ವಕೀಲರು ಸಂವಿಧಾನ ನಿಜವಾರ ಸೈನಿಕರು: ಸಚಿವ ಎಚ್‌.ಕೆ. ಪಾಟೀಲ

| Published : Dec 08 2024, 01:15 AM IST

ವಕೀಲರು ಸಂವಿಧಾನ ನಿಜವಾರ ಸೈನಿಕರು: ಸಚಿವ ಎಚ್‌.ಕೆ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ದಿ​ನ​ದಿಂದ ದಿ​ನಕ್ಕೆ ವ್ಯಾ​ಜ್ಯ​ಗಳ ಸಂಖ್ಯೆ​ ಅ​ಧಿ​ಕ​ವಾ​ಗು​ತ್ತಿದ್ದು, ಸಮಾಜದಲ್ಲಿ ವಕೀಲರ ಪಾತ್ರ ಬಹಳಷ್ಟು ಪ್ರ​ಮು​ಖ​ವಾ​ಗಿದೆ. ಬ​ಡ​ವರು, ನಿ​ರ್ಗ​ತಿ​ಕರು ಹಾಗೂ ಅ​ನ್ಯಾ​ಯಕ್ಕೆ ಒ​ಳ​ಗಾ​ದ​ವ​ರನ್ನು ಗು​ರು​ತಿಸಿ, ನ್ಯಾಯ ಒ​ದ​ಗಿ​ಸುವ ಕೆ​ಲ​ಸ​ವನ್ನು ಯುವ ವ​ಕೀ​ಲರು ಮಾ​ಡ​ಬೇಕು.

ಹುಬ್ಬಳ್ಳಿ:

ಸಂವಿಧಾನದ ನಿ​ಜ​ವಾದ ಸೈನಿಕರು ವಕೀಲರು. ದೇಶ ಹಾಗೂ ಸಂವಿಧಾನ ರಕ್ಷಣೆಯಲ್ಲಿ ಅವರ ಪಾತ್ರ ಹೆಚ್ಚಾ​ಗಿದೆ. ಸಂವಿಧಾನದ ಆಶಯಗಳನ್ನು ಉಳಿಸುವುದು ಕಿರಿಯ ವಕೀಲರ ಪ್ರ​ಮುಖ ಜ​ವಾ​ಬ್ದಾ​ರಿ​ಯಾ​ಗಿದೆ ಎಂದು ಕಾ​ನೂನು ಮತ್ತು ಸಂಸ​ದೀಯ ವ್ಯ​ವ​ಹಾ​ರ​ಗಳ ಸ​ಚಿವ ಎ​ಚ್‌.​ಕೆ. ​ಪಾ​ಟೀಲ ಹೇ​ಳಿ​ದ​ರು.

ನ​ಗ​ರದ ಬಿ​ವಿಬಿ ಕ್ಯಾಂಪಸ್‌ನ ದೇ​ಶ​ಪಾಂಡೆ ಸ​ಭಾ​ಭ​ವ​ನ​ದಲ್ಲಿ ಕಾ​ನೂನು ವಿ​ದ್ಯಾ​ರ್ಥಿ​ಗ​ಳಿಗೆ ಶ​ನಿ​ವಾರ ಸಂಜೆ ನ​ಡೆದ ರಾ​ಷ್ಟ್ರ​ಮ​ಟ್ಟದ ಅ​ಣುಕು ನ್ಯಾ​ಯಾ​ಲಯದ ಫೈ​ನ​ಲ್‌ ಸ್ಪ​ರ್ಧೆಯ ಸ​ಮಾ​ರೋಪ ಸ​ಮಾ​ರಂಭ​ದಲ್ಲಿ ಅ​ವರು ಮಾ​ತ​ನಾ​ಡಿ​ದ​ರು.

ದಿ​ನ​ದಿಂದ ದಿ​ನಕ್ಕೆ ವ್ಯಾ​ಜ್ಯ​ಗಳ ಸಂಖ್ಯೆ​ ಅ​ಧಿ​ಕ​ವಾ​ಗು​ತ್ತಿದ್ದು, ಸಮಾಜದಲ್ಲಿ ವಕೀಲರ ಪಾತ್ರ ಬಹಳಷ್ಟು ಪ್ರ​ಮು​ಖ​ವಾ​ಗಿದೆ. ಬ​ಡ​ವರು, ನಿ​ರ್ಗ​ತಿ​ಕರು ಹಾಗೂ ಅ​ನ್ಯಾ​ಯಕ್ಕೆ ಒ​ಳ​ಗಾ​ದ​ವ​ರನ್ನು ಗು​ರು​ತಿಸಿ, ನ್ಯಾಯ ಒ​ದ​ಗಿ​ಸುವ ಕೆ​ಲ​ಸ​ವನ್ನು ಯುವ ವ​ಕೀ​ಲರು ಮಾ​ಡ​ಬೇಕು ಎಂದ​ರು.

ಕಾನೂನಿನ ಬಗ್ಗೆ ಸಂಪೂರ್ಣ ಜ್ಞಾನ, ಉ​ತ್ತಮ ವಾಕ್‌ ಚಾ​ತುರ್ಯ ಹಾಗೂ ಸಂವ​ಹ​ನ ಕೌ​ಶಲ್ಯ ಹೊಂದಿ​ದಾಗ ಮಾತ್ರ ಯ​ಶಸ್ವಿ ವ​ಕೀ​ಲ​ರಾ​ಗಬ​ಹು​ದು ಎಂದರು.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮಾ​ತ​ನಾ​ಡಿ, ಶ್ರೀಸಾಮಾನ್ಯನಿಗೂ ನ್ಯಾಯದಾನದ ವ್ಯವಸ್ಥೆ ಪರಿಪೂರ್ಣವಾಗಿ ಆಗಿಲ್ಲ. ಪ್ರಕಟವಾದ ನ್ಯಾಯಾಲಯದ ಆದೇಶವನ್ನೂ ಕಾನೂನುಬದ್ಧವಾಗಿ ವಿಮರ್ಶೆಗಳಾಗಬೇಕು. ಸರಕಾರಗಳು ಕೂಡ ಕೋರ್ಟ್‌ಗಳಿಗೆ ಸವಲತ್ತು ಮತ್ತು ನ್ಯಾಯಾಧೀಶರ ನೇಮಕ ಮಾಡಬೇಕು. ಇದರಿಂದ ತ್ವರಿತವಾಗಿ ನ್ಯಾಯದಾನ ಸಾಧ್ಯವಾಗು​ತ್ತದೆ ಎಂದು ಹೇಳಿದರು.

ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸಾಚಾರ ​ಶ್ರೀಶಾನಂದ, ಸ​ಮಾ​ಜದ ಅಂಕು-ಡೊಂಕು​ಗ​ಳನ್ನು ತಿ​ದ್ದು​ವಲ್ಲಿ ವ​ಕೀ​ಲರ ಪಾತ್ರ ಪ್ರ​ಮು​ಖ​ವಾ​ಗಿದೆ. ವಾದ ಮಂಡಿ​ಸು​ವಾಗ ಎ​ದು​ರಿನ ವ್ಯ​ಕ್ತಿ​ಯನ್ನು ಖಂಡಿ​ಸು​ವುದು, ವಿ​ರೋ​ಧಿ​ಸು​ವು​ದು ನಿ​ಜ​ವಾದ ವ​ಕೀ​ಲರ ಲ​ಕ್ಷ​ಣ​ವಲ್ಲ. ನ್ಯಾ​ಯಾ​ಲ​ಯದ ಕ​ಲಾ​ಪ​ದಲ್ಲಿ ಭಾಷೆ ಹಾಗೂ ಪ​ದ​ಗಳ ಬ​ಳ​ಕೆಯ ಮೇಲೆ ಬ​ಹ​ಳಷ್ಟು ಎ​ಚ್ಚ​ರ​ವಿ​ರ​ಬೇಕು ಎಂದು ವ​ಕೀ​ಲ​ರಿಗೆ ಸ​ಲಹೆ ನೀ​ಡಿ​ದ​ರು.

ಪ್ರ​ಶಸ್ತಿ ಪ್ರ​ದಾನ..ರಾ​ಷ್ಟ್ರೀಯ ಮ​ಟ್ಟದ ಅ​ಣಕು ಸ್ಪ​ರ್ಧೆ​ಯಲ್ಲಿ ಭಾ​ಗ​ವ​ಹಿ​ಸಿದ್ದ ಬೆ​ಳ​ಗಾ​ವಿಯ ಕೆಎಲ್‌ಇ ಬಿ.ವಿ. ಬೆಲ್ಲದ ಕಾನೂನು ಕಾಲೇಜ್‌ ಪ್ರಥಮ ಸ್ಥಾನ ಪಡೆಯಿತು. ರನ್ನರ್‌ ಅಪ್‌ ಆಗಿ ತಮಿಳುನಾಡಿನ ಸವಿತಾ ಸ್ಕೂಲ್‌ ಆಫ್‌ ಲಾ ಕಾಲೇಜ್‌ ಹೊರಹೊಮ್ಮಿತು. ಅ​ದ​ರಂತೆ ಬೆಸ್ಟ್‌ ಮೆಮೋರಿಯಲ್‌ ಪ್ರಶಸ್ತಿಯನ್ನು ಬೆಂಗಳೂರಿನ ಕ್ರೈಸ್ಟ್‌ ವಿಶ್ವವಿದ್ಯಾಲಯ, ಬೆಸ್ಟ್‌ ಮೇಲ್‌ ಅವಾರ್ಡ್‌ ಸಾಯಿರಾಜ್‌, ಬೆಸ್ಟ್‌ ಫಿಮೇಲ್‌ ಅವಾರ್ಡ್‌ ಕೀರ್ತನಾ ಪಡೆದರು. ವಿ​ವಿಧ ಕಾ​ಲೇ​ಜು​ಗ​ಳಿಂದ ಒಟ್ಟು 16 ತಂಡ​ಗಳು ಭಾ​ಗ​ವ​ಹಿ​ಸಿ​ದ್ದ​ರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಂ.ಜಿ. ಉಮಾ, ಉಮೇಶ ಎಂ.ಅಡಿಗ, ವಿಜಯಕುಮಾರ ಪಾಟೀಲ, ಕೆಎಲ್‌ಇ ನಿರ್ದೇಶಕ ಶ್ರೀಶೈಲಪ್ಪ ಮೆಟಗುಡ್ಡ, ಶಂಕ್ರಣ್ಣ ಮು​ನ​ವಳ್ಳಿ ​ಇ​ದ್ದ​ರು.

ಇಂದು ದುಬಾರಿ ವಕೀಲರನ್ನು ನೇ​ಮಿ​ಸಿ​ದಲ್ಲಿ ತೀರ್ಪು ಬೇಗ ಬರುತ್ತದೆ ಎಂಬ ಮ​ನೋ​ಭಾ​ವನೆ ಕೆಲ ಕ​ಕ್ಷಿ​ದಾ​ರ​ರಲ್ಲಿದೆ, ಅ​ದು ಸ​ರಿ​ಯಲ್ಲ. ಯಾವುದೇ ಪ್ರಕರಣ ಇರಲಿ ಶ್ರೀಸಾಮಾನ್ಯನಿಗೂ ನ್ಯಾಯ ಸಿಗಬೇಕು. ಅಂಥದ್ದನ್ನು ಜಾರಿಗೆ ತರಲು ರಾಜ್ಯ ಸರಕಾರ ಉತ್ಸುಕವಾಗಿದೆ ಎಂದು ಕಾನೂನು ಸಚಿವ ಎ​ಚ್‌.​ಕೆ. ​ಪಾ​ಟೀಲ ಹೇಳಿದರು.