ಕ್ರೀಡಾ ಸ್ಪರ್ಧೆ ವಿಜೇತರಿಗೆ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ನ್ಯಾಯಾಲಯ ಆವರಣದಲ್ಲಿರುವ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ವಕೀಲರ ದಿನಾಚರಣೆ ಪ್ರಯುಕ್ತ ಸಂಘದ ಸದಸ್ಯರಿಗೆ ಕ್ರೀಡಾ ಸ್ಪರ್ಧೆ ವಿಜೇತರಿಗೆ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕೆ.ಎಸ್. ಪದ್ಮನಾಭ ಹಾಗೂ ಎನ್.ಡಿ. ಅರುಣ್ ಪ್ರಥಮ ಸ್ಥಾನ ಪಡೆದರು. ಎಸ್.ಎನ್. ಹರೀಶ್ ಮತ್ತು ಬಿ.ಜೆ. ದೀಪಕ್ ದ್ವಿತೀಯ ಸ್ಥಾನ ಪಡೆದರು. ಕೇರಂ ಡಬಲ್ಸ್ ಬಿ.ಎಂ ಯತೀಶ್ ಹಾಗೂ ಶಿವಕುಮಾರ್ (ಪ್ರ), ಕೆ.ಎಸ್. ಪದ್ಮನಾಭ ಮತ್ತು ಬಿ.ಈ. ಜಯೇಂದ್ರ (ದ್ವಿ), ಕೌಶಲ್ಯ ಪಂದ್ಯದಲ್ಲಿ ಎಸ್.ಎಸ್. ಮನೋಹರ್ (ಪ್ರ) ಹಾಗೂ ಎಸ್.ಎನ್. ಹರೀಶ್ (ದ್ವಿ) ಸ್ಥಾನ ಗಳಿಸಿದರು. ಮಹಿಳೆಯರ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವೇದ(ಪ್ರ) ಮತ್ತು ಪ್ರೀತಿ(ದ್ವಿ) ಸ್ಥಾನ ಗಳಿಸಿದರು. ಆನ್ ತ್ರಡ್ಡಿಂಗ್ ಪಂದ್ಯದಲ್ಲಿ ಪ್ರಿಯದರ್ಶಿನಿ(ಪ್ರ) ಹಾಗೂ ಪ್ರೀತಿ (ದ್ವಿ), ಪಾಸಿಂಗ್ ದ ಬಾಲ್ ಪಂದ್ಯದಲ್ಲಿ ಬಿ.ಎಂ. ಯತೀಶ್(ಪ್ರ), ಪ್ರಿಯದರ್ಶಿನಿ(ದ್ವಿ) ಸ್ಥಾನಗಳಿಸಿದರು.ವಿಜೇತರಿಗೆ ಹಿರಿಯ ಸಿವಿಲ್ ನ್ಯಾಯಾಧೀಶರಾದ ರೇಖಾ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜೆ.ಎನ್. ಶ್ರೀನಾಥ್, ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಕಾರ್ಯದರ್ಶಿ ಯತೀಶ್, ಹಿರಿಯ ವಕೀಲರಾದ ಎಚ್.ಎಸ್. ಪ್ರಕಾಶ್ ಮತ್ತು ಪಿ.ಕೆ. ಗಣಪತಿ ಇದ್ದರು.