ವಕೀಲರ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ವಕೀಲರ ದಿನಾಚರಣೆ ಮತ್ತು ನ್ಯಾಯಾಧೀಶರ ಬೀಳ್ಕೊಡುಗೆ ಸಮಾರಂಭ ಬಂಟ್ವಾಳ ಬಾರ್ ಅಸೋಸಿಯೇಷನ್ ನಲ್ಲಿ ನಡೆಯಿತು.
ಬಂಟ್ವಾಳ: ವಕೀಲರ ಸಂಘ ಬಂಟ್ವಾಳ ಇದರ ಆಶ್ರಯದಲ್ಲಿ ವಕೀಲರ ದಿನಾಚರಣೆ ಮತ್ತು ನ್ಯಾಯಾಧೀಶರ ಬೀಳ್ಕೊಡುಗೆ ಸಮಾರಂಭ ಬಂಟ್ವಾಳ ಬಾರ್ ಅಸೋಸಿಯೇಷನ್ ನಲ್ಲಿ ನಡೆಯಿತು.ಹಿರಿಯ ಸಿವಿಲ್ ನ್ಯಾಯಾಧೀಶರಾಗಿ ಬಡ್ತಿ ಪಡೆದು ಶ್ರೀರಂಗಪಟ್ಟಣ, ಮಂಡ್ಯಕ್ಕೆ ವರ್ಗಾವಣೆಗೊಂಡ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ.ಬಂಟ್ವಾಳ ಕೃಷ್ಣ ಮೂರ್ತಿ ಅವರನ್ನು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ.ಬಂಟ್ವಾಳ ಅನಿಲ್ ಪ್ರಕಾಶ್ ಎಂ.ಪಿ. ಹಾಗೂ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್ .ಸಿ.ಬಂಟ್ವಾಳ ರಾಜೇಂದ್ರ ಕೆ.ಎಸ್.ಅವರು, ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೋಸ್ತಾ ಎಂ.ಹಾಗೂ ಹಿರಿಯ ವಕೀಲರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್.ಸಿ.ಬಂಟ್ವಾಳ ಅನಿಲ್ ಪ್ರಕಾಶ್ ಎಂ.ಪಿ.ಅವರು ನ್ಯಾಯಾಧೀಶರಾದ ಕೃಷ್ಣಮೂರ್ತಿ ಅವರಿದ ಬಂಟ್ವಾಳದ ಆಚಾರ ವಿಚಾರಗಳ ಬಗ್ಗೆ ಕೇಳಿ ತಿಳಿದುಕೊಂಡಿದ್ದೇನೆ. ಅವರ ಬಗೆಗಿನ ಉತ್ತಮ ಅಭಿಪ್ರಾಯಗಳು ಮುಂದಿನ ಯಶಸ್ಸಿಗೆ ವೇದಿಕೆಯಾಗಲಿ ಎಂದು ಹೇಳಿದರು.ವಕೀಲ ವೃತ್ತಿ ಬಹಳ ಮಹತ್ವದ್ದು ಆಗಿದೆ ಎಂದು ವಕೀಲರಿಗೆ ವೃತ್ತಿಯ ಬಗ್ಗೆ ತಿಳಿಸಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಮ್.ಎಫ್ .ಸಿ.ಬಂಟ್ವಾಳ ರಾಜೇಂದ್ರ ಕೆ.ಎಸ್.ಅವರು ಮಾತನಾಡಿನಮ್ಮನ್ನು ನಂಬಿ ಬರುವ ಕಕ್ಷಿದಾರನಿಗೆ ನ್ಯಾಯಕೊಡುವುದು ಬಹಳ ಪ್ರಮುಖ ವಿಚಾರ ಮತ್ತು ಜವಬ್ದಾರಿಯಾಗಿದೆ. ಎಲ್ಲರು ಉತ್ತಮವಾಗಿ ಕೆಲಸ ಮಾಡಿ ಎಂದು ಶುಭ ಹಾರೈಸಿದರು.ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಮ್.ಎಫ್.ಸಿ.ಬಂಟ್ವಾಳ ಕೃಷ್ಣ ಮೂರ್ತಿ ಅವರು ಮಾತನಾಡಿ, ಮಂಗಳೂರಿಗೆ ಒಂದು ವಿಶೇಷ ಸ್ಥಾನಮಾನ ಇದೆ. ಅಂತಹ ಸ್ಥಳದಲ್ಲಿ ನಾನು ನನ್ನ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬಲ್ಲೆ ಎಂಬ ಯೋಚನೆ ನನ್ನಲ್ಲಿ ಇತ್ತು. ಆದರೆ ಬಂಟ್ವಾಳದ ನ್ಯಾಯಾಲಯದ ಮೂಲಕ ಅನೇಕ ಉತ್ತಮ ಸಂಗತಿಗಳನ್ನು ಕಲಿತುಕೊಂಡಿದ್ದೇನೆ. ಮತ್ತು ಬಂಟ್ವಾಳದಲ್ಲಿ ಮೂರುವರೆ ವರ್ಷಗಳು ಕಳೆದುಹೋದ ದಿನಗಳು ಗೊತ್ತೇ ಆಗಿಲ್ಲ, ಅಂತಹ ವಾತಾವರಣ ಬಂಟ್ವಾಳದಲ್ಲಿ ಇತ್ತು ಎಂದು ನಾನು ಹೇಳಬಲ್ಲೆ. ಎಲ್ಲರ ಸಹಕಾರದಿಂದ ನ್ಯಾಯದೀಶರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ವೃತ್ತಿಯಲ್ಲಿ ಎಡವುದು ಸಹಜ,ತಿದ್ದಿಕೊಂಡು ಹೋಗುವ ಮನಸ್ಸಿದ್ದರೆ ಯಶಸ್ಸು ಸಾಧ್ಯ ಎಂದು ತಿಳಿಸಿದರು.ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ಮತ್ತು ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಕೊಸ್ತಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ವಕೀಲ ಶ್ರೀನಿವಾಸ ದೈಪಲ ವಕೀಲರ ದಿನಾಚರಣೆಯ ಬಗ್ಗೆ ಮಾತನಾಡಿ, ಶುಭಹಾರೈಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ವೀರೇಂದ್ರ ಎಂ.ಸಿದ್ದಕಟ್ಟೆ ಸ್ವಾಗತಿಸಿ, ವಕೀಲರ ಸಂಘದ ಜೊತೆ ಕಾರ್ಯದರ್ಶಿ ಅಕ್ಷತಾ ಶೆಟ್ಟಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ನರೇಂದ್ರನಾಥ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.