ಸಾರಾಂಶ
ಲಕ್ಷ್ಮೇಶ್ವರ: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಲವು ಬದಲಾವಣೆ ಆಗುತ್ತಿರುವುದು ಸಂತೋಷದ ಸಂಗತಿಯಾಗಿದೆ. ನೂತನವಾಗಿ ಜಾರಿಯಾಗಿರುವ ಭಾರತೀಯ ನ್ಯಾಯ ಸಂಹಿತೆಯ ಹೊಸ ಕಾನೂನುಗಳ ಬಗ್ಗೆ ಅರಿಯುವುದು ಅಗತ್ಯವಾಗಿದೆ ಎಂದು ಪಟ್ಟಣದ ಹಿರಿಯ ದಿವಾಣಿ ನ್ಯಾಯಾಧೀಶ ಭರತ ಕರಗುದರಿ ಹೇಳಿದರು.
ಪಟ್ಟಣದ ಕೋರ್ಟ ಆವರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಹಾಗೂ ವಕೀಲರ ಸಂಘ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳ ಸಹಯೋಗದಲ್ಲಿ ಮೂರು ದಿನಗಳಿಂದ ನಡೆದ ತಾಲೂಕು ಮಟ್ಟದ ಕಾನೂನು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಕಾನೂನು ವ್ಯವಸ್ಥೆಯಲ್ಲಿ ಅನೇಕ ಬದಲಾವಣೆ ಆಗುತ್ತಿವೆ. ನೂತನವಾಗಿ ರಚನೆಯಾಗಿರುವ ಭಾರತೀಯ ನ್ಯಾಯ ಸಂಹಿತೆಯ ಬಗ್ಗೆ ವಕೀಲರಿಗೆ ಅರಿವು ಅಗತ್ಯವಾಗಿದೆ. ಆ ದೃಷ್ಟಿಯಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಾಗಾರ ಉಪಯುಕ್ತವಾಗಿದೆ. ನೂತನ ಭಾರತೀಯ ನ್ಯಾಯ ಸಂಹಿತೆಯ ಕಾನೂನುಗಳಲ್ಲಿ ಆಗಿರುವ ಬದಲಾವಣೆಯ ಅಂಶ ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಅದರ ಗೌರವ ಹೆಚ್ಚಿಸುವ ಕಾರ್ಯ ಮಾಡೋಣ ಎಂದು ಹೇಳಿದರು.
ಈ ವೇಳೆ ಲಕ್ಷ್ಮೇಶ್ವರ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಮಾತನಾಡಿ, ಕಳೆದ 3 ದಿನಗಳಿಂದ ನಡೆದ ಕಾನೂನು ಕಾರ್ಯಾಗಾರವು ನಮ್ಮೆಲ್ಲರಿಗೆ ಉಪಯುಕ್ತವಾಗಿದೆ, ಹಲವು ಉಪನ್ಯಾಸಕರು ತಮ್ಮ ಕಾನೂನಿನ ಜ್ಞಾನದ ಸವಿ ನಮಗೆ ನೀಡಿದ್ದಾರೆ. ಈ ಕಾರ್ಯಾಗಾರದ ಅನುಭವ ಮುಂದಿನ ನಮ್ಮ ವೃತ್ತಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಕಕ್ಕಿದಾರರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡೋಣ ಎಂದು ಹೇಳಿದರು.ಈ ವೇಳೆ ಹಿರಿಯ ವಕೀಲ ಎಸ್.ಪಿ. ಬಳಿಗಾರ, ಪುಲಕೇಶಿ ಉಪನಾಳ, ಹೀನಾಕೌಸರ ಗಂಜಿಹಾಳ, ಎ.ಟಿ.ಕಟ್ಟಿಮನಿ, ಎಂ.ಎನ್. ಬಾಡಗಿ, ಎಸ್.ಡಿ. ಕಮತದ, ಎನ್.ಐ. ಬೆಲ್ಲದ, ವಿ.ಆರ್. ಪಾಟೀಲ, ಐ.ಜಿ. ಹುಲಬಬಜಾರ, ಬಿ.ಎನ್. ಸಂಶಿ, ಎನ್.ಎಂ. ಗದಗ, ಮಹೇಶ ಹಾರೂಗೇರಿ, ಎನ್.ಎಂ. ರಿತ್ತಿಮಠ, ಆರ್.ವಿ. ವೆರ್ಣೇಕರ, ವಿ.ಎಸ್. ಪಶುಪತಿಹಾಳ, ಜೆ.ಡಿ. ದೊಡ್ಡಮನಿ, ಬಿ.ಬಿ. ಭೂವನಗೌಡರ, ಆರ್.ಎಂ. ಕುರಿ, ಎಸ್.ವೈ. ಗೊಬ್ಬರಗುಂಪಿ, ಎಸ್.ಕೆ. ಪುರ್ತಗೇರಿ, ಎನ್.ಐ. ಸೊರಟೂರ, ಬಿ.ವಿ. ಪಾಟೀಲ, ಬಿ.ಎಸ್. ಘೋಂಗಡಿ, ಆರ್.ಆರ್. ನದಾಫ್, ವಿಠಲ್ ನಾಯಕ್, ಬಿ.ವಿ. ನೇಕಾರ ಸೇರಿದಂತೆ ಹಲವರು ಇದ್ದರು.