ವಕೀಲನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ

| Published : Oct 10 2025, 01:00 AM IST

ವಕೀಲನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರರಾದ ಬಿ.ಆರ್.ಗವಾಯಿ ರವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಪ್ರಯತ್ನಿಸಿದ್ದ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಶಿರಾ ಸಾಮಾಜಿಕ ಜಾಗೃತಿ ಒಕ್ಕೂಟ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಶಿರಾ ಸವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರರಾದ ಬಿ.ಆರ್.ಗವಾಯಿ ರವರ ಮೇಲೆ ವಕೀಲರೊಬ್ಬರು ಶೂ ಎಸೆಯಲು ಪ್ರಯತ್ನಿಸಿದ್ದ ಪ್ರಕರಣವನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಶಿರಾ ಸಾಮಾಜಿಕ ಜಾಗೃತಿ ಒಕ್ಕೂಟ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ರಂಗನಾಥ್ ಅವರು ಭಾರತ ದೇಶದ ಇತಿಹಾಸದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಮೇಲೆ ಶೂ ಎಸೆಯಲು ಸನಾತನವಾದಿ ರಾಕೇಶ್ ಕಿಶೋರ್ ಎಂಬುವನು ಮಾಡಿರುವ ಕೃತ್ಯ ದೇಶದ್ರೋಹಿ ಸಂವಿಧಾನ ವಿರೋಧಿ ಮನಸ್ಥಿತಿ. ಈ ದೇಶದಲ್ಲಿ ದಲಿತರು ಯಾವುದೇ ಉನ್ನತ ಹುದ್ದೆಗೆ ಹೋದರೂ ದಲಿತರ ಮೇಲಿನ ದೌರ್ಜನ್ಯ ದಬ್ಬಾಳಿಕೆ ತಪ್ಪಿದ್ದಲ್ಲ. ರಾಕೇಶ್ ಕಿಶೋರ್ ನಂತಹ ಸಂವಿಧಾನ ವಿರೋಧಿ ಪ್ರಜಾ ಪ್ರಭುತ್ವವನ್ನು ವಿರೋಧಿಸುವ ಕ್ರಮವನ್ನು ದೇಶದ್ರೋಹಿ ಕೃತ್ಯವೆಂದು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅವನಿಗೆ ಪೌರತ್ವ ರದ್ದುಪಡಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡ ಜೆ.ಎನ್.ರಾಜಸಿಂಹ, ದಸಂಸ ಕಾರ್ಯಧಕ್ಷ್ಯ ತಿಪ್ಪೇಸ್ವಾಮಿ, ರಾಜು ಕೆ, ಕಾರ್ತಿಕ್, ತಿಪ್ಪೇಶ್, ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಧರಣಿ ಕುಮಾರ್, ತಾಲ್ಲೂಕು ಸಂಚಾಲಕ ರಂಗರಾಜು, ಜಯರಾಮಕೃಷ್ಣ, ಜಯಮ್ಮ, ಕಾವ್ಯ, ಅಶೋಕ್, ಶ್ರೀ ರಂಗಲಕ್ಷ್ಮಮ್ಮ, ಹೇಮಲತಾ, ಶಾರದಮ್ಮ, ರೇಣುಕಾ, ರಂಗಮ್ಮ, ಚಂದ್ರಕಲಾ, ಭೂತಮ್ಮ, ಜ್ಯೋತಿ, ಭುವನ ಸೇರಿದಂತೆ ಹಲವರು ಹಾಜರಿದ್ದರು.