ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವ-

| Published : Feb 24 2025, 12:30 AM IST

ಸಾರಾಂಶ

- ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಭಾನುವಾರ ನಡೆದ.ಗ್ರಾಮಾಂತರ ಬುದ್ಧಿಜೀವಿಗಳ ಬಳಗದ 40ನೇ ವಾರ್ಷಿಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ನೆನಪಿನ ರಾಜ್ಯಮಟ್ಟದ ಸಾಹಿತ್ಯೋತ್ಸವದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಚ್.ಎಸ್.ಕೆ. ಶತಮಾನೋತ್ಸವ ಪ್ರಶಸ್ತಿ

ಹಿರಿಯ ಸಾಹಿತಿ ಹಾಗೂ ಅಂಕಣಕಾರರಾದ ಪ್ರೊ.ಎಚ್.ಎಸ್.ಕೆ. ಅವರ ನೆನಪಿನ ಶತಮಾನೋತ್ಸವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಆಂಶಿ ಪ್ರಸನ್ನಕುಮಾರ್, ಹಾವೇರಿಯ ಪರಿಸರ ಚಿಂತಕ ಜಗದೀಶ್ ಮಹಾರಾಜ್ ಪೇಟ್, ರಂಗ ಕರ್ಮಿ ಡಾ.ಎಚ್.ಎ. ಪಾರ್ಶ್ವನಾಥ ಅವರಿಗೆ ಪ್ರದಾನ ಮಾಡಲಾಯಿತು.

ಸುವರ್ಣ ಕರ್ನಾಟಕ ಪ್ರಶಸ್ತಿಯನ್ನು ಕವಯತ್ರಿನ ಡಾ. ಲತಾ ರಾಜಶೇಖರ್ - ಮಹಾ ಕಾವ್ಯ, ವೈದ್ಯಕೀಯ ಸೇವೆಗಾಗಿ ಕೆ.ಆರ್. ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ನರೇಂದ್ರ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ಪುಷ್ಪಾ ಅಯ್ಯಂಗಾರ್ ಹಾಗೂ ವೈದೇಹಿ ಅಯ್ಯಂಗಾರ್ ಅವರಿಗೆ ಪ್ರದಾನ ಮಾಡಲಾಯಿತು.

ಅಪೂರ್ವ ದಂಪತಿಗಳಿಗೆ ಪ್ರಶಸ್ತಿ

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಆರು ದಂಪತಿಗಳಿಗೆ ಸುವರ್ಣ ಕರ್ನಾಟಕ ಅಪೂರ್ವ ದಂಪತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸಮಾಜ ಸೇವೆ- ಹಾಸನದ ಡಾ.ಎಂ.ಸಿ. ರಾಜು ದೊಡ್ಡ ಮಂಡಿಗನಹಳ್ಳಿ ಹಾಗೂ ರೇವತಿ, ವೈದ್ಯಕೀಯ ಹಾಗೂ ಕನ್ನಡ ಸೇವೆಗಾಗಿ ಕೆ.ಆರ್. ನಗರದ ಡಾ.ಕೆ.ಆರ್. ಗೌತಮ್ ಹಾಗೂ ಡಾ. ವಾಣಿಶ್ರೀ, ಸಾಹಿತ್ಯ ಹಾಗೂ ಕಾನೂನು ಸೇವೆಗಾಗಿ ರೇವಣ್ಣ ಬಳ್ಳಾರಿ ಹಾಗೂ ಶಕುಂತಲಾ, ಸಾಹಿತ್ಯ ಸೇವೆಗಾಗಿ ಸಂಧ್ಯಾರಾಣಿ ದೇಶಪಾಂಡೆ ಹಾಗೂ ಗೋಪಾಲ ದೇಶಪಾಂಡೆ, ಗ್ರಾಮೀಣ ಸೇವೆಗಾಗಿ ಹೊಸ ಅಗ್ರಹಾರದ ಸಮಾಜ ಸೇವಕ ಎಚ್.ಕೆ. ಓಬೇಗೌಡ ಹಾಗೂ ಕಮಲಮ್ಮ, ಶಿಕ್ಷಣ ಸೇವೆಗಾಗಿ ಕೆ.ಆರ್. ನಗರದ ವೈ.ಸಿ. ಸತ್ಯನಾರಾಯಣ ಹಾಗೂ ಭಾರತಿ ಅವರಿಗೆ ಸುವರ್ಣ ಕರ್ನಾಟಕ

ಅಪೂರ್ವ ದಂಪತಿ ಪ್ರಶಸ್ತಿ ನೀಡಲಾಯಿತು.

ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ

ಹಾಸನ ಜಿಲ್ಲೆಯ ಹಿರಿಯ ಕವಿ ಗಿರಿರಾಜ ಹೊನ್ನಶೆಟ್ಟಿಹಳ್ಳಿ, ಬೆಂಗಳೂರಿನ ಲೇಖಕಿ ಸೌಜನ್ಯ ಶರತ್ ಚಂದ್ರ, ಕೊಡಗು ಜಿಲ್ಲೆಯ ಲೇಖಕಿ, ನಟಿ ಈರಮಂಡಲ ಹರಿಣಿ ವಿಜಯ್, ಮೈಸೂರಿನ ಪದ್ಮಶ್ರೀ ಜೈನ ಮಹಿಳಾ ಸಮಾಜದ ಲತಾ ಸುದರ್ಶನ್, ಚನ್ನರಾಯಪಟ್ಟಣದ ಸಮಾಜ ಸೇವಕ ಜಬಿವುಲ್ಲಾ ಬೇಗ್, ಯುವ ಉದ್ಯಮಿ ಸಿ. ರಾಘವೇಂದ್ರ, ಗೀತ ರಚನೆಕಾರ ರಜಾಕ್ ಪುತ್ತೂರು,ಸಾಹಿತಿ ಸುಜಾತ ರವೀಶ್,ಪುಣೆಯ ಸಾಹಿತಿ ಹೇಮಾ ಧೀ.ಮಳಗಿ ಹಾಗೂ ಗೋಕರ್ಣದ ಸಬ್

ಇನ್ಸ್ಪೆಕ್ಟರ್ ಖಾದರ್, ಗಾಯಕಿ ಎಂ.ಎನ್. ಮೊನಾಲಿಸಾ ಇವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಲಾಯಿತು.

ರಾಷ್ಟ್ರಕವಿ ಕುವೆಂಪು ಚೇತನ ಪ್ರಶಸ್ತಿ

ಸಾಹಿತ್ಯ ರಂಗದ ಸೇವೆಗಾಗಿ ಕೊಡಗಿನ ಕವಿ ಎಂ.ಡಿ. ಅಯ್ಯಪ್ಪ, ವಿಶೇಷ ಚೇತನ ಕವಿ ಬಂಡಿಹೊಳೆ ಮಂಜುನಾಥ್, ವಕೀಲ ಬಿ.ಕೆ. ನೂತನಕುಮಾರ್, ಕೆ. ವಿ. ರಮೇಶ್ ಕಟ್ಟೇಪುರ ಹಾಗೂ ಕವಯತ್ರಿ ರತ್ನಚಂದ್ರ ಶೇಖರ್ ಅವರಿಗೆ ರಾಷ್ಟ್ರ ಕವಿ ಕುವೆಂಪು ಕಾವ್ಯ ಚೇತನ ಪ್ರಶಸ್ತಿ ನೀಡಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಮರವಂತೆಯ ಕಲಾವಿದೆ ಶಯ ದೇವಿಸುತೆ ಮರವಂತೆ ಹಾಗೂ ಮೈಸೂರಿನ ಗಾಯಕಿ ಮುತ್ತು ಲಕ್ಷ್ಮಿ ರಾಮಚಂದ್ರ ಅವರಿಗೆ ರಾಷ್ಟ್ರಕವಿ ಕುವೆಂಪು ಸಾಂಸ್ಕೃತಿಕ ಚೇತನ ಪ್ರಶಸ್ತಿ, ರೈತ ಮುಖಂಡ ಸರಗೂರು ನಟರಾಜ್ ಹಾಗೂ ಕೆ.ಆರ್. ಪೇಟೆಯ ಸಾಂಪ್ರದಾಯಿಕ ಅಂತರ್ಜಲ ತಜ್ಞ ನವಿಲುಮಾರನ ಹಳ್ಳಿ ರಾಮೇಗೌಡ ಅವರಿಗೆ ರಾಷ್ಟ್ರಕವಿ ಕುವೆಂಪು ಕೃಷಿ ಚೇತನ ಪ್ರಶಸ್ತಿ ನೀಡಲಾಯಿತು.

ರಾಷ್ಟ್ರಕವಿ ಕುವೆಂಪು ನೆನಪಿನ ಕವಿಗೋಷ್ಠಿಯನ್ನು ಹಾಸನದ ಸಾಹಿತಿ ಜಯಶ್ರೀ ಕೃಷ್ಣ ಉದ್ಘಾಟಿಸಿದರು. ವಿಶೇಷ ಚೇತನ ಕವಿ ಬಂಡಿಹೊಳೆ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಸವಿತಾ ರವಿಶಂಕರ್ ಮುಖ್ಯ ಅತಿಥಿಯಾಗಿದ್ದರು.