ವಕೀಲರ ಮೇಲೆ ಆಗುತ್ತಿರುವ ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಸಮಗ್ರವಾದ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ವಕೀಲರ ಮೇಲೆ ಆಗುತ್ತಿರುವ ಹಲ್ಲೆ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಸಮಗ್ರವಾದ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಬೇಕೆಂದು ಒತ್ತಾಯಿಸಿ ವಕೀಲರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.ಪಟ್ಟಣದಲ್ಲಿ ಎಲ್ಲ ವಕೀಲರು ಕಲಾಪದಿಂದ ದೂರ ಉಳಿದು ಪುರಸಭೆ ಎದುರು ರಸ್ತೆ ತಡೆ ನಡೆಸಿ ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ, ವಕೀಲರ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.
ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ರಾಯಚೂರು ಮಾತನಾಡಿ, ದೇಶಾದ್ಯಂತ ವಕೀಲರ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತಂದಿದೆ. ಆದರೆ ಅದು ನೆಪ ಮಾತ್ರವಾಗಿದೆ. ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಾಡಿ ಮತ್ತಷ್ಟು ಬಲಪಡಿಸಿ ಸಮಗ್ರ ಕಾಯ್ದೆ ಯಾರಿಗೆ ಬರುವಂತೆ ವಕೀಲರ ಸಂಘದ ಪರವಾಗಿ ರಾಜ್ಯ ಸರ್ಕಾರಕ್ಕೆ ನಾವು ಆಗ್ರಹಿಸುತ್ತಿದ್ದೇವೆ. ವಕೀಲರ ಹಿತರಕ್ಷಣೆ ಸರ್ಕಾರ ಕಾಯಬೇಕು ಎಂದು ಆಗ್ರಹಿಸಿದರು.ಪುರಸಭೆ ಎದುರು ರಸ್ತೆಯಲ್ಲಿ ಎಲ್ಲ ವಕೀಲರು ಮಾನವ ಸರಪಳಿ ನಿರ್ಮಿಸಿ ಸರ್ಕಾರಕ್ಕೆ ತಮ್ಮ ತೊಂದರೆ, ಸಮಸ್ಯೆಗಳನ್ನು ಹೇಳಿಕೊಂಡರು. ಬಳಿಕ ತಹಸೀಲ್ದಾರ್ ಅವರ ಮೂಲಕ ವಕೀಲರ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಸುಭಾಸ ಹೊಸಮನಿ, ಕಾರ್ಯದರ್ಶಿ ತಮ್ಮಣ್ಣೆಪ್ಪ ಬೆನಕಟ್ಟಿ, ಆರ್.ಎಸ್.ಗೌಡರ್, ಶಕೀಲ್ ಕಂಟ್ರಾಕ್ಟರ್, ಎಸ್.ಆರ್.ಬರಹಾಣಪುರ್, ಸಿ.ಪಿ.ಬೆಕಿನಾಳ, ಕೆ.ಟಿ.ಪವಾರ್, ಬಿ.ಎಸ್.ರಾಂಪುರ್, ಜಿ.ಐ.ಮೇಟಿ, ಎ.ಬಿ.ಉದ್ನೂರ, ಪಿ.ಆರ್. ಬಡಿಗೇರ, ಪಿ.ಎನ್.ರಾಠೋಡ, ಶೃತಿ ಕಾರಕೂನ ಇತರರು ಇದ್ದರು.