ವಿರೋಧ ಪಕ್ಷ ನಾಯಕ ಆರ್‌.ಅಶೋಕ್‌ಗೆ ವಜ್ರದ ಕಿರೀಟ ಹಾಕಬೇಕಿದೆ : ನಿರ್ಮಲಾನಂದನಾಥ ಶ್ರೀಗಳು

| N/A | Published : Feb 18 2025, 12:35 AM IST / Updated: Feb 18 2025, 11:34 AM IST

ವಿರೋಧ ಪಕ್ಷ ನಾಯಕ ಆರ್‌.ಅಶೋಕ್‌ಗೆ ವಜ್ರದ ಕಿರೀಟ ಹಾಕಬೇಕಿದೆ : ನಿರ್ಮಲಾನಂದನಾಥ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಮಗ್ಗುಲಲ್ಲೇ ಹರಿಯುವ ಹೇಮಾವತಿ ನದಿಗೆ ಇತ್ತೀಚಿಗೆ ಗಂಗಾ ಆರತಿ ಪೂಜೆ ನೆರವೇರಿಸಲಾಯಿತು.

  ಸಕಲೇಶಪುರ :  ಪಟ್ಟಣದ ಮಗ್ಗುಲಲ್ಲೇ ಹರಿಯುವ ಹೇಮಾವತಿ ನದಿಗೆ ಇತ್ತೀಚಿಗೆ ಗಂಗಾ ಆರತಿ ಪೂಜೆ ನೆರವೇರಿಸಲಾಯಿತು.

ಸಂಜೆ 6 ಗಂಟೆಯ ವೇಳೆಗೆ ನಿರ್ಮಲನಂದಾನಾಥ ಸ್ವಾಮೀಜಿ ಇತರೆ ಹಲವಾರು ಸ್ವಾಮೀಜಿಗಳ ಜೊತೆ ಪುರಪ್ರವೇಶ ಮಾಡಿದರು. ಹೇಮಾವತಿ ಪ್ರತಿಮೆಗೆ ಹಾರ ಹಾಕಿ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಹೊಳೆಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಲೋಕಕಲ್ಯಾಣಕ್ಕಾಗಿ ನಡೆದ ಹೋಮದಲ್ಲಿ ಕೆಲಕಾಲ ಭಾಗಿಯಾಗಿ ನಂತರ ಗಂಗಾ ಆರತಿ ಮಾದರಿಯ ಹೇಮ ಆರತಿಯಲ್ಲಿ ಭಾಗಿಯಾಗಿದ್ದರು. ಹೇಮ ಆರತಿ ವಿಶಿಷ್ಟವಾಗಿದ್ದು ನಾಥ ಪರಂಪರೆಯ ರೀತಿಯಲ್ಲಿ ಹೇಮಾವತಿ ನದಿ ತೀರದಲ್ಲಿ ವಿಶೇಷವಾಗಿ ಮಾಡಿದ ಮಂಟಪದಲ್ಲಿ ಹೇಮಾವತಿಗೆ ಪೂಜೆ ಸಲ್ಲಿಸಲಾಯಿತು.

ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಮಠವು ಯಾವುದೇ ಜಾತಿ ಭೇದ ಮಾಡದೆ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತಿದೆ. ಬಾಲಗಂಗಾಧರನಾಥ ಸ್ವಾಮೀಜಿ ಹಾಕಿಕೊಟ್ಟ ಮಾರ್ಗದಲ್ಲೆ ನಿರ್ಮಲಾನಂದನಾಥ ಶ್ರೀಗಳು ಮುಂದುವರಿಯುತ್ತಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಆದಿಚುಂಚನಗಿರಿ ಮಠ ಮಾತ್ರವಲ್ಲದೆ ಇತರ ಹಲವಾರು ಮಠಗಳು ಅಭಿವೃದ್ಧಿ ಕಾಣುತ್ತಿದೆ. ನಾವು ಆದಿಚುಂಚನಗಿರಿ ಮಠದ ಪರಂಪರೆಯನ್ನೇ ಅನುಸರಿಸುತ್ತೇವೆ. ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಈ ಹಿಂದೆ ಕಂದಾಯ ಸಚಿವರಾಗಿದ್ದಾಗ ನಮ್ಮ ಮಠಕ್ಕೆ 83 ಎಕರೆ ಜಾಗ ನೀಡಿದ್ದರು. ಅವರಿಗೆ ನಾವು ವಜ್ರದ ಕಿರೀಟ ಹಾಕಬೇಕಾಗಿದೆ ಎಂದರು.

ಮಂಟಪವನ್ನು ವಿದ್ಯುತ್ ದೀಪಾಲಂಕಾರದಿಂದ ಅಲಂಕೃತಗೊಳಿಸಲಾಗಿತ್ತು. ಸಕಲೇಶ್ವರಸ್ವಾಮಿ ದಿವ್ಯ ರಥೋತ್ಸವ ಸಹ ಇದ್ದಿದ್ದರಿಂದ ಸಾವಿರಾರು ಮಂದಿ ಗಂಗಾ ಆರತಿಯನ್ನು ಕಣ್ತುಂಬ ವೀಕ್ಷಿಸಿ ಸಂತೋಷ ಪಟ್ಟರು. ನಂತರ ಸಾವಿರಾರು ಜನರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಶಾಸಕ ಸಿಮೆಂಟ್ ಮಂಜು, ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಎಚ್.ಎಂ ವಿಶ್ವನಾಥ್, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ, ಬಿಜೆಪಿ ಮುಖಂಡ ಪುನೀತ್ ಬನ್ನಹಳ್ಳಿ, ಹೊಳೆಮಲ್ಲೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ದೂಲ್‌ರಾಜ್, ತಹಸೀಲ್ದಾರ್ ಮೇಘನಾ, ಮಾದಾರ ಚನ್ನಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.