಿಸಿ ಬೆಳಗ್ಗೆ 11ರೊಳಗೆ ಬೆಂಗಳೂರು ತಲುಪುವಂತಾಗಬೇಕು. ಹುಬ್ಬಳ್ಳಿಯಿಂದ ಶಿರಡಿಗೆ ನೇರ ಸಂಪರ್ಕದ ರೈಲು ಸೌಲಭ್ಯ ಕಲ್ಪಿಸಬೇಕು. ಹುಬ್ಬಳ್ಳಿ-ಬೆಂಗಳೂರು ಮತ್ತು ಹುಬ್ಬಳ್ಳಿ-ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಪ್ರಾರಂಭಿಸಬೇಕು ಎಂದು ಆಗ್ರಹಿಸಿದೆ. ಧಾರವಾಡ-ಕಿತ್ತೂರ-ಬೆಳಗಾವಿ ರೈಲು ಮಾರ್ಗ ಆರಂಭಿಸುವಂತೆ ಆಗ್ರಹಿಸಿದರು.ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ನಿಯೋಗದಲ್ಲಿ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಸದಸ್ಯ ಹಾಗೂ ಶ್ರೀಸಿದ್ಧಾರೂಢ ಮಠದ ಟ್ರಸ್ಟ್‌ನ ಮಾಜಿ ಚೇರಮನ್ ಮಹೇಂದ್ರ ಸಿಂಘಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಗಿರೀಶ ಸುಂಕದ, ಗೌತಮಚಂದ ಗುಲೇಚಾ, ಪ್ರಕಾಶ ಕಟಾರಿಯಾ, ಸುಭಾಸ ಡಂಕ ಹಲವರಿದ್ದರು.