ಮಕ್ಕಳಿಗೆ ರಾಗಿಮಾಲ್ಟ್ ನೀಡುವ ಯೋಜನೆಗೆ ಚಾಲನೆ

| Published : Feb 23 2024, 01:45 AM IST

ಸಾರಾಂಶ

1 ರಿಂದ 10 ನೇತರಗತಿ ಮಕ್ಕಳಿಗೆ ಬಿಸಿಯೂಟ ಜೊತೆಗೆ ರಾಗಿಮಾಲ್ಟ್ ನೀಡುವ ಯೋಜನೆಗೆ ವಸಂತ ಕುಮಾರಿ ಸರ್ಕಾರಿ ಪ್ರೌಡಶಾಲೆಯಲ್ಲಿನ ಮಕ್ಕಳಿಗೆ ರಾಗಿ ಮಾಲ್ಟ್ ಕುಡಿಸುವ ಮೂಲಕ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಮಂಜುಳ ಚಾಲನೆ ನೀಡಿದರು.

ಕೊಳ್ಳೇಗಾಲ: 1 ರಿಂದ 10 ನೇತರಗತಿ ಮಕ್ಕಳಿಗೆ ಬಿಸಿಯೂಟ ಜೊತೆಗೆ ರಾಗಿಮಾಲ್ಟ್ ನೀಡುವ ಯೋಜನೆಗೆ ವಸಂತ ಕುಮಾರಿ ಸರ್ಕಾರಿ ಪ್ರೌಡಶಾಲೆಯಲ್ಲಿನ ಮಕ್ಕಳಿಗೆ ರಾಗಿ ಮಾಲ್ಟ್ ಕುಡಿಸುವ ಮೂಲಕ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಮಂಜುಳ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರ ಉಚಿತ ಕಡ್ಡಾಯ ಶಿಕ್ಷಣ ಜೊತೆಗೆ ಮಕ್ಕಳನ್ನು ಆರೋಗ್ಯವಂತರಾಗಿ ಸದೃಡಗೊಳಿಸಲು ಸರ್ಕಾರ ಜಾರಿಗೆ ತಂದಿರುವ ಮಧ್ಯಾಹ್ನದ ಬಿಸಿಯೂಟ ಜೊತೆಗೆ ಪೌಷ್ಟಿಕ ಆಹಾರ ಒದಗಿಸುವ ಈ ಕಾರ್ಯಕ್ರಮಗಳ ಮಕ್ಕಳ ಪ್ರಗತಿಗೆ ಸಹಕಾರಿಯಾಗಿವೆ ಇದರ ಮೂಲ ಉದ್ದೇಶ ಶಿಕ್ಷಣದ ಜೊತೆಗೆ ಮಕ್ಕಳನ್ನು ಪೌಷ್ಠಿಕಾಂಶದ ಕೊರತೆಯಾಗದಂತೆ ತಡೆಗಟ್ಟಲು ಮತ್ತು ಮುಂದಿನ ಉತ್ತಮ ಪ್ರಜೆಗಳಾಗಿ ರೂಪಿಸುವುದೆ ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.

ವಾರದಲ್ಲಿ ಮೂರು ದಿನಗಳ ಕಾಲ ಕೊಡುವ ರಾಗಿ ಮಾಲ್ಟ್‌ನ್ನು ಮಕ್ಕಳು ತಪ್ಪದೆ ಸೇವಿಸಿ ಪೌಷ್ಠಿಕತೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಬಿಇಒ ಮಂಜುಳಾ ಮಾತನಾಡಿ, ಸರ್ಕಾರದ ಈ ಯೋಜನೆ ನಿಜಕ್ಕೂ ಉಪಯೋಗವಾಗಲಿದೆ. ಕೆಲವು ಮಕ್ಕಳು ಬರೀ ಹಾಲನ್ನು ಕುಡಿಯುತ್ತಿರಲಿಲ್ಲ. ಈಗ ರಾಗಿ ಮಾಲ್ಟ್ ಸೇರಿಸಿ ಕೊಡುತ್ತಿರುವುದರಿಂದ ರುಚಿ ಹಾಗೂ ಪೌಷ್ಠಿಕ ಕೊರತೆಯನ್ನು ನೀಗಿಸುತ್ತದೆ ಎಂದು ತಿಳಿಸಿದರು. ಸರ್ಕಾರದ ಈ ಉದ್ದೇಶ ಮೆಚ್ಚತಕ್ಕಂತಹ ಯೋಜನೆಯಾಗಿದ್ದು ಮಕ್ಕಳು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ತಾಪಂ ಇಒ ಶ್ರೀನಿವಾಸ್ ಮಾತನಾಡಿ, ಮಕ್ಕಳು ಸರ್ಕಾರದ ಸವಲತ್ತು ಪಡೆಯುವ ಮೂಲಕ ಉನ್ನತ ವಿದ್ಯಾಭ್ಯಾಸ ಪಡೆದು ಮಾನಸಿಕ ಹಾಗೂ ಶೈಕ್ಷಣಿಕ ಬೆಳವಣಿಗೆ ಮಾಡಿಕೊಂಡು ಸಾಧನೆ ಮಾಡು ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎ೦ದರು.ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಬಿ.ಆರ್.ಸಿ ಮಹದೇವ ಕುಮಾರ್, ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ನಗರಸಭೆ ಸದಸ್ಯ ನಾಶೀರ್ ಷರೀಫ್, ಎಸ್ಡಿಎಂಸಿ ಅಧ್ಯಕ್ಷ ಪವಿತ್ರ, ಇಸಿಒ ಚಾಮರಾಜು, ಸಿ.ಆರ್.ಪಿ.ಸಮೀರಾ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಜು,ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಕ್ಬರ್, ಉಮಾಶಂಕರ್ ಇದ್ದರು.