ಸಾರಾಂಶ
ದೇಶಕ್ಕೆ ಸ್ವಾತಂತ್ರ್ಯ ಬರಲು ವಕೀಲರ ಪಾತ್ರ ಮುಖ್ಯ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ 1950 ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂತು, ಸಂವಿಧಾನ ಜಾರಿಗೆ ಬರಲು ಸಹ ವಕೀಲರ ಪಾತ್ರ ಪ್ರಮುಖವಾಗಿತ್ತು. ನೊಂದವ್ಯಕ್ತಿಗಳಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ವಕೀಲರ ಮೇಲಿದೆ.
ಕನ್ನಡಪ್ರಭ ವಾರ್ತೆ ಗುಡಿಬಂಡೆ
ನ್ಯಾಯಾಲಯದ ಕಲಾಪದಲ್ಲಿ ಹಿರಿಯ ವಕೀಲರು ವಾದ ಮಂಡಿಸುತ್ತಿರುವಾಗ ಅದನ್ನು ಗಮನವಿಟ್ಟು ಕೇಳಬೇಕು. ನಿರಂತರವಾಗಿ ಪರಿಶ್ರಮ ಮಾಡುತ್ತಾ ಕೆಲಸ ಮಾಡಬೇಕು. ಕಕ್ಷಿದಾರರ ವಿಶ್ವಾಸಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಜೊತೆಗೆ ಯುವ ವಕೀಲರು ಅಧ್ಯಯನಶೀಲರಾಗಿರಬೇಕೆಂದು ಗುಡಿಬಂಡೆ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಕೆ.ಎಂ ಹರೀಶ್ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘ ವತಿಯಿಂದ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಕ್ಷಿದಾರರಿಗೆ ನ್ಯಾಯ ಒದಗಿಸಿದೇಶಕ್ಕೆ ಸ್ವಾತಂತ್ರ್ಯ ಬರಲು ವಕೀಲರ ಪಾತ್ರ ಮುಖ್ಯ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರ 1950 ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂತು, ಸಂವಿಧಾನ ಜಾರಿಗೆ ಬರಲು ಸಹ ವಕೀಲರ ಪಾತ್ರ ಪ್ರಮುಖವಾಗಿತ್ತು. ನೊಂದವ್ಯಕ್ತಿಗಳಿಗೆ ನ್ಯಾಯ ದೊರಕಿಸಿಕೊಡುವ ಜವಾಬ್ದಾರಿ ವಕೀಲರ ಮೇಲಿದೆ. ಹಾಗೆ ಈಗಿನ ಯುವ ವಕೀಲರು ಹಿರಿಯ ವಕೀಲರ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಮನಾಥ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಕೀಲಎ. ಗಂಗಧಾರಪ್ಪ ರವರನ್ನು ಸನ್ಮಾನಿಸಲಾಯಿತು.ಈ ವೇಳೆ ಈ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕ ರಾಮಮೂರ್ತಿ, ವಕೀಲರ ಸಂಘದ ಉಪಾಧ್ಯಕ್ಷ ನಂದೀಶ್ವರ ರೆಡ್ಡಿ, ಕಾರ್ಯದರ್ಶಿ ಮಂಜುನಾಥ, ಹಿರಿಯ ವಕೀಲರಾದ ಪಿ.ವಿ.ಲಕ್ಷ್ಮೀನಾರಾಯಣ, ಪಿ.ಶಿವಪ್ಪ, ಶಿವಾನಂದರೆಡ್ಡಿ, ನಾರಾಯಣಸ್ವಾಮಿ, ಅಶ್ವತ್ಥರೆಡ್ಡಿ, ನರಸಿಂಹಪ್ಪ ಇತರೆ ವಕೀಲರ ಸಂಘದ ಸದಸ್ಯರು ಮತ್ತು ನ್ಯಾಯಾಲಯದ ಸಿಬ್ಬಂದಿ ಹಾಗೂ ಸಾರ್ವಜನಿಕ ಹಾಜರಿದ್ದರು.