ಬೆಂಗಳೂರಿನ ವೈಟ್ ಫೀಲ್ಡ್ ನಡೆದ ವಕೀಲರಾದ ಮಂಜುನಾಥ ಮತ್ತು ಶ್ರೀರಾಮ್ ಕೊಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಹಿರಿಯ ವಕೀಲರೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ಹರಿಹರ ನಗರದಲ್ಲಿ ಮಂಗಳವಾರ ವಕೀಲರ ಸಂಘದಿಂದ ಹರಪನಹಳ್ಳಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

- ಹರಪನಹಳ್ಳಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ । ರಾಜ್ಯ ಸರ್ಕಾರಕ್ಕೆ ಮನವಿ

- - -

ಕನ್ನಡಪ್ರಭ ವಾರ್ತೆ ಹರಿಹರ

ಬೆಂಗಳೂರಿನ ವೈಟ್ ಫೀಲ್ಡ್ ನಡೆದ ವಕೀಲರಾದ ಮಂಜುನಾಥ ಮತ್ತು ಶ್ರೀರಾಮ್ ಕೊಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನಲ್ಲಿ ಹಿರಿಯ ವಕೀಲರೊಬ್ಬರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ, ಹರಿಹರ ನಗರದಲ್ಲಿ ಮಂಗಳವಾರ ವಕೀಲರ ಸಂಘದಿಂದ ಹರಪನಹಳ್ಳಿ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹರಿಹರ ವಕೀಲರ ಸಂಘದ ಅಧ್ಯಕ್ಷ ಗಣೇಶ ಕೆ.ದುರ್ಗದ ಮಾತನಾಡಿ, ಗೌರಿಬಿದನೂರಿನಲ್ಲಿ ಅ.27ರಂದು ಹಿರಿಯ ವಕೀಲ ಸಣ್ಣಕ್ಕಿ ವೆಂಕಟರಮಣಪ್ಪ ಮೇಲೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ, ತಡರಾತ್ರಿ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ವಕೀಲರಾದ ಮಂಜುನಾಥ ಮತ್ತು ಶ್ರೀರಾಮ್ ಅವರನ್ನು ಕ್ಷುಲ್ಲಕ ಕಾರಣಕ್ಕೆ ಭೀಕರವಾಗಿ ಕೊಲೆಗೈದಿರುವುದು ಖಂಡನಿಯ. ವಕೀಲರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಸಂಘದ ಮಾಜಿ ಅಧ್ಯಕ್ಷ ರುದ್ರಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ದೌರ್ಜನ್ಯ ಮತ್ತು ಹಲ್ಲೆಗಳು ಹೆಚ್ಚಾಗುತ್ತಿದ್ದು, ಭಯದ ನೆರಳಿನಲ್ಲಿ ನ್ಯಾಯವಾದಿಗಳು ಕರ್ತವ್ಯ ನಿರ್ವಹಿಸುವಂತಾಗಿದೆ. ಆದ್ದರಿಂದ ವಕೀಲರ ಸಂರಕ್ಷಣಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ವಕೀಲರ ಸಂಘದ ಹಿರಿಯರಾದ ಬಿ.ಹಾಲಪ್ಪ, ಶ್ರೀನಿವಾಸ ಕಲಾಲ್, ನಾಗರಾಜ ಹಲವಾಗಲ, ಉಪಾಧ್ಯಕ್ಷ ಹನುಮಂತರಾಜು ಚನ್ನಗೌಡ್ರು, ಕಾರ್ಯದರ್ಶಿ ಎಂ.ನಾಗರಾಜ್ ಭಾನುವಳ್ಳಿ, ಪದಾಧಿಕಾರಿಗಳಾದ ಬಿ.ಸಿ.ಪ್ರಕಾಶ್, ಎನ್.ಆನಂದ, ಡಿ.ಬಿ.ಶಂಕರ್, ಜಿ.ಬಿ.ರಮೇಶ್, ಭಾಸ್ಕರ ಮುದೇನೂರ್, ಗಣೇಶ್, ಮಲ್ಲಿಕಾರ್ಜುನ ಕಲಾಲ್, ಬಿ.ತೈಫೂಜ್ ಉಲ್ಲಾ, ಆಶೀಷ್ ಭೂತೆ, ತುಳಜಾಭವಾನಿ, ಜಿ.ಕೆ.ನಾಯ್ಕ, ಪ್ರಕಾಶ ಬಿ.ಸಿ., ಪ್ರವೀಣಕುಮಾರ ಬಿ.ಸಿ., ಗುತ್ತೂರು ನಿಂಗರಾಜ, ಸಾಹಿರಾ ಬಾನು, ಮಾರುತಿ ಬೇಡರ, ಶಶಿ ನಾಯ್ಕ, ಸುರೇಶ, ಸಾಕಮ್ಮ, ಸುಧಾ, ರೇಷ್ಮಾ, ಸೌಂದರ್ಯ, ಮಹಾಂತೇಶ್, ಶಶಿಧರ, ಮಂಜುನಾಥ ಉಕ್ಕಡಗಾತ್ರಿ ಇತರರಿದ್ದರು.

- - -

-3ಎಚ್.ಆರ್.ಆರ್4:

ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ನಡೆದ ವಕೀಲರ ಕೊಲೆ ಖಂಡಿಸಿ ಮಂಗಳವಾರ ಹರಿಹರ ನಗರದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಪುಷ್ಪಾ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.