ಅಮಿತ್‌ ಶಾ ರಾಜೀನಾಮೆಗೆ ವಕೀಲರ ಆಗ್ರಹ

| Published : Dec 25 2024, 12:48 AM IST

ಸಾರಾಂಶ

ಬೀದರ್‌ನಲ್ಲಿ ಸಮಾನ ಮನಸ್ಕ ವಕೀಲರಿಂದ ಅಮಿತ್‌ ಶಾ ರಾಜೀನಾಮೆಗೆ ಒತ್ತಾಯಿಸಿ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಕನ್ನಡವಾರ್ತೆ ಬೀದರ್‌

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ಖಂಡಿಸಿ ಮಂಗಳವಾರ ಬೀದರ್‌ನಲ್ಲಿ ಪ್ರಗತಿಪರ ಮತ್ತು ಸಮಾನ ಮನಸ್ಕ ವಕೀಲರು ಸಭೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುವ ಮೂಲಕ ಕೇಂದ್ರಸರ್ಕಾರದ ಗೃಹ ಸಚಿವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಹಿರಿಯ ವಕೀಲರಾದ ಕಾಶಿನಾಥರಾವ್‌ ಫುಲೆ ಮಾತನಾಡಿ, ಡಾ.ಅಂಬೇಡ್ಕರ್‌ ನೀಡಿದ ಸಂವಿಧಾನದಿಂದಾಗಿ ಶೋಷಿತ ಸಮಾಜ, ಅಲ್ಪ ಸಂಖ್ಯಾತರು ಮತ್ತು ಹಿಂದುಳಿದವರು ಸ್ವತಂತ್ರವಾಗಿ ಬಾಳಲು ಸಾಧ್ಯವಾಗಿದೆ ಎಂದರು.

ಸಂಸತ್ತಿನಲ್ಲಿ ಅಮಿತ್‌ ಶಾ ಅವರು ಸಂವಿಧಾನಕ್ಕೆ. ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ಮತ್ತು ಅವರ ಅನುಯಾಯಿಗಳಿಗೆ ಅಪಮಾನ ಮಾಡಿದ್ದಾರೆ. ಅಮಿತ್‌ ಶಾ ಅವರ ಹೇಳಿಕೆಯನ್ನು ಸಮರ್ಥಿಸಿರುವ ಪ್ರಧಾನ ಮಂತ್ರಿಯವರ ನಡುವಳಿಕೆ ಕೂಡಾ ಖಂಡನೀಯವಾಗಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ವಕೀಲರಾದ ಕಾಶಿನಾಥರಾವ್‌ ಫೂಲೆ, ದೀಪಕ ಗುಪ್ತಾ, ಶರಣಪ್ಪ ಶರ್ಮಾ, ಸುಂದರಾಜ ಫೀರಂಗೆ, ಧೋಂಡಿಬಾ, ಶಿವರುದ್ರ ಕಾಂಬಳೆ , ಬಾಬುರಾವ್‌ ಹೊನ್ನಾ. ಆನಂದ ಶಾಖಾ, ಶಂಕರ ಹೌಗೆ, ಗಣಪತಿ ಬಾಪೂರ, ಸುನೀಲಕುಮಾರ ಸೋನೆ, ನರಸಿಂಗ ಸಿಂದೆ, ರಮೇಶ ನೇಳಗೆ, ನಾಗೇಂದ್ರ ಬಲ್ಲೂರೆ, ಪದ್ಮಾನಂದ ಖರ್ಗೆ, ಸಿರಾಜೋದ್ದೀನ್‌ ಪಟೇಲ್‌, ವಿನೋದಕುಮಾರ, ಓಂಕಾರ ಸಿಂಧೆ, ಧನ್ವಂತ್ರಿ, ಅಂಬಾದಾಸ ವಾಗರಾಜ, ಸುಭಾಷ ಫುಲೆ ಸೇರಿ ಅನೇಕರು ಭಾಗವಹಿಸಿದ್ದರು.