೭ರಿಂದ ೧೧ರವರೆಗೆ ನ್ಯಾಯವಾದಿಗಳ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ

| Published : Feb 06 2024, 01:33 AM IST

೭ರಿಂದ ೧೧ರವರೆಗೆ ನ್ಯಾಯವಾದಿಗಳ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಯವಾದಿಗಳಲ್ಲಿ ಸೌಹಾರ್ದತೆ, ಸಾಮರಸ್ಯ ಮೂಡಿಸಲು ನ್ಯಾಯಯವಾದಿಗಳ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ವಿಜಯಪುರದಲ್ಲಿ ಫೆ.೭ರಿಂದ ಫೆ.೧೧ರವರೆಗೆ ನಡೆಯಲಿದ್ದು, ಎಲ್ಲ ಜಿಲ್ಲೆಗಳ ೩೦ ತಂಡಗಳು ಭಾಗವಹಿಸಲಿವೆ ಎಂದು ನ್ಯಾಯವಾದಿಗಳ ಸಂಘದ ಐ.ಜಿ.ಚಾಗಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನ್ಯಾಯವಾದಿಗಳಲ್ಲಿ ಸೌಹಾರ್ದತೆ, ಸಾಮರಸ್ಯ ಮೂಡಿಸಲು ನ್ಯಾಯಯವಾದಿಗಳ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ವಿಜಯಪುರದಲ್ಲಿ ಫೆ.೭ರಿಂದ ಫೆ.೧೧ರವರೆಗೆ ನಡೆಯಲಿದ್ದು, ಎಲ್ಲ ಜಿಲ್ಲೆಗಳ ೩೦ ತಂಡಗಳು ಭಾಗವಹಿಸಲಿವೆ ಎಂದು ನ್ಯಾಯವಾದಿಗಳ ಸಂಘದ ಐ.ಜಿ.ಚಾಗಶೆಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವತಿಯಿಂದ ೨ನೇ ಬಾರಿ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, ಟೂರ್ನಿಯು ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಹೊನಲು-ಬೆಳಕಿನಲ್ಲಿ ನಡೆಯಲಿದ್ದು, ೩೦ ತಂಡಗಳನ್ನು ೧೦ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಲೀಗ್ ಹಂತದಲ್ಲಿ ೧೦ ಓವರ್, ನಾಕೌಟ್ ಪಂದ್ಯಗಳು ೧೨ ಓವರ್ ಹಾಗೂ ಫೈನಲ್ ಪಂದ್ಯ ೧೫ ಓವರ್ ಇರುತ್ತದೆ. ಬಿಎಲ್‌ಡಿಇ ವಿವಿ ಕ್ಯಾಂಪಸ್ ಗ್ರೌಂಡ್‌ನಲ್ಲಿ ಟೂರ್ನಿ ನಡೆಯಲಿದೆ. ಅರ್ಹತೆ ಹೊಂದಿದ ಅಂಪೈರ್‌ಗಳನ್ನು ಕರೆಸಲಾಗುತ್ತಿದೆ. ಕೇರಳದಿಂದ ತಜ್ಞರನ್ನು ಕರೆಸಿ ಪಿಚ್ ಸಿದ್ಧಗೊಳಿಸಲಾಗುತ್ತಿದೆ ಎಂದರು.

ಕ್ರಿಕೆಟ್ ಕಮಿಟಿ ಅಧ್ಯಕ್ಷ ಸಂಗಮೇಶ ಡೊಂಗರಗಾವಿ ಮಾತನಾಡಿ, ಟೂರ್ನಿಗೆ ಸುಮಾರು ₹೨೫ ಲಕ್ಷ ಖರ್ಚಾಗಲಿದ್ದು, ನಗದು ಬಹುಮಾನ, ಟ್ರೋಫಿ, ಬೇರೆ ಜಿಲ್ಲೆಗಳ ತಂಡಗಳಿಗೆ ವಸತಿ, ಆಹಾರ ಹೀಗೆ ಒಂದೊಂದು ವ್ಯವಸ್ಥೆಯ ಪ್ರಾಯೋಜಕತ್ವವನ್ನು ಹಿರಿಯ ನ್ಯಾಯವಾದಿಗಳು, ಉದ್ಯಮಿಗಳು ವಹಿಸಿಕೊಂಡಿದ್ದಾರೆ. ಮೊದಲ ಬಹುಮಾನ ₹೧ ಲಕ್ಷ, ದ್ವಿತೀಯ ಬಹುಮಾನ ₹೫೦ ಸಾವಿರ ಹಾಗೂ ತೃತೀಯ ಬಹುಮಾನವನ್ನಾಗಿ ₹೨೫ ಸಾವಿರ ನಗದನ್ನು ನೀಡಲಾಗುತ್ತಿದೆ ಎಂದರು.

೩೦ ತಂಡಗಳು:

ವಿಜಯಪುರ ಚ್ಯಾಲೆಂಜರ್ಸ್, ವಿಜಯಪುರ ಟೈಗರ್ಸ್, ಹುನಗುಂದ, ಮಂಗಳೂರು, ಮಂಡ್ಯ, ಬೆಂಗಳೂರು ಮ್ಯಾಜಿಸ್ಟ್ರೇಟ್, ಗದಗ, ಧಾರವಾಡ, ದೊಡ್ಡಬಳ್ಳಾಪುರ, ಮೈಸೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕಲಬುರಗಿ (ಬಿ), ಅಥಣಿ, ಸಿಂದಗಿ, ಕಲಬುರಗಿ (ಎ), ಬೆಳಗಾವಿ, ನೆಲಮಂಗಲ, ಹುಬ್ಬಳ್ಳಿ, ಬಳ್ಳಾರಿ (ಎ), ಚಿತ್ರದುರ್ಗ, ರಾಯಚೂರು, ದೇವನಹಳ್ಳಿ, ಹಾಸನ, ದಾವಣಗೆರೆ (ಎ), ಕೋಲಾರ, ದಾವಣಗೆರೆ (ಬಿ), ಬಳ್ಳಾರಿ (ಬಿ), ಗೋಕಾಕ, ರೋಣ ತಂಡಗಳು ಭಾಗವಹಿಸಲಿವೆ ಎಂದರು.

ಗೋಷ್ಠಿಯಲ್ಲಿ ನ್ಯಾಯವಾದಿಗಳಾದ ಬಿ.ಎಸ್.ಸೋರಗಾಂವ, ಕ್ರಿಕೆಟ್ ಟೂರ್ನಿ ಸಂಚಾಲಕ ಜಾಫರ್ ಅಂಗಡಿ, ಎಸ್.ಎಸ್,ಮೂಡಲಗಿ, ಎಸ್.ಬಿ.ಜಹಾಗೀರದಾರ, ವಿಲಾಸ ವ್ಯಾಸ, ವಿ.ಎನ್.ಪಾಟೀಲ, ಡಿ.ಜೆ.ಬಿರಾದಾರ, ರಾಜಶೇಖರ ಡೊಳ್ಳಿ ಸೇರಿದಂತೆ ಮುಂತಾದವರು ಇದ್ದರು.ಫೋಟೋ..

ವಿಜಯಪುರದಲ್ಲಿ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದರು.