ವಕೀಲರು ನಿರಂತರವಾಗಿ ವಿದ್ಯಾರ್ಥಿಗಳಂತೆ ಅಭ್ಯಾಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ್ ಮಿಸ್ಕಿನ್ ಹೇಳಿದರು. ಅವರು ಶನಿವಾರ ವಕೀಲರ ಸಂಘದಲ್ಲಿ ಹಿರಿಯ ವಕೀಲರಾದ ಎಂ.ಕಾಳಿಂಗಪ್ಪ ಮತ್ತು ಆರ್ .ಮಲ್ಲಯ್ಯ ಅವರು 50 ವರ್ಷ ವಕೀಲ ವೃತ್ತಿ ಪೂರೈಸಿದ ಹಿನ್ನೆಲೆಯಲ್ಲಿ ಅವರ ಶಿಷ್ಯ ವೃಂದದವರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು

ಕನ್ನಡಪ್ರಭ ವಾರ್ತೆ ಸಿಂಧನೂರು

ವಕೀಲರು ನಿರಂತರವಾಗಿ ವಿದ್ಯಾರ್ಥಿಗಳಂತೆ ಅಭ್ಯಾಸ ಮಾಡಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ್ ಮಿಸ್ಕಿನ್ ಹೇಳಿದರು. ಅವರು ಶನಿವಾರ ವಕೀಲರ ಸಂಘದಲ್ಲಿ ಹಿರಿಯ ವಕೀಲರಾದ ಎಂ.ಕಾಳಿಂಗಪ್ಪ ಮತ್ತು ಆರ್ .ಮಲ್ಲಯ್ಯ ಅವರು 50 ವರ್ಷ ವಕೀಲ ವೃತ್ತಿ ಪೂರೈಸಿದ ಹಿನ್ನೆಲೆಯಲ್ಲಿ ಅವರ ಶಿಷ್ಯ ವೃಂದದವರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರುಎಷ್ಟೇ ಅನುಭವಿ ವಕೀಲರಾದರು ಅವರು ಪ್ರತಿನಿತ್ಯ ಹೊಸ ಹೊಸ ಪ್ರಕರಣಗಳ ಕುರಿತು ವಿವಿಧ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳನ್ನು ಓದಬೇಕು. ಅಂದಾಗ ಮಾತ್ರ ತಮ್ಮ ಪ್ರಕರಣಗಳಲ್ಲಿ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಕಾಳಿಂಗಪ್ಪ ವಕೀಲರು ಹಿಂದಿನ ವಕೀಲರಿಗೂ ಇಂದಿನ ವಕೀಲರಿಗೂ ಅಧ್ಯಯನದ ವಿಚಾರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ವಕೀಲರು ಹೆಚ್ಚು ಅಧ್ಯಯನ ಮಾಡದೆ ಹಣದ ಕಡೆ ಮುಖ ಮಾಡಿದ್ದಾರೆ.ಕಕ್ಷಿದಾರರಿಗೆ ಸರಿಯಾಗಿ ಒದಗಿಸಬೇಕೆಂದರೆ ನ್ಯಾಯಾಲಯದಲ್ಲಿ ವಕೀಲರ ಪಾತ್ರ ಬಹುಮುಖ್ಯವಾಗಿದೆ. ನ್ಯಾಯಾಧೀಶರು ಹಾಗೂ ವಕೀಲರು ನಿಷ್ಪಕ್ಷ ಪಾತವಾಗಿ ಕೆಲಸ ಮಾಡಿದರೆ ಮಾತ್ರ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು.

ಹಿರಿಯ ವಕೀಲರಾದ ಅಬ್ದುಲ್ ಗನಿಸಾಬ, ಜಿ.ಎಸ್.ಆರ್‌.ಕೆ.ರೆಡ್ಡಿ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ ಮಾತನಾಡಿದರು. ಸಿವಿಲ್ ನ್ಯಾಯಾಧೀಶರಾದ ರೂಪಾ ವಗ್ಗ ,ಸರಸ್ವತಿ ವೋಟ್ಕರ್, ವಿಜಯಕುಮಾರ್ ಉಪಸ್ಥಿತರಿದ್ದರು. ದೆ ವೇಳೆ 50 ವರ್ಷ ಪೂರೈಸಿದ ಇಬ್ಬರು ವಕೀಲರನ್ನು ಅವರ ಶಿಷ್ಯ ವೃಂದ ಹಾಗೂ ಅಭಿಮಾನಿ ಬಳಗ ಸನ್ಮಾನಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎಚ್ .ರಾಮನಗೌಡ ವಹಿಸಿದ್ದರು. ಎಸ್.ಎಚ್. ಖಾದ್ರಿ ಸ್ವಾಗತಿಸಿದರು.ಶರಣಯ್ಯಸ್ವಾಮಿ ಪ್ರಾರ್ಥಿಸಿದರು. ರಾಮಣ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರುಪಾದಪ್ಪ ಗುಡಿಹಾಳ ನಿರೂಪಿಸಿ, ವಂದಿಸಿದರು.