ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಮುಖಗಳು: ನಾಗೇಶ್ ಪಾಟೀಲ್

| Published : May 29 2024, 01:02 AM IST

ವಕೀಲರು ಮತ್ತು ನ್ಯಾಯಾಧೀಶರು ಒಂದೇ ನಾಣ್ಯದ ಮುಖಗಳು: ನಾಗೇಶ್ ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ವಕೀಲರು ಹಾಗೂ ನ್ಯಾಯಾಧೀಶರು ಒಂದೇ ನಾಣ್ಯದ ಮುಖಗಳಿದ್ದಂತೆ.

ಸ್ವಾಗತ ಸಮಾರಂಭದಲ್ಲಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶಕನ್ನಡಪ್ರಭ ವಾರ್ತೆ ಕಾರಟಗಿ

ವಕೀಲರು ಹಾಗೂ ನ್ಯಾಯಾಧೀಶರು ಒಂದೇ ನಾಣ್ಯದ ಮುಖಗಳಿದ್ದಂತೆ. ಇಬ್ಬರು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ, ಪ್ರಕರಣಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಮತ್ತು ಕಕ್ಷಿದಾರರಿಗೆ ನ್ಯಾಯ ಒದಗಿಸಲು ಸಾಧ್ಯ ಎಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ್ ಪಾಟೀಲ್ ಹೇಳಿದರು.

ಇಲ್ಲಿನ ವಿಶೇಷ ಎಪಿಎಂಸಿಯಲ್ಲಿನ ಸಂಚಾರಿ ನ್ಯಾಯಪೀಠಕ್ಕೆ ನ್ಯಾಯಾಧೀಶರಾಗಿ ಚಿಕ್ಕೋಡಿ ನ್ಯಾಯಾಲಯದಿಂದ ವರ್ಗಾವಣೆಯಾಗಿ ಆಗಮಿಸಿದ ಅವರಿಗೆ ಕಾರಟಗಿ ವಕೀಲರಿಂದ ಸೋಮವಾರ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಪರಿಹರಿಸೋಣ. ನ್ಯಾಯಾಲಯದ ಕಾರ್ಯ ಕಲಾಪಗಳು ಸುಗಮವಾಗಿ ನಡೆಯಬೇಕೆಂದರೆ ವಕೀಲರ ಸಹಕಾರ ಅತ್ಯಗತ್ಯ. ನ್ಯಾಯ ಕೇಳಿಕೊಂಡು ಕಕ್ಷಿದಾರರು ನಮ್ಮಲ್ಲಿಗೆ ಬರುತ್ತಾರೆ. ಕಾರಣ ವಕೀಲರು, ಯಾವುದೇ ಪ್ರಕರಣಗಳನ್ನು ವಿಳಂಬ ಮಾಡದೇ ತಕ್ಷಣವೇ ಸಂಬಂಧಪಟ್ಟಂತೆ ಮಾಹಿತಿ ಪಡೆದು ಅವುಗಳ ವಿಲೇವಾರಿಗೆ ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗಂಗಾವತಿ ವಕೀಲರ ಸಂಘದ ಉಪಾಧ್ಯಕ್ಷ ಪರಸಪ್ಪ ನಾಯಕ್ ಮಾತನಾಡಿ, ಜನರಿಗೆ ನ್ಯಾಯದಾನ ನೀಡುವಲ್ಲಿ ವಕೀಲರು ಮತ್ತು ನ್ಯಾಯಾಧೀಶರ ಸಂಬಂಧ ಮುಖ್ಯವಾಗಿದೆ. ಜನತೆ ನ್ಯಾಯ ಬಯಸಿ ನ್ಯಾಯಾಲಯದತ್ತ ನೋಡುತ್ತಿದ್ದಾರೆ. ಉತ್ತಮ ನ್ಯಾಯ ಒದಗಿಸುವಲ್ಲಿ ವಕೀಲರ ಸಹಕಾರ ಅಗತ್ಯವಾಗಿದ್ದು, ನೂತನ ನ್ಯಾಯಾಧೀಶರಿಗೆ ಅಗತ್ಯ ಸಹಕಾರ ನೀಡುವುದು ನಮ್ಮ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕ ಕರುಣಾಕರ, ನ್ಯಾಯವಾದಿ ಮಹೇಶ್‌ಸ್ವಾಮಿ ಮಾತನಾಡಿದರು. ನೂತನ ನ್ಯಾಯಾಧೀಶರ ಕಿರು ಪರಿಚಯವನ್ನು ನ್ಯಾಯವಾದಿ ನಾಗರಾಜ್ ಬೂದಿ ಮಾಡಿದರು. ಈ ವೇಳೆ ನ್ಯಾಯವಾದಿಗಳಾದ ಶ್ರೀಕಂಠಯ್ಯಸ್ವಾಮಿ, ರಮೇಶ್ ಕುಂಟೋಜಿ, ರಾಮಚಂದ್ರ ದೇವರಗುಡಿ, ರಾಜಶೇಖರ ಕಂಬಳಿ, ಮಂಜುನಾಥ್‌ರೆಡ್ಡಿ, ಶಿವರಾಜ್ ಹೊಸಮನಿ, ಬಸವರಾಜ ಆರಾಪುರ, ಮಂಜುನಾಥ್ ಕಟಿಗಿ, ತಿಮ್ಮನಗೌಡ ಪೊ. ಪಾ., ಸಂಗಮೇಶ್ ಸಜ್ಜನ್, ಶಿವರಾಜ್ ಸಿದ್ದಾಪುರ, ಮಾಲತಿ, ಕವಿತಾ, ಇತರರಿದ್ದರು. ಸೋಮನಾಥ್ ಹೆಬ್ಬಡದ್ ಕಾರ್ಯಕ್ರಮ ನಿರ್ವಹಿಸಿದರು.