ಕಡೂರುಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರು ವಕೀಲರಾಗುವ ಮೂಲಕ ಹೋರಾಟ ಮಾಡಿ ನಮಗೆ ಸ್ವಾತಂತ್ರ ತಂದುಕೊಟ್ಟವರಾಗಿದ್ದಾರೆ ಎಂದು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಇರ್ಫಾನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಕಡೂರು

ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರು ವಕೀಲರಾಗುವ ಮೂಲಕ ಹೋರಾಟ ಮಾಡಿ ನಮಗೆ ಸ್ವಾತಂತ್ರ ತಂದುಕೊಟ್ಟವರಾಗಿದ್ದಾರೆ ಎಂದು ಕಡೂರು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ಇರ್ಫಾನ್ ತಿಳಿಸಿದರು.

ಬುಧವಾರ ಕಡೂರು ವಕೀಲರ ಸಂಘದಿಂದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ನ್ಯಾಯವಾದಿಗಳ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು. ಡಾ.ಬಾಬು ರಾಜೇಂದ್ರ‍್ರ ಪ್ರಸಾದ್ ಅವರ ಜನ್ಮ ದಿನವನ್ನು ವಕೀಲರ ದಿನವನ್ನಾಗಿ ಆಚರಿಸುತ್ತಾ ಬರಲಾಗುತ್ತಿದೆ. ನಾವೆಲ್ಲರೂ ಅವರ ವಾರಸುದಾರರಾಗಿದ್ದು ವೃತ್ತಿಯಲ್ಲಿ ನಂಬಿಕೆ, ವಿಶ್ವಾಸದೊಂದಿಗೆ ನಡೆಯ ಬೇಕು. ಸಂವಿಧಾನದ ಆಶಯಗಳನ್ನು ಉಳಿಸಲು ವಕೀಲರ ಪಾತ್ರ ಮುಖ್ಯವಾಗಿದೆ. ಯುವ ವಕೀಲರು ಹೆಚ್ಚಿನ ಅಧ್ಯಯನದ ಜೊತೆಗೆ ಹಿರಿಯ ವಕೀಲರ ಮಾರ್ಗದರ್ಶನ ಪಡೆದು ವೃತ್ತಿಯಲ್ಲಿ ನೈಪುಣ್ಯತೆಗಳಿಸಬೇಕು. ಕಕ್ಷಿದಾರರಿಗೆ ನ್ಯಾಯಕೊಡಿಸುವಲ್ಲಿ ಕರ್ತವ್ಯ ನಿಷ್ಠೆ ತೋರಬೇಕು ಎಂದು ಯುವ ವಕೀಲರಿಗೆ ಕಿವಿ ಮಾತು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಅಮ್ರೀನ್ ಸುಲ್ತಾನ್ ಮಾತನಾಡಿ, ನ್ಯಾಯಾಲಯಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಅಳವಡಿಕೆಯಾಗಿದ್ದು ಯುವ ವಕೀಲರು ಹೊಸ ತಂತ್ರಜ್ಞಾನಕ್ಕೆ ತಕ್ಕಂತೆ ಕಲಿತರೆ ನಿಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಲು ಸಾಧ್ಯ.ಸೀನಿಯರ್‌ಗಳ ಸಲಹೆ, ಸೂಚನೆಗಳನ್ನು ತಪ್ಪದೆ ಪಾಲಿಸಿದರೆ ಉತ್ತಮ ವಕೀಲರಾಗಬಹುದು ಜೊತೆಗೆ ಘನತೆ, ಗೌರವ ಗಳಿಸಿಕೊಳ್ಳಬಹುದು ಎಂದರು. 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸವಿತಾರಾಣಿ ಮಾತನಾಡಿ, ವಕೀಲರು ಧರಿಸುವ ಕಪ್ಪುಕೋಟ್ ಶಕ್ತಿ ಸಾಮರ್ಥ್ಯದ ಸಂಕೇತವಾಗಿದ್ದು ಸತ್ಯ, ನ್ಯಾಯ ಮತ್ತು ಧರ್ಮಕ್ಕೋಸ್ಕರ ಹೋರಾಟ ಮಾಡಬೇಕು. ಸರಸ್ವತಿ ಒಲಿದರೆ ಲಕ್ಷ್ಮೀ ಕಟಾಕ್ಷ ಇದ್ದೇ ಇರುತ್ತದೆ, ಹಿರಿಯ ವಕೀಲರಿಗೆ ಗೌರವ ಕೊಟ್ಟು ಅವರ ಮೂಲಕ ಕಲಿಯಲು ಮುಂದಾಗಿ ಎಂದರು.ಕಡೂರು ವಕೀಲರ ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವ ವಕೀಲರು ಹಿರಿಯ ನ್ಯಾಯವಾದಿಗಳ ಸಲಹೆ, ಸಹಕಾರ ಪಡೆಯಬೇಕು, ಸರಸ್ಪತಿ ಒಲಿಸಿಕೊಂಡರೆ ಲಕ್ಷೀ ತಾನಾಗಿಯೇ ಬರುತ್ತಾಳೆ. ವಕೀಲರು ಜ್ಞಾನ ಹೆಚ್ಚಿಸಿಕೊಳ್ಳಬೇಕು ಇಂದು ಪ್ರಪಂಚ ಆಳುತ್ತಿರುವುದು ಜ್ಞಾನ. ಆದ್ದರಿಂದ ಜ್ಞಾನದ ಜೊತೆ ನಾವುಗಳು ಹೋಗಬೇಕಾಗಿದೆ ನಿವೃತ್ತ ನ್ಯಾಯಾಧೀಶ ಗವಾಯಿ ಅವರು ಒಂದು ಮಾತು ಹೇಳುತ್ತಾರೆ. ನಾನು ಕಾನೂನು ವಿದ್ಯಾರ್ಥಿಯಾಗಿ ಬಂದೆ ನಿವೃತ್ತಿ ಯಾದರು ಸಹ ನಾನು ಇನ್ನು ಕಾನೂನು ವಿದ್ಯಾರ್ಥಿಯೇ ಎಂಬ ಮಾತುಗಳನ್ನು ಪ್ರತಿಯೋರ್ವ ವಕೀಲರು ತಿಳಿದರೆ ಸೂಕ್ತ ಎಂದರು.

ಹಿರಿಯ ವಕೀಲ ಶಿವಕುಮಾರ್,ಎಂ.ಎಸ್.ಹೆಳವಾರ್, ನಿರ್ಮಲಾ ಮತ್ತಿತರರು ವಕೀಲ ದಿನದ ಮಹತ್ವ ತಿಳಿಸಿದರು. ಸಾಹಿತಿ ಶೃಂಗೇರಿ ಶಿವಣ್ಣ ಹಾಸ್ಯದ ಪ್ರಸಂಗ ಹೇಳುವ ಮೂಲಕ ಉಪನ್ಯಾಸ ನೀಡಿದರು.ಹೆಚ್ಚುವರಿ ನ್ಯಾಯಾಧೀಶ ತಹಾಖಲೀಲ್, ವಕೀಲರಾದ ಕೆ.ಎನ್.ಬೊಮ್ಮಣ್ಣ, ಕೆ.ಎನ್. ಜಯಣ್ಣ,ಸಂಘದ ಕಾರ್ಯದರ್ಶಿ ರೇಣುಕಾ ಪ್ರಸಾದ್,ಹರೀಶ್, ವಸಂತ್‌ಕುಮಾರ್, ಸರ್ಕಾರಿ ಅಭಿಯೋಜಕರಾದ ಅಜಿಯಾ ಫರ್ವಿನ್, ರಾಘವೇಂದ್ರ ಮತ್ತು ಕೆ.ಎನ್.ರಾಜಣ್ಣ, ನೀಲಕಂಠಪ್ಪ, ಗಂಗಣ್ಣ,ಎನ್.ಪಿ,ಶೇಷಪ್ಪ, ಶೇಖರ್ ಸೇರಿದಂತೆ ವಕೀಲರು ಪಾಲ್ಗೊಂಡಿದ್ದರು.3ಕೆಕೆಡಿಯು1.ಕಡೂರು ವಕೀಲರ ಸಂಘವು ವಕೀಲರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ಉದ್ಘಾಟಿಸಿದರು. ನ್ಯಾಯಧೀಶರು ಹಾಗೂ ವಕೀಲರ ಸಂಘದ ಅಧ್ಯಕ್ಷ ಗೋವಿಂದಸ್ವಾಮಿ ಮತ್ತಿತರರು ಇದ್ದರು.